ಗೋಣಿಕೊಪ್ಪಲು, ಜು.೮: ಇತ್ತೀಚಿನ ದಿನಗಳಲ್ಲಿ ವಾಣಿಜ್ಯ ನಗರ ಗೋಣಿಕೊಪ್ಪಲುವಿನಲ್ಲಿ ಸ್ಕೂಟರ್, ಬೈಕ್ ಕಳ್ಳತನ ರಾಜಾರೋಷವಾಗಿ ನಡೆಯುತ್ತಿದೆ.
ಇದಕ್ಕೆ ಪುಷ್ಟಿ ನೀಡುವಂತೆ ಗುರುವಾರ ಮಧ್ಯಾಹ್ನ ೧೨ .೧೫ ಕ್ಕೆ ನಗರದ ನಿವಾಸಿ ಹೆಚ್.ಆರ್. ಮಧು ಎಂಬವರ ಸ್ಕೂಟರ್ ಕಳ್ಳತನವಾಗಿದೆ. ನಂತರ ಕಳ್ಳತನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಹರಿದಾಡುತ್ತಿದ್ದಂತೆಯೇ ಕಳ್ಳತನ ಮಾಡಿದ ವ್ಯಕ್ತಿ ಸ್ಕೂಟರ್ ಅನ್ನು ನಗರದ ಪಂಚಾಯಿತಿ ಮುಂಭಾಗ ನಿಲ್ಲಿಸಿ ತಲೆಮರೆಸಿಕೊಂಡಿದ್ದಾನೆ.
ಸ್ಕೂಟರ್ ಮಾಲೀಕ ಮಧು ಮಧ್ಯಾಹ್ನ ಕಾರ್ಯನಿಮಿತ್ತ, ನಗರದ ಪಂಚಾಯಿತಿ ಮುಂಭಾಗ ನಿಲ್ಲಿಸಿ ತಲೆಮರೆಸಿಕೊಂಡಿದ್ದಾನೆ.
ಸ್ಕೂಟರ್ ಮಾಲೀಕ ಮಧು ಮಧ್ಯಾಹ್ನ ಕಾರ್ಯನಿಮಿತ್ತ, (ಮೊದಲ ಪುಟದಿಂದ) ಮರಳಿ ಬರುವ ಹಿನ್ನೆಲೆಯಲ್ಲಿ ಸ್ಕೂಟರ್ ನಲ್ಲಿಯೇ ಕೀ ಬಿಟ್ಟು ತೆರಳಿದ್ದರು. ಆದರೆ ಅಂಗಡಿಯಲ್ಲಿ ಸ್ನೇಹಿತರೊಬ್ಬರು ಎದುರಾದ ಕಾರಣ ಯೋಗಕ್ಷೇಮ ವಿಚಾರಿಸಿ, ವಾಪಾಸು ಬರುವ ವೇಳೆ ಸ್ಕೂಟರ್ ನಿಲ್ಲಿಸಿದ್ದ ಸ್ಥಳದಲ್ಲಿ ಇರಲಿಲ್ಲ.
ಕೂಡಲೇ ಗೋಣಿಕೊಪ್ಪ ಪೊಲೀಸ್ ಠಾಣೆಗೆ ದೂರು ನೀಡಿದ ಸ್ಕೂಟರ್ ಮಾಲೀಕರು ಸಮೀಪದ ಬೇಕರಿಯಲ್ಲಿ ಅಳವಡಿಸಿದ್ದ ಸಿ.ಸಿ.ಕ್ಯಾಮರಾ ಪರಿಶೀಲನೆ ನಡೆಸಿದ ವೇಳೆ ವ್ಯಕ್ತಿಯೋರ್ವ ನಿಲ್ಲಿಸಿದ್ದ ಸ್ಕೂಟರ್ ಅನ್ನು ಕಳ್ಳತನ ಮಾಡಿ ಹೋಗುತ್ತಿರುವ ಚಿತ್ರ ಸೆರೆಯಾಗಿತ್ತು.
ಈ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಕೂಡಲೇ ಹರಿಯ ಬಿಡಲಾಗಿತ್ತು. ಸಂಜೆ ನಾಲ್ಕು ಗಂಟೆಯ ವೇಳೆ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಕಚೇರಿಗೆ ತೆರಳಿದ ವ್ಯಕ್ತಿಯೋರ್ವರು ಕಚೇರಿಗೆ ತೆರಳಿದ ವ್ಯಕ್ತಿಯೋರ್ವರು ಅಲ್ಲಿದ್ದ ವ್ಯಕ್ತಿಯನ್ನು ಗಮನಿಸಿದ್ದಾರೆ. ಆತನ ಕೈ,ಕಾಲಿಗೆ ಪೆಟ್ಟಾಗಿ ರಕ್ತ ಸ್ರಾವವಾಗುತ್ತಿರುವುದನ್ನು ಗಮನಿಸಿ ಆತನ ಬಳಿ ತೆರಳಿದಾಗ ಆತ ಇವರನ್ನು ಕಂಡು ಗಾಭರಿಗೊಂಡು ಕ್ಷಣಾರ್ಧದಲ್ಲಿ ಸ್ಥಳ ದಿಂದ ಕಾಲ್ಕಿತ್ತಿದ್ದಾನೆ.
ನಂತರ ನೋಡಿದಾಗ ಜಖಂಗೊAಡ ಸ್ಕೂಟರ್ ಸಮೀಪದಲ್ಲಿತ್ತು. ವೀಡಿಯೋ ನೋಡಿದ್ದ ವ್ಯಕ್ತಿ ಸ್ಕೂಟರ್ ಮಾಲೀಕನಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಕೂಟರ್ ಕಳ್ಳತನ ಮಾಡಿದ ವ್ಯಕ್ತಿ ಇದನ್ನು ಬೀಳಿಸಿ ಜಖಂ ಮಾಡಿರುವುದಲ್ಲದೇ, ತನ್ನ ಕೈಕಾಲುಗಳಿಗೂ ಗಾಯ ಮಾಡಿಕೊಂಡಿದ್ದಾನೆ. ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಸ್ಕೂಟರ್, ಬೈಕ್ ಕಳ್ಳತನ ನಡೆಯುತ್ತಿದೆ. ಮಾಲೀಕರು ಬೇಜಾಬ್ದಾರಿ ತನದಿಂದ ಇಂತಹ ಪ್ರಕರಣಗಳು ಮರುಕಳಿಸುತ್ತಿವೆ. ವಾಹನ ಮಾಲೀಕರು ಸೈಡ್ ಲಾಕ್ ಹಾಕಿ, ನಿಲುಗಡೆ ಮಾಡಬೇಕು, ವಾಹನದಲ್ಲಿ ಕೀ ಬಿಟ್ಟು ತೆರಳದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
- ಹೆಚ್.ಕೆ.ಜಗದೀಶ್