ಶನಿವಾರಸಂತೆ, ಜು. ೭: ಸಮೀಪದ ಕೊಡ್ಲಿಪೇಟೆಯಲ್ಲಿ ಇತ್ತೀಚೆಗೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಅವರ ಜನ್ಮದಿನದ ಪ್ರಯುಕ್ತ

ದಾನಿ ಶಿವಪ್ರಸಾದ್ ಕೋವಿಡ್ ವಾರಿಯರ್ಸ್ಗೆ ಊಟದ ಜೊತೆ ಸಿಹಿ ವಿತರಿಸಿದರು.

ಕೋವಿಡ್ ಲಾಕ್‌ಡೌನ್ ಹಿನ್ನೆಲೆ ಹೊಟೇಲ್‌ಗಳು ಇಲ್ಲದಿದ್ದು, ಆಹಾರ ಸಿಗದ ಕಾರಣ ಶಿವಪ್ರಸಾದ್ ಸಂಗಡಿಗರ ಜೊತೆ ಜೂನ್ ೧ ರಿಂದ ಜುಲೈ ೪ರ ವರೆಗೂ ವಾರಿಯರ್ಸ್ ಹಾಗೂ ನಿರ್ಗತಿಕರಿಗೆ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಿದ್ದರು.

ತಾ. ೫ ರಿಂದ ಲಾಕ್‌ಡೌನ್ ಸಡಿಲ ಮಾಡಿರುವುದರಿಂದ ಮಧ್ಯಾಹ್ನದ ಊಟದ ವಿತರಣೆಯನ್ನು ಸ್ಥಗಿತಗೊಳಿಸುವುದಾಗಿ ಶಿವಪ್ರಸಾದ್ ತಿಳಿಸಿದ್ದಾರೆ.