ಗೋಣಿಕೊಪ್ಪಲು, ಜು. ೮: ಪಂಚಾಯಿತಿ ಅನುಮತಿಯಿಲ್ಲದೆ ಅಕ್ರಮವಾಗಿ ಕಟ್ಟಲಾಗುತ್ತಿದ್ದ ಕಾರ್‌ಶೆಡ್‌ನ ವಿಚಾರವನ್ನು ಪ್ರಶ್ನಿಸಿದ ಗ್ರಾಮ ಪಂಚಾಯಿತಿ ಸದಸ್ಯನ ಮೇಲೆ ಅತ್ಯಾಚಾರ ಯತ್ನ, ಜಾತಿ ನಿಂದನೆ ಹಾಗೂ ಕೊಲೆ ಬೆದರಿಕೆಗೆ ಸಂಬAಧಿಸಿದAತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದು ರಾಜಕೀಯ ಪ್ರೇರಿತವಾಗಿದೆ ಎಂದು ಕಾಂಗ್ರೆಸ್ ವಕ್ತಾರೆ ಕೇಚಮಾಡ ಸರಿತಾ ಪೂಣಚ್ಚ ಆರೋಪಿಸಿದ್ದಾರೆ.
ಘಟನೆ ಸಂದರ್ಭದಲ್ಲಿ ಸಾರ್ವಜನಿಕರು ಸ್ಥಳದಲ್ಲೇ ಇದ್ದು ಪರಸ್ಪರ ಮಾತಿನ ಚಕಮಕಿಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ಮೇಲ್ನೋಟಕ್ಕೆ ನೈಜ ಸಾಕ್ಷಿಯಾಗಿದೆ.
ಆದರೆ ಉದ್ದೇಶಪೂರ್ವಕವಾಗಿ ಗ್ರಾಮ ಪಂಚಾಯಿತಿ ಸದಸ್ಯನ ಮೇಲೆ ಗಂಭೀರವಾದ ಪ್ರಕರಣ ದಾಖಲು ಮಾಡಿರುವುದರ ಹಿಂದೆ ರಾಜಕೀಯ ಪಿತೂರಿ ಅಡಗಿದೆ. ಘಟನೆ ಸತ್ಯಾಸತ್ಯತೆ ಅರಿತು ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಸರಿತಾ ಒತ್ತಾಯಿಸಿದ್ದಾರೆ.
ಕಡಂಗ : ಗ್ರಾ.ಪಂ. ಸದಸ್ಯ ಪ್ರಮೋದ್ ಗಣಪತಿ ಅವರ ವಿರುದ್ಧ ಇಲ್ಲ ಸಲ್ಲದ ಆರೋಪದ ಹೊರಿಸಿ ದೂರು ದಾಖಲಾಗಿರುತ್ತದೆ.
ಸಾರ್ವಜನಿಕರ ಪರವಾಗಿ ಗ್ರಾಮ ಪಂಚಾಯಿತಿ ಸದಸ್ಯ ಸಮಸ್ಯೆ ಬಗ್ಗೆ ಕೇಳಲು ಹೋದ ಕಾರಣ ಅವರ ಮೇಲೆ ಸುಳ್ಳು ಆರೋಪ ಮಾಡಿ ದೂರು ನೀಡಿರುತ್ತಾರೆ. ಇದನ್ನು ಸೂಕ್ತ ರೀತಿಯಲ್ಲಿ ತನಿಖೆ ಮಾಡಬೇಕು ತನಿಖೆಯಾಗದೆ ಇದ್ದ ಪಕ್ಷದಲ್ಲಿ ಗೋಣಿಕೊಪ್ಪ ನಗರದಲ್ಲಿ ಪ್ರತಿಭಟನೆ ನಡೆಸುವುದಾಗಿ ಪೊನ್ನಂಪೇಟೆ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಅಂಕಿತ್ ಪೊನ್ನಪ್ಪ ತಿಳಿಸಿದ್ದಾರೆ.