ಪೊನ್ನAಪೇಟೆ, ಜು. ೯: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಥಮಿಕ ವಿಭಾಗದ ವತಿಯಿಂದ ಶಾಲಾ ದಾಖಲಾತಿ ಆಂದೋಲನವನ್ನು ವಿಭಿನ್ನ ರೀತಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಪೊನ್ನಂಪೇಟೆ ಗ್ರಾಮ ಪಂಚಾಯಿತಿಯ ಸ್ವಚ್ಛತಾ ವಾಹನದ ಜೊತೆಗೆ ಮೈಕ್ ಮೂಲಕ ಸರ್ಕಾರಿ ಶಾಲೆಯಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ಪ್ರಚಾರ ಮಾಡುತ್ತಾ ತೆರಳಿದ ಶಾಲಾ ಶಿಕ್ಷಕರ ಬಳಗ ಪಟ್ಟಣದ ವಿವಿಧ ಬಡಾವಣೆಗಳಿಗೆ ತೆರಳಿ ಕರ್ನಾಟಕ ಪಬ್ಲಿಕ್ ಶಾಲೆಗೆ ಮಕ್ಕಳನ್ನು ಸೇರಿಸುವಂತೆ ಪೋಷಕರಿಗೆ ಮನವರಿಕೆ ಮಾಡಿಕೊಟ್ಟರು.

ಈ ಸಂದರ್ಭ ಮುಖ್ಯ ಶಿಕ್ಷಕ ಬಿ.ಎಂ. ವಿಜಯ್, ಪೊನ್ನಂಪೇಟೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪುಟ್ಟರಾಜು, ಪೊನ್ನಂಪೇಟೆ ಉಪ ಠಾಣಾಧಿಕಾರಿ ಸುಂದರೇಶ್, ಶಿಕ್ಷಕರಾದ ವಿ.ಜೆ. ಫಿಲೋಮಿನ, ಎಂ.ಎ. ಜಾನ್ಸಿ, ಎಂ.ಎನ್. ಶಕೀಲಾ ಭಾನು, ಹೆಚ್.ಸಿ. ಮಂಗಳಾAಗಿ, ಸಿ.ಪಿ. ಗಂಗಾ ಮಣಿ, ಐ.ಎಂ. ರೋಸಿ, ಎನ್. ನಿಂಗರಾಜು, ಹೆಚ್. ಗಂಗಮ್ಮ, ಕೆ.ಆರ್. ವಿನಿತ, ಟಿ.ಎಸ್. ಮಹೇಶ್, ಅಕ್ಷರ ದಾಸೋಹ ಅಡಿಗೆ ಸಿಬ್ಬಂದಿ ವರ್ಗ, ಪಂಚಾಯಿತಿ ಸಿಬ್ಬಂದಿ ಇದ್ದರು.