ನವದೆಹಲಿ, ಜು.೭: ಪ್ರಧಾನಿ ನರೇಂದ್ರ ಮೋದಿ ತಮ್ಮ ಎರಡನೇ ಅಧಿಕಾರ ಅವಧಿಯಲ್ಲಿ ಮೊದಲ ಬಾರಿಗೆ ಸಚಿವ ಸಂಪುಟದಲ್ಲಿ ಮಹತ್ತರ ಬದಲಾವಣೆ ಮಾಡಿದ್ದು, ೪೩ ನೂತನ ಸಚಿವರು ಇಂದು ನವದೆಹಲಿಯ ರಾಷ್ಟçಪತಿ ಭವನದ ದರ್ಬಾರ್ ಹಾಲ್‌ನಲ್ಲಿ ಪದಗ್ರಹಣ ಮಾಡಿದ್ದಾರೆ. ಕರ್ನಾಟಕದ ನಾಲ್ವರು ಸಂಸದರುಗಳಾದ ಎ. ನಾರಾಯಣಸ್ವಾಮಿ, ಶೋಭಾ ಕರಂದ್ಲಾಜೆ, ರಾಜೀವ್ ಚಂದ್ರಶೇಖರ್, ಹಾಗೂ ಭಗವಂತ್ ಖೂಬಾ ಅವರಿಗೆ ನೂತನವಾಗಿ ಸಚಿವ ಸ್ಥಾನ ಲಭ್ಯವಾಗಿದೆ. ಆದರೆ, ಕರ್ನಾಟಕದ ಸಚಿವ ಸದಾನಂದ ಗೌಡ ಸೇರಿದಂತೆ ಒಟ್ಟು ೧೨ ಮಂದಿ ಕೇಂದ್ರದ ಪ್ರÀಮುಖ ಸಚಿವರುಗಳಿಗೆ ಕೊಕ್ ನೀಡಲಾಗಿದ್ದು, ಆ ಪೈಕಿ ಸಚಿವರಾಗಿದ್ದ ಗೆಹ್ಲೋಟ್ ಅವರು ರಾಜೀನಾಮೆ ನೀಡಿದ್ದರೂ ಈಗಾಗಲೇ ಅವರಿಗೆ ಕರ್ನಾಟಕದ ರಾಜ್ಯಪಾಲ ಹುದ್ದೆ ನೀಡಲಾಗಿದೆ.
ಬಹುತೇಕ ಯುವ ಮತ್ತು ಮಧ್ಯಮ ವಯೋಮಿತಿಯವರಿಗೆ ನೂತನ ಸಚಿವ ಸಂಪುಟದಲ್ಲಿ ಪ್ರಧಾನಿ ಮೋದಿ ಅವಕಾಶÀ ಕಲ್ಪಿಸಿದ್ದಾರೆ. ಅಲ್ಲದೆ, ಇತರ ಹಿಂದುಳಿದ ವರ್ಗ (ಒಬಿಸಿ) ವರ್ಗದ ಸದಸ್ಯರಿಗೆ, ಪರಿಶಿಷ್ಟ ಜಾತಿ, ವರ್ಗದ ಮಂದಿಗೂ ಸ್ಥಾನ ನೀಡಲಾಗಿದೆ. ೧೫ ಮಂದಿ ಕೇಂದ್ರದ ಕ್ಯಾಬಿನೆಟ್ ದರ್ಜೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದು, ಈ ಪೈಕಿ ೭ ಮಂದಿ ಹೊಸಬರಿಗೆ ಅವಕಾಶ ನೀಡಲಾಗಿದೆ. ಉಳಿದ ೮ ಮಂದಿಗೆ ರಾಜ್ಯ ಸಚಿವ ಸ್ಥಾನದಿಂದ ಬಡ್ತಿ ನೀಡಲಾಗಿದೆ. ಇತರ ೨೮ ಮಂದಿಗೆ ರಾಜ್ಯ ಸಚಿವ ಸ್ಥಾನ ಒದಗಿಸಲಾಗಿದೆ. ಸಚಿವರ ಕಾರ್ಯಕ್ಷಮತೆಯನ್ನು ಆಧರಿಸಿ ಮುಂಬಡ್ತಿ, ಕೊಕ್ ನೀಡಲಾಗಿದೆ.
ಒಟ್ಟು ೧೨ ಸಚಿವರು ಸಂಪುಟ ವಿಸ್ತರಣೆ ಹಿನ್ನೆಲೆ ಹೊಸ ಸಚಿವರಿಗೆ ಅವಕಾಶ ಮಾಡಿಕೊಡಲು ರಾಜೀನಾಮೆ ನೀಡಿದ್ದರು. ೬ ಕ್ಯಾಬಿನೆಟ್ ಸಚಿವರು, ಓರ್ವ ರಾಜ್ಯ ಖಾತೆ ಸಚಿವ (ಸ್ವತಂತ್ರ ನಿರ್ವಹಣೆ) ಹಾಗೂ ೫ ರಾಜ್ಯ ಖಾತೆ ಸಚಿವರು ರಾಜೀನಾಮೆ ನೀಡಿದ್ದಾರೆ. ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಸ್ಥಾನಕ್ಕೆ ಥಾವರಚಂದ್ ಗೆಹ್ಲೋಟ್ ರಾಜೀನಾಮೆ ಸಲ್ಲಿಸಿ ಈಗಾಗಲೇ ಕರ್ನಾಟಕದ ನೂತನ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ. ಇಂದು ರಾಜೀನಾಮೆ ನೀಡಿದವರು: ರವಿಶಂಕರ್ ಪ್ರಸಾದ್ (ಕಾನೂನು, ನ್ಯಾಯ, ಸಂವಹನ, ಐಟಿ ಹಾಗೂ ಎಲೆಕ್ಟಾçನಿಕ್ಸ್) ಪ್ರಕಾಶ್ ಜಾವ್ಡೇಕರ್ (ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ), ಹರ್ಷವರ್ಧನ್ (ಆರೋಗ್ಯ ಹಾಗೂ ಕುಟುಂಬ ಕಲ್ಯಾಣ) ಡಿ.ವಿ ಸದಾನಂದ ಗೌಡ (ರಸಗೊಬ್ಬರ, ರಾಸಾಯನಿಕ) ರಮೇಶ್ ಪೋಖ್ರಿಯಾಲ್ ನಿಶಾಂಕ್ (ಶಿಕ್ಷಣ) ಹಾಗೂ ಸಂತೋಷ್ ಕುಮಾರ್ ಗಂಗ್ವಾರ್ (ಕಾರ್ಮಿಕ ಹಾಗೂ ಉದ್ಯೋಗ ಖಾತೆ ರಾಜ್ಯ ಸಚಿವ, ಸ್ವತಂತ್ರ ನಿರ್ವಹಣೆ) ರಾಜೀನಾಮೆಯನ್ನು ರಾಷ್ಟçಪತಿಗಳು ಅಂಗೀಕರಿಸಿದ್ದಾರೆ.
ರಾಜೀನಾಮೆ ನೀಡಿದ ರಾಜ್ಯಖಾತೆ ಸಚಿವರುಗಳೆಂದರೆ: ಬಾಬುಲ್ ಸುಪ್ರಿಯೋ (ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ), ಧೋತ್ರೆ ಸಂಜಯ್ ಶಾಮರಾವ್ (ಶಿಕ್ಷಣ), ರಿಟಾನ್ ಲಾಲ್ ಕಟಾರಿಯಾ (ಜಲ ಶಕ್ತಿ), ಪ್ರತಾಪ್ ಚಂದ್ರ ಸಾರಂಗಿ (ಸೂಕ್ಷö್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು) ಮತ್ತು ದೇಬಶ್ರೀ ಚೌಧುರಿ (ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ).
ಕರ್ನಾಟಕದ ಪರವಾಗಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಕೇಂದ್ರ ಸಚಿವ ಸಂಪುಟ ಸೇರಿದ್ದಾರೆ. ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಗೊಂಡಿರುವ ರಾಜೀವ್ ಚಂದ್ರಶೇಖರ್ ಅವರೂ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಕರ್ನಾಟಕದ ಚಿತ್ರದುರ್ಗ ಬಿಜೆಪಿ ಸಂಸದ ಎ. ನಾರಾಯಣಸ್ವಾಮಿ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ. ಬೀದರ್ ಸಂಸದ ಭಗವಂತ ಖೂಬಾ ಕೇಂದ್ರ ಸಚಿವರಾಗಿ ನೇಮಕಗೊಂಡಿದ್ದಾರೆ.
ಉಳಿದAತೆ ಸಚಿವರುಗಳಾಗಿ ಇಂದು ಪ್ರಮಾಣ ವಚನ ಸೀಕರಿಸಿದವÀರು: ನಾರಾಯಣ ಟಾಟು ರಾಣೆ, ಸರ್ಬಾನಂದ ಸೋನೀವಾಲ್, ಡಾ. ವೀರೇಂದ್ರ ಕುಮಾರ್,, ಜ್ಯೋತಿರಾದಿತ್ಯ ಎಂ. ಸಿಂಧ್ಯ, ರಾಮಚಂದ್ರÀ ಪ್ರಸಾದ್ ಸಿಂಗ್, ಅಶ್ವಿನಿ ವೈಷ್ಣವ್, ಪಶುಪತಿ ಕುಮಾರ್ ಪಾರಸ್, ಕಿರಣ್ ರಿಜಿಜು, ರಾಜ್ ಕುಮಾರ್ ಸಿಂಗ್, ಹರ್ದೀಪ್ ಸಿಂಗ್ ಪುರಿ, ಮನ್ಸುಖ್ ಮಾಂಡವೀಯ, ಭೂಪೇಂದರ್ ಯಾದವ್, ಪರ್‌ಷೋತ್ತಂ ರುಪಾಲ, ಜಿ.ಕಿಶನ್ ರೆಡ್ಡಿ, ಅನುರಾಗ್ ಸಿಂಗ್ ಥಾಕೂರ್, ಪಂಕಜ್ ಚೌಧರಿ, ಅನುಪ್ರಿಯ ಸಿಂಗ್ ಪಟೇಲ್, ಸತ್ಯಪ್ರಿಯ ಸಿಂಗ್ ಬಾಘೇಲ್, ಭಾನು ಪ್ರತಾಪ್ ಸಿಂಗ್ ವರ್ಮ, ದರ್ಶನ ವಿಕ್ರಂ ಜಾರ್ದೋಷ್, ಮೀನಾಕ್ಷಿ ಲೇಖಿ, ಅನ್ನಪೂರ್ಣ ದೇವಿ, ಕೌಶಲ್ ಕಿಶೋರ್, ಅಜಯ್ ಭಟ್, ಬಿ.ಎಲ್ ವರ್ಮ, ಅಜಯ್ ಕುಮಾರ್, ಚೌಹಾಣ್ ದೇವುಸಿನ್ಹ್, ಕಪಿಲ್ ಮೋರೇಶ್ವರ್ ಪಾಟೀಲ್, ಸುಶ್ರೀ ಪ್ರತಿಮಾ ಭೌಮಿಕ್, ಡಾ, ಸುಭಾಶ್ ಸರ್ಕಾರ್, ಭಗವತ್ ಕಿಶನ್ ರಾವ್ ಕಾರಾದ್, ರಾಜ್ ಕುಮಾರ್ ರಂಜನ್ ಸಿಂಗ್, ಡಾ. ಭಾರತಿ ಪ್ರವೀಣ್ ಪವಾರ್, ಬಿಶ್ವೇಶ್ವರ್ ತುಡು, ಶಂತನು ಥಾಕೂರ್, ಡಾ. ಮುಂಜಪಾರ ಮಹೇಂದ್ರ ಭಾಯ್, ಜಾನ್ ಬಾರ್ಲ, ಎಲ್, ಮುರುಗನ್ ಹಾಗೂ ನಿತೀಶ್ ಪ್ರಾಮಾಣಿಕ್.