ಮಡಿಕೇರಿ, ಜು. ೯: ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮುಕ್ಕೋಡ್ಲುನಲ್ಲಿ ಮರಳು ತೆಗೆಯುತ್ತಿರುವ ಬಗ್ಗೆ ೧೧೨ ಗೆ ಬಂದ ಕರೆಯ ಆಧಾರದಲ್ಲಿ ಸ್ಥಳಕ್ಕೆ ತೆರಳಿದಾಗ, ಇಬ್ಬರು ವ್ಯಕ್ತಿ ಓಡಿಹೋಗಿದ್ದು, ಒಬ್ಬ ವ್ಯಕ್ತಿ ಸಿಕ್ಕಿದ್ದಾನೆ. ಒಂದು ಪಿಕಪ್ ಮರಳು, ಒಂದು ಮಜ್ದಾ ಲಾರಿ ವಶಪಡಿಸಿಕೊಂಡಿದ್ದು, ಮುಂದಿನ ಕ್ರಮದ ಬಗ್ಗೆ ಅಪರಾಧ ವಿಭಾಗಕ್ಕೆ ವಹಿಸಲಾಗಿದೆ.