ಭಾರತಕ್ಕೆ ಮತ್ತೊಂದು ಕೊರೊನಾ ಭೀತಿ
ಲಖನೌ, ಜು. ೯: ವ್ಯಾಪಕವಾಗಿ ಹರಡಬಲ್ಲ ಕೋವಿಡ್-೧೯ನ ಕಪ್ಪಾ ತಳಿ ರೂಪಾಂತರ ಸೋಂಕುಗಳು ಉತ್ತರ ಪ್ರದೇಶದಲ್ಲಿ ಪತ್ತೆಯಾಗಿದೆ. ಕಪ್ಪಾ ತಳಿಯ ಎರಡು ಪ್ರಕರಣಗಳು ಇಲ್ಲಿ ಪತ್ತೆಯಾಗಿರುವುದಾಗಿ ರಾಜ್ಯ ಸರ್ಕಾರ ಹೇಳಿದೆ. ಅಧಿಕೃತ ಹೇಳಿಕೆಯ ಪ್ರಕಾರ ಲಖನೌದ ಕಿಂಗ್ ಜಾರ್ಜ್ ವೈದ್ಯಕೀಯ ಕಾಲೇಜಿನಲ್ಲಿನ ಮಾದರಿಗಳನ್ನು ಪರೀಕ್ಷೆಗೊಳಪಡಿಸಿದಾಗ ಈ ತಳಿ ಪತ್ತೆಯಾಗಿದೆ. ಶುಕ್ರವಾರ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಕಳೆದ ಕೆಲವು ದಿನಗಳಲ್ಲಿ ಇಲ್ಲಿನ ಕಿಂಗ್ ಜಾರ್ಜ್ ವೈದ್ಯಕೀಯ ಕಾಲೇಜಿನಲ್ಲಿ ೧೦೯ ಮಾದರಿಗಳ ಜೀನೋಮ್ ಪರೀಕ್ಷೆಗಳನ್ನು ಮಾಡಲಾಗಿದೆ. ಈಗಾಗಲೇ ಉತ್ತರ ಪ್ರದೇಶದಲ್ಲಿ ಡೆಲ್ಟಾ ರೂಪಾಂತರ ಕೂಡ ಪತ್ತೆಯಾಗಿದ್ದು, ಆ ಮೂಲಕ ಉತ್ತರ ಪ್ರದೇಶದಲ್ಲಿ ಎರಡು ರೂಪಾಂತರಗಳು ಪತ್ತೆಯಾದಂತಾಗಿದೆ. ಈ ಎರಡೂ ರೂಪಾಂತರಗಳು ರಾಜ್ಯಕ್ಕೆ ಹೊಸತಲ್ಲ. ರಾಜ್ಯದಲ್ಲಿ ಜೀನೋಮ್ ಅನುಕ್ರಮಣಿಕೆಯ ಸೌಲಭ್ಯವನ್ನು ಹೆಚ್ಚಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಆರೋಗ್ಯ) ಅಮಿತ್ ಮೋಹನ್ ಪ್ರಸಾದ್ ಅವರು, ಜೀನೋಮ್ ಸೀಕ್ವೆನ್ಸಿಂಗ್ ಎನ್ನುವುದು ಪ್ರಯೋಗಾಲಯ ಪ್ರಕ್ರಿಯೆಯಾಗಿದ್ದು, ಇದು ರೂಪಾಂತರಗಳನ್ನು ನಿರೂಪಿಸಲು ಮತ್ತು ರೋಗ ಪತ್ತೆಹಚ್ಚಲಿರುವ ವಿಧಾನವಾಗಿದೆ. ಪ್ರಸ್ತುತ, ಉತ್ತರ ಪ್ರದೇಶ ರಾಜ್ಯದಲ್ಲಿ ದೈನಂದಿನ ಸಕಾರಾತ್ಮಕ ದರವು ಶೇ. ೦.೦೪ ಆಗಿದೆ. ಈ ಹಿಂದೆ ಈ ಕಪ್ಪಾ ರೂಪಾಂತರದ ಪ್ರಕರಣಗಳು ರಾಜ್ಯದಲ್ಲಿ ಕಂಡುಬAದಿವೆ ಎಂದು ಹೇಳಿದರು. ಈ ರೂಪಾಂತರಿ ಬಗ್ಗೆ ಚಿಂತೆ ಮಾಡುವ ಅಗತ್ಯವಿಲ್ಲ. ಇದು ಕೊರೊನಾ ವೈರಸ್‌ನ ಒಂದು ರೂಪಾಂತರವಾಗಿದೆ ಮತ್ತು ಅದರ ಚಿಕಿತ್ಸೆಯು ಸಾಧ್ಯವಿದೆ. ಎಚ್ಚರಿಕೆಯ ಕ್ರಮವಾಗಿ ಪೀಡಿತ ಜಿಲ್ಲೆಗಳ ಹೆಸರುಗಳು ಅಥವಾ ಅದರ ಮೂಲದ ಸ್ಥಳಗಳನ್ನು ಬಹಿರಂಗಪಡಿಸಲಿಲ್ಲ ಎಂದು ಪ್ರಸಾದ್ ಹೇಳಿದರು. ಸೋಂಕಿನ ಎರಡನೆಯ ಅಲೆಯ ನಡುವೆಯೇ ಡೆಲ್ಟಾ, ಆಲ್ಫಾ ಮತ್ತು ಕಪ್ಪಾದಂತಹ ರೂಪಾಂತರಗಳು ಹೆಚ್ಚು ಹರಡುತ್ತವೆ ಎಂದು ಹೇಳಲಾಗುತ್ತಿರುವುದರಿಂದ ರಾಜ್ಯ ಸರ್ಕಾರಗಳು ಹೆಚ್ಚಿನ ಜಾಗ್ರತೆ ವಹಿಸಿವೆ.
ಇನ್ನೂ ೧.೭೦ ಕೋಟಿ ಡೋಸ್ ಕೋವಿಡ್ ಲಸಿಕೆ ಇದೆ: ಕೇಂದ್ರ
ನವದೆಹಲಿ,ಜು. ೯: ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಬಳಿ ೧.೭೦ ಕೋಟಿಗೂ ಹೆಚ್ಚು ಡೋಸ್ ಕೋವಿಡ್-೧೯ ಲಸಿಕೆಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ. ಈವರೆಗೆ ಕೇಂದ್ರವು ರಾಜ್ಯಗಳಿಗೆ ೩೮.೧೮ (೩೮,೧೮,೯೭,೬೧೦) ಕೋಟಿ ಪ್ರಮಾಣದಷ್ಟು ಲಸಿಕೆ ಪೂರೈಸಿದ್ದು, ಪ್ರಸ್ತುತ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಬಳಕೆಯಾಗದ ಒಟ್ಟು ೧,೭೦,೧೯,೮೫೪ ಡೋಸ್ ಕೋವಿಡ್ ಲಸಿಕೆಗಳಿವೆ ಎಂದು ಹೇಳಿದೆ. ಶುಕ್ರವಾರ ಲಭ್ಯವಿರುವ ಮಾಹಿತಿಯ ಪ್ರಕಾರ, ತ್ಯಾಜ್ಯಗಳು ಸೇರಿದಂತೆ ಒಟ್ಟು ೩೬,೪೮,೭೭,೭೫೬ ಪ್ರಮಾಣದಷ್ಟು ಲಸಿಕೆಗಳು ಬಳಕೆಯಾಗಿದೆ. ಇನ್ನು ಕೆಲವೇ ದಿನಗಳಲ್ಲಿ ೨೩,೮೦,೦೮೦ ಡೋಸ್ ಲಸಿಕೆಗಳನ್ನು ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಿದೆ. ಭಾರತದಲ್ಲಿ ಜನವರಿ ೧೬ ರಂದು ಸ್ವದೇಶಿ ನಿರ್ಮಿತ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಕೊರೊನಾ ಲಸಿಕೆಗೆ ಪ್ರಧಾನಿ ಮೋದಿಯವರು ಚಾಲನೆ ನೀಡಿದ್ದು, ತಮ್ಮ ಜೀವವನ್ನೇ ಪಣಕ್ಕಿಟ್ಟು ಕೊರೊನಾ ವಿರುದ್ಧ ಹೋರಾಟ ಮಾಡುತ್ತಿರುವ ಕೊರೊನಾ ವಾರಿಯರ್ಸ್ಗೆ ಲಸಿಕೆಯ ಮೊದಲ ಆದ್ಯತೆಯನ್ನು ನೀಡಲಾಗಿತ್ತು. ಬಳಿಕ ೪೫ ವರ್ಷ ಮೇಲ್ಪಟ್ಟ ಎಲ್ಲಾ ನಾಗರಿಕರಿಗೆ ಲಸಿಕೆ ನೀಡಲಾಗಿತ್ತು. ಮೇ ೧ ರಿಂದ ೧೮-೪೫ ವರ್ಷ ವಯಸ್ಸಿನ ಎಲ್ಲರಿಗೂ ಲಸಿಕೆ ನೀಡಲಾಗುತ್ತಿದೆ. ಕೇಂದ್ರ ಸರ್ಕಾರ ಮಾಹಿತಿ ನೀಡಿರುವ ಪ್ರಕಾರ ಲಸಿಕೆ ಅಭಿಯಾನ ಆರಂಭವಾಗಿ ಇಲ್ಲಿಯವರೆಗೂ ಒಟ್ಟಾರೆ ೩೬,೮೯,೯೧,೨೨೨ ಮಂದಿಗೆ ಲಸಿಕೆಯನ್ನು ನೀಡಲಾಗಿದೆ ಎಂದು ತಿಳಿಸಿದೆ.
ಹೊಸ ಗೌಪ್ಯತಾ ನೀತಿ ಒಪ್ಪಿಕೊಳ್ಳುವಂತೆ ಒತ್ತಾಯವಿಲ್ಲ
ನವದೆಹಲಿ, ಜು. ೯: ದತ್ತಾಂಶ ಸಂರಕ್ಷಣಾ ಮಸೂದೆ ಜಾರಿಗೆ ಬರುವವರೆಗೂ ಹೊಸ ಗೌಪ್ಯತೆ ನೀತಿಯನ್ನು ಒಪ್ಪಿಕೊಳ್ಳುವಂತೆ ಬಳಕೆದಾರರನ್ನು ಒತ್ತಾಯಿಸುವುದಿಲ್ಲ ಎಂದು ದೆಹಲಿ ಹೈಕೋರ್ಟ್ಗೆ ವಾಟ್ಸಾಪ್ ಶುಕ್ರವಾರ ಸ್ಪಷ್ಟಪಡಿಸಿದೆ. ವಾಟ್ಸಾಪ್‌ನ ಹೊಸ ಗೌಪ್ಯತೆ ನೀತಿಯ ಬಗ್ಗೆ ತನಿಖೆ ನಡೆಸುವಂತೆ ಭಾರತದ ಸ್ಪರ್ಧಾ ಆಯೋಗ ಸಿಸಿಐ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಫೇಸ್‌ಬುಕ್ ಮತ್ತು ವಾಟ್ಸಾಪ್ ದೆಹಲಿ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಈ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಡಿ.ಎನ್. ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರಿದ್ದ ಪೀಠ ಇಂದು ವಿಚಾರಣೆ ನಡೆಸಿತು. ಈ ವೇಳೆ ಫೇಸ್‌ಬುಕ್ ಒಡೆತನದ ವಾಟ್ಸಾಪ್ ಇಂದು ಹೇಳಿಕೆ ನೀಡಿದ್ದು, ದತ್ತಾಂಶ ಸಂರಕ್ಷಣಾ ಮಸೂದೆ ಜಾರಿಗೆ ಬರುವವರೆಗೂ ಹೊಸ ಗೌಪ್ಯತೆ ನೀತಿಯನ್ನು ಒಪ್ಪಿಕೊಳ್ಳುವಂತೆ ಬಳಕೆದಾರರನ್ನು ಒತ್ತಾಯಿಸುವುದಿಲ್ಲ ಎಂದು ಹೇಳಿದೆ. ವಾಟ್ಸಾಪ್ ಪರ ನ್ಯಾಯಾಲಯಕ್ಕೆ ಮಾಹಿತಿ ನೀಡಿರುವ ಹಿರಿಯ ವಕೀಲ ಹರೀಶ್ ಸಾಳ್ವೆ ಅವರು, ಹೊಸ ನೀತಿಯನ್ನು ತಡೆ ಹಿಡಿಯಲು ನಿರ್ಧರಿಸಲಾಗಿದ್ದು, ಯಾವುದೇ ಬಳಕೆದಾರರೂ ಹೊಸ ಗೌಪ್ಯತಾ ನೀತಿಯನ್ನು ಒಪ್ಪಿಕೊಳ್ಳುವಂತೆ ನಾವು ಒತ್ತಾಯಿಸುವುದಿಲ್ಲ. ಆದಾಗ್ಯೂ ವಾಟ್ಸಾಪ್ ತನ್ನ ಬಳಕೆದಾರರಿಗೆ ನವೀಕರಣ(ಅಪ್ಡೇಟ್)ವನ್ನು ಪ್ರದರ್ಶಿಸುವುದನ್ನು ಮುಂದುವರಿಸುತ್ತದೆ ಎಂದು ಹೇಳಿದ್ದಾರೆ. ಇದೇ ವೇಳೆ ಹೊಸ ಗೌಪ್ಯತೆ ನೀತಿಯನ್ನು ಒಪ್ಪಿಕೊಳ್ಳದವರ ವಾಟ್ಸಾಪ್ ಬಳಕೆಯನ್ನು ಮಿತಿಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
೧೨-೧೮ ವರ್ಷ ವಯಸ್ಸಿನವರಿಗೆ ಸೆಪ್ಟೆಂಬರ್‌ನಿAದ ಕೋವಿಡ್ ಲಸಿಕೆ
ನವದೆಹಲಿ, ಜು. ೯: ಝೈಡಸ್ ಕ್ಯಾಡಿಲಾ ಕೋವಿಡ್ ಲಸಿಕೆಯು ಸೆಪ್ಟೆಂಬರ್‌ವೇಳೆಗೆ ೧೨ ರಿಂದ ೧೮ ವರ್ಷ ವಯಸ್ಸಿನವರಿಗೆ ಲಭ್ಯವಾಗಲಿದೆ ಎಂದು ಲಸಿಕೆ ನಿರ್ವಹಣೆಗೆ ಸಂಬAಧಿಸಿದ ರಾಷ್ಟಿçÃಯ ತಜ್ಞರ ಸಮಿತಿ ಮುಖ್ಯಸ್ಥ ಡಾ. ಎನ್.ಕೆ. ಆರೋರಾ ತಿಳಿಸಿದ್ದಾರೆ. ಈಗಾಗಲೇ ದೇಶದಲ್ಲಿ ಕೋವಿಡ್-೧೯ ೩ನೇ ಅಲೆಯ ಭೀತಿ ಎದುರಾಗಿದ್ದು, ಮೂರನೇ ಅಲೆ ವೇಳೆ ಮಕ್ಕಳಿಗೆ ಹೆಚ್ಚಾಗಿ ಸೋಂಕು ತಗಲುವ ಅಪಾಯವಿದೆ ಎಂದು ಕೆಲ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಮಕ್ಕಳಿಗೂ ಕೋವಿಡ್ ಲಸಿಕೆ ನೀಡುವ ಕುರಿತು ಕೇಂದ್ರ ಸರ್ಕಾರ ಗಂಭೀರ ಆಲೋಚನೆಯಲ್ಲಿರುವಂತೆಯೇ ಇತ್ತ ಝೈಡಸ್ ಕ್ಯಾಡಿಲಾ ಕೋವಿಡ್ ಲಸಿಕೆಯು ಸೆಪ್ಟೆಂಬರ್‌ವೇಳೆಗೆ ೧೨ ರಿಂದ ೧೮ ವರ್ಷ ವಯಸ್ಸಿನವರಿಗೆ ಲಭ್ಯವಾಗಲಿದೆ ಎಂದು ಲಸಿಕೆ ನಿರ್ವಹಣೆಗೆ ಸಂಬAಧಿಸಿದ ರಾಷ್ಟಿçÃಯ ತಜ್ಞರ ಸಮಿತಿ ಮುಖ್ಯಸ್ಥ ಡಾ. ಎನ್.ಕೆ. ಆರೋರಾ ಹೇಳಿದ್ದಾರೆ. ಝೈಡಸ್ ಕ್ಯಾಡಿಲಾ ಲಸಿಕೆಯ ತುರ್ತು ಬಳಕೆಗೆ ಕೆಲವೇ ವಾರಗಳಲ್ಲಿ ಅನುಮೋದನೆ ದೊರೆಯಲಿದೆ ಎಂದು ಅವರು ಸಂದರ್ಶನವೊAದರಲ್ಲಿ ಹೇಳಿದ್ದಾರೆ. ಸೆಪ್ಟೆಂಬರ್ ಅಂತ್ಯದ ವೇಳೆಗೆ ೧೨ ರಿಂದ ೧೮ ವರ್ಷ ವಯಸ್ಸಿನವರಿಗೆ ಕೋವ್ಯಾಕ್ಸಿನ್ ಲಸಿಕೆ ಕೂಡ ಲಭ್ಯವಾಗುವ ನಿರೀಕ್ಷೆ ಇದೆ. ಈ ವಯಸ್ಸಿನವರಿಗಾಗಿ ಕೋವ್ಯಾಕ್ಸಿನ್ ಲಸಿಕೆಯ ಮೂರನೇ ಹಂತದ ಪ್ರಯೋಗ ನಡೆಯುತ್ತಿದೆ. ಮೂರನೇ ತ್ರೈಮಾಸಿಕ ಅವಧಿಯಲ್ಲಿ ಅಥವಾ ಜನವರಿ-ಫೆಬ್ರವರಿ ಆರಂಭದ ವೇಳೆಗೆ ೨ ವರ್ಷ ಮೇಲ್ಪಟ್ಟವರ ಬಳಕೆಗೂ ಕೋವ್ಯಾಕ್ಸಿನ್ ಲಭ್ಯವಾಗುವ ನಿರೀಕ್ಷೆ ಇದೆ ಎಂದು ಅವರು ಹೇಳಿದರು. ಶಾಲೆ ತೆರೆಯುವ ವಿಷಯ ಮತ್ತು ಇತರ ವಿಷಯಗಳು ಬಹಳ ಮುಖ್ಯ ಮತ್ತು ಅವುಗಳನ್ನು ಸಕ್ರಿಯವಾಗಿ ಚರ್ಚಿಸಲಾಗುತ್ತಿದೆ. ಲಸಿಕೆ ವಿಭಾಗದ ಮುಖ್ಯಸ್ಥರ ರಾಷ್ಟಿçÃಯ ತಜ್ಞರ ಗುಂಪು ದೇಶದ ಮಕ್ಕಳಿಗೆ ಲಸಿಕೆ ಹಾಕುವತ್ತ ಗಮನ ಹರಿಸಿದೆ. ಏಕೆಂದರೆ ಕೋವಿಡ್-೧೯ನ ಮೂರನೇ ತರಂಗವು ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಬಹುದು ಎಂದು ಅನೇಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ನೂತನ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಅಧಿಕಾರ ಸ್ವೀಕರಿಸಿದ ಬಳಿಕ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ್ದು, ದೇಶದ ೭೩೬ ಜಿಲ್ಲೆಗಳಲ್ಲಿ ಮಕ್ಕಳ ಕೇಂದ್ರಗಳನ್ನು ಸ್ಥಾಪಿಸಲು ಆರೋಗ್ಯ ಮೂಲಸೌಕರ್ಯ ಪ್ಯಾಕೇಜ್ ಜಾರಿಗೆ ತರಲು ಸರ್ಕಾರ ಯೋಜಿಸುತ್ತಿದೆ. ಹಲವಾರು ರಾಜ್ಯ ಸರ್ಕಾರಗಳು ಸಹ ಮಕ್ಕಳಿಗಾಗಿ ಸುಲಭವಾಗಿ ವ್ಯವಸ್ಥೆ ಮಾಡುತ್ತಿವೆ ಎಂದು ಅವರು ಹೇಳಿದರು.