ಚೆಟ್ಟಳ್ಳಿ, ಜು. ೯: ಚೆಟ್ಟಳ್ಳಿಯಲ್ಲಿ ಕೊರೊನಾ ಪ್ರಕರಣಗಳು ಒಂದೆರಡು ದಿನಗಳಲ್ಲಿ ೧೯ ಪ್ರಕರಣ ಕಂಡುಬAದ ಹಿನ್ನೆಲೆ ಚೆಟ್ಟಳ್ಳಿ ಪಂಚಾಯಿತಿ ವತಿಯಿಂದ ಧ್ವನಿ ವರ್ಧಕದ ಮೂಲಕ ತಾ. ೧೦ ರಂದು ತಮ್ಮ ಆರೋಗ್ಯದ ಹಿತದೃಷ್ಠಿಯಿಂದ ಎಲ್ಲರೂ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ತಿಳಿಸಿದ್ದಾರೆ.

ಪೂರ್ವಾಹ್ನ ೧೦ ಗಂಟೆಯಿAದ ಮಧ್ಯಾಹ್ನ ೧ ಗಂಟೆಯವರೆಗೆ ಚೆಟ್ಟಳ್ಳಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಕೋವಿಡ್ ಪರೀಕ್ಷಾ ಕೇಂದ್ರವನ್ನು ತೆರೆಯಲಾಗುವುದೆಂದು ಚೆಟ್ಟಳ್ಳಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಂದೀಶ್ ಕುಮಾರ್ ಬಿ.ಸಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.