ಸಿದ್ದಾಪುರ, ಜು. ೯: ಒಂಟಿ ಸಲಗವೊಂದು ಕಾರ್ಮಿಕನ ಮೇಲೆ ದಾಳಿ ನಡೆಸಲು ಮುಂದಾಗಿದ್ದು, ಕೂದಲೆಳೆಯ ಅಂತರದಿAದ ಪಾರಾಗಿದ್ದು, ಬೈಕ್‌ವೊಂದನ್ನು ಜಖಂಗೊಳಿಸಿರುವ ಘಟನೆ ಸಿದ್ದಾಪುರದ ಕರಡಿಗೋಡು ಬಳಿಯ ಅವರೆಗುಂದ ಸಮೀಪ ನಡೆದಿದೆ.

ಕರಡಿಗೋಡು ಗ್ರಾಮದ ಆರೆಂಜ್‌ಕೌAಟಿಯ ಕಾಫಿ ತೋಟವೊಂದರಲ್ಲಿ ಕೆಲಸ ಮಾಡಿಕೊಂಡಿರುವ ಮುರುಗನ್ ಎಂಬವರು ಶುಕ್ರವಾರದಂದು ಬೆಳಿಗ್ಗೆ ೭.೩೦ರ ಸಮಯಕ್ಕೆ ತನ್ನ ಬೈಕ್‌ನಲ್ಲಿ ಬರುತ್ತಿರುವ ಸಂದರ್ಭದಲ್ಲಿ ಕರಡಿಗೋಡು- ಅವರೆಗುಂದ ಮುಖ್ಯ ರಸ್ತೆಯ ಸಮೀಪದ ಕಾಫಿ ತೋಟವೊಂದರ ಒಳಗಿನಿಂದ ಏಕಾಏಕಿ ಒಂಟಿ ಸಲಗವೊಂದು ರಸ್ತೆಗೆ ಅಡ್ಡಲಾಗಿ ಬಂದಿದೆ. ನಂತರ ಬೈಕ್‌ನಲ್ಲಿ ತೆರಳುತ್ತಿದ್ದ ಮುರುಗನ್ ಮೇಲೆ ಆನೆ ದಾಳಿ ನಡೆಸಲು ಮುಂದಾಗಿದೆ. ಈ ಸಂದರ್ಭ ಆನೆ ದಾಳಿಯಿಂದ ತಪ್ಪಿಸಿಕೊಳ್ಳಲು ಬೈಕ್ ಅನ್ನು ಬಿಟ್ಟು ಮುರುಗನ್ ಓಡಿದ್ದಾರೆ. ಈ ಸಂದರ್ಭ ಕೋಪಗೊಂಡ ಸಲಗವು ಮುರುಗನ್‌ಗೆ ಸೇರಿದ ಬೈಕ್ (ಕೆಎ-೧೨ ಕ್ಯು-೪೯೭೬) ಅನ್ನು ಮನಬಂದAತೆ ಕಾಲಿನಿಂದ ತುಳಿದು ಜಖಂಗೊಳಿಸಿರುತ್ತದೆ. ಅದೃಷ್ಟವಶಾತ್ ಕಾರ್ಮಿಕ ಕೂದಲೆಳೆಯ ಅಂತರದಿAದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇತ್ತೀಚೆಗೆ ಇದೇ ಪುಂಡಾನೆಯು ಕರಡಿಗೋಡಿನಲ್ಲಿ ರಾತ್ರಿ ಪಾಳೆಯದಲ್ಲಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಪೌಲ್ ಎಂಬವರ ಮೇಲೆ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿತ್ತು. ಈ ಒಂಟಿ ಸಲಗವು ಆಗಿಂದಾಗ್ಗೆ ಮಾನವನನ್ನು ಅಟ್ಟಿಸಿಕೊಂಡು ಹೋಗುತ್ತಿದೆ. ಅಲ್ಲದೆ ಕಾಫಿ ತೋಟಗಳಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಿದೆ. ಕೂಡಲೇ ಈಭಾಗಮಂಡಲ, ಜು. ೯: ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆ ನಿಗದಿತ ಅವಧಿಯಲ್ಲಿ ಪ್ರಾರಂಭವಾದರೂ ನಂತರದ ದಿನಗಳಲ್ಲಿ ಮಳೆ ಇಳಿಮುಖಗೊಂಡಿದ್ದರಿAದ ಭಾಗಮಂಡಲ ವ್ಯಾಪ್ತಿಯಲ್ಲಿ ಭತ್ತದ ಕೃಷಿ ಕಾರ್ಯ ನಿಧಾನಗತಿಯಲ್ಲಿ ಸಾಗುತ್ತಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಅಧಿಕ ಮಳೆಯಾಗಿದ್ದು ಕಳೆದ ಒಂದು ತಿಂಗಳಿನಿAದ ರೈತರು ಭತ್ತದ ಕೃಷಿ ಕೆಲಸದಲ್ಲಿ ತೊಡಗಿಸಿ ಸಲಗವನ್ನು ಸೆರೆಹಿಡಿದು ಸ್ಥಳಾಂತರ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

-ವಾಸು ಎ.ಎನ್.