ಸಿದ್ದಾಪುರ, ಜು. ೭: ಸಿದ್ದಾಪುರದ ಗುಹ್ಯ, ಕೂಡುಗದ್ದೆ ಡಿ.ವೈ.ಎಫ್.ಐ. ಗ್ರಾಮ ಸಮಿತಿ ವತಿಯಿಂದ ತೈಲ ಉತ್ಪನ್ನಗಳ ಬೆಲೆ ಏರಿಕೆ ಖಂಡಿಸಿ ಸಿದ್ದಾಪುರ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಯಿತು. ಸಂಘಟನೆಯ ಪದಾಧಿಕಾರಿಗಳು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಪದಾಧಿಕಾರಿಗಳಾದ ಪಿ.ಎ. ಜಾಫರ್, ಅನೂಶ್, ಪೀಟರ್, ಕೃಷ್ಣ, ಇನ್ನಿತರರು ಪಾಲ್ಗೊಂಡಿದ್ದರು.