ಗೋಣಿಕೊಪ್ಪಲು, ಜು.೮: ಗೋಣಿಕೊಪ್ಪಲುವಿನ ಹಿರಿಯ ಕೈಗಾರಿಕೋದ್ಯಮಿ, ವಿವಿಧ ಸಂಘ,ಸAಸ್ಥೆಯ ಸ್ಥಾಪಕ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ರಾಮಚಾರ್ ನಿಧನದ ಹಿನ್ನೆಲೆಯಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು. ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಕಡೆಮಾಡ ಸುನಿಲ್ ಮಾದಪ್ಪ ಅಧ್ಯಕ್ಷತೆಯಲ್ಲಿ ನಗರದ ಚೇಂಬರ್ ಸಭಾಂಗಣದಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು. ಸಭೆಯಲ್ಲಿ ಉಪಾಧ್ಯಕ್ಷ ಪೊನ್ನಿಮಾಡ ಸುರೇಶ್,ಪ್ರಭಾಕರ್ ನೆಲ್ಲಿತ್ತಾಯ ನಿರ್ದೇಶಕ ಕಾಡ್ಯಮಾಡ ಗಿರೀಶ್ ಗಣಪತಿ, ಬಿ.ಎನ್.ಪ್ರಕಾಶ್, ಮನೋಹರ್, ಸೇರಿದಂತೆ ಇನ್ನಿತರ ಪ್ರಮುಖರು ದಿ.ರಾಮಚಾರ್ ಅವರ ಕುರಿತು ಮಾತನಾಡಿದರು. ಖಜಾಂಚಿ ವಿ.ಜಿ. ಮನೋಹರ್, ನಿರ್ದೇಶಕರಾದ ಮಲ್ಚಿರ ಗಾಂಧಿ ದೇವಯ್ಯ, ಪಿ.ಜಿ. ರಾಜಶೇಖರ್, ಬಿ.ಟಿ. ಗಣೇಶ್ ರೈ, ಮಾಚಿಮಾಡ ಅನಿತ, ರಶ್ಮಿ ಭಾನು ಪ್ರಕಾಶ್ ಉಪಸ್ಥಿತರಿದ್ದರು, ನಿರ್ದೇಶಕಿ ಚೇಂದAಡ ಸುಮಿ ಸುಬ್ಬಯ್ಯ ಪ್ರಾರ್ಥಿಸಿ, ಕಾರ್ಯದರ್ಶಿ ತೆಕ್ಕಡ ಕಾಶಿ ಸ್ವಾಗತಿಸಿ, ವಂದಿಸಿದರು.