ಸೋಮವಾರಪೇಟೆ, ಜು.೭: ಹೊಲ ಗದ್ದೆಗಳಲ್ಲಿ ಕೃಷಿ ಕೈಗೊಂಡಿರುವ ಪ್ರಸ್ತುತ ಸನ್ನಿವೇಶದಲ್ಲಿ ಉತ್ತಮ ಮಳೆಯಾಗಲಿ ಎಂದು ಹೊಳೆ ಬಸವೇಶ್ವರ ದೇವರಿಗೆ ಪೂಜೆ ಸಲ್ಲಿಸಿದ ಕೆಲವೇ ಗಂಟೆಗಳಲ್ಲಿ ಮಳೆ ಸುರಿದಿದ್ದರಿಂದ ಹೊಸಳ್ಳಿ ಗ್ರಾಮಸ್ಥರು ಪುಳಕಗೊಂಡಿದ್ದಾರೆ.

ಈ ವ್ಯಾಪ್ತಿಯ ಗದ್ದೆ, ಹೊಲಗಳಲ್ಲಿ ಕೃಷಿ ಕಾರ್ಯ ಪ್ರಗತಿಯಲ್ಲಿದೆ. ಹಲವಷ್ಟು ಮಂದಿ ಶುಂಠಿ, ಜೋಳ, ಭತ್ತ ಕೃಷಿ ಕೈಗೊಂಡಿದ್ದಾರೆ. ಕಳೆದ ೧ ತಿಂಗಳಿನಿAದಲೂ ಮಳೆಯಾಗದ ಹಿನ್ನೆಲೆ ಕೃಷಿ ಬೆಳೆಗಳು ಕಳೆಗುಂದಲಾರAಭಿಸಿದ್ದವು. ಬೋರ್‌ವೆಲ್ ಸೌಕರ್ಯ ಇರುವವರು ಹೊಲ ಗದ್ದೆಗಳಿಗೆ ನೀರು ಹಾಯಿಸುತ್ತಿದ್ದರು.

ಇಂತಹ ಸಂದರ್ಭದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಹೊಸಳ್ಳಿ ಗ್ರಾಮಸ್ಥರು, ಮದಲಾಪುರ ವ್ಯಾಪ್ತಿಯ ಯಲಕನೂರು ಹೊಸಳ್ಳಿ ಗ್ರಾಮದಲ್ಲಿರುವ ಹೊಳೆ ಬಸವೇಶ್ವರ ದೇವರಿಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಬೆಳಿಗ್ಗೆ ೯ ಗಂಟೆಯಿAದ ಪ್ರಾರಂಭಗೊAಡ ಪೂಜೆಯಲ್ಲಿ ಮಧ್ಯಾಹ್ನದ ವೇಳೆಗೆ ಮಹಾಮಂಗಳಾರತಿ ನಡೆಯಿತು. ಈ ಸಂದರ್ಭ ಮಳೆ ಹನಿಗಳು ಉದುರಲಾರಂಭಿಸಿತು. ಹೊಳೆ ಬದಿಯಲ್ಲಿಯೇ ಅಡುಗೆ ಮಾಡಿ, ದೇವರಿಗೆ ನೈವೇದ್ಯ ಸಲ್ಲಿಸಿ ಸಂಜೆ ೪ ಗಂಟೆಯ ವೇಳೆಗೆ ಮನೆಗೆ ಹಿಂತಿರುಗಿದ ಸಂದರ್ಭ ಹೊಸಳ್ಳಿ ವ್ಯಾಪ್ತಿಯಲ್ಲಿ ೨೦ ಸೆಂಟ್ಸ್ನಷ್ಟು ಮಳೆ ಸುರಿದು ಗ್ರಾಮಸ್ಥರು ಪುಳಕಗೊಳ್ಳುವಂತೆ ಮಾಡಿತು.

ಕೃಷಿ ಚಟುವಟಿಕೆಗೆ ಹೆಚ್ಚಾಗಿ ಮಳೆಯನ್ನೇ ಆಶ್ರಯಿಸಿರುವ ಈ ಭಾಗದ ಕೃಷಿಕರು ಮಳೆಗಾಗಿ ಹೊಳೆ ಬಸವೇಶ್ವರ ದೇವರಲ್ಲಿ ಪ್ರಾರ್ಥನೆ ಸಲ್ಲಿಸುವುದು ಅನೂಚಾನವಾಗಿ ನಡೆದುಕೊಂಡು ಬಂದಿದೆ.

ಪ್ರತಿ ವರ್ಷ ಪ್ರತ್ಯೇಕ ದಿನಗಳಂದು ಯಲಕನೂರು, ಹೊಸಳ್ಳಿ, ಅರೆಯೂರು, ಮದಲಾಪುರ ಭಾಗದ ಮಂದಿ ದೇವರಿಗೆ ಪೂಜೆ ಸಲ್ಲಿಸಿ ಮಳೆಗಾಗಿ ಪ್ರಾರ್ಥನೆ ಸಲ್ಲಿಸುವ ವಾಡಿಕೆಯಿದ್ದು, ಪೂಜೆ ಸಲ್ಲಿಸಿದ ಒಂದೆರಡು ದಿನದಲ್ಲಿ ಮಳೆಯಾಗುತ್ತದೆ ಎಂಬ ನಂಬಿಕೆ ಇದೆ. ನಮ್ಮ ನಂಬಿಕೆಯನ್ನು ಹೊಳೆ ಬಸವೇಶ್ವರ ಈವರೆಗೆ ಸುಳ್ಳಾಗಿಸಿಲ್ಲ ಎಂದು ಗ್ರಾಮಸ್ಥ ಪ್ರಮೋದ್ ಅವರು ‘ಶಕ್ತಿ’ಯೊಂದಿಗೆ ಅಭಿಪ್ರಾಯ ಹಂಚಿಕೊAಡಿದ್ದಾರೆ.

ಹೊಸಳ್ಳಿ ಭಾಗದಲ್ಲಿ ೧ ತಿಂಗಳಿನಿAದಲೂ ಮಳೆ ಇರಲಿಲ್ಲ. ಬೆಳೆಗಳು ಒಣಗುವ ಹಂತಕ್ಕೆ ತಲುಪಿದ್ದವು. ಬೋರ್‌ವೆಲ್ ಇದ್ದವರು ನೀರು ಹಾಯಿಸುತ್ತಿದ್ದರು. ಆ ಸೌಕರ್ಯ ಇಲ್ಲದವರು ಮಳೆಗಾಗಿ ಕಾಯುತ್ತಿದ್ದರು. ಪ್ರತಿ ವರ್ಷದಂತೆ ಈ ವರ್ಷವೂ ಬಸವೇಶ್ವರ ದೇವರಿಗೆ ಪೂಜೆ ಸಲ್ಲಿಸಿ, ಮನೆಗೆ ಆಗಮಿಸಿದ ಸಂದರ್ಭ ನಿರೀಕ್ಷೆಯಷ್ಟು ಮಳೆ ಸುರಿದು ಕೃಷಿಗೆ ಪೂರಕವಾಯಿತು ಎಂದು ಗ್ರಾಮಸ್ಥರಾದ ಬೋಜೇಗೌಡ, ಶರತ್ ತಿಳಿಸಿದ್ದಾರೆ.

ಮದಲಾಪುರ ವ್ಯಾಪ್ತಿಯ ಯಲಕನೂರು ಹೊಸಳ್ಳಿ ಗ್ರಾಮದ ಹೊಳೆ ಬಸವೇಶ್ವರ ದೇವರಿಗೆ ಹೊಸಳ್ಳಿ ಗ್ರಾಮಸ್ಥರ ಪರವಾಗಿ ಪೂಜೆ ಸಲ್ಲಿಸುವ ಸಂದರ್ಭ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಲೋಕೇಶ್, ಉಪಾಧ್ಯಕ್ಷ ಪೊನ್ನಪ್ಪ, ಕಾರ್ಯದರ್ಶಿ ರಾಜೇಶ್, ಪ್ರಮುಖರಾದ ಪ್ರಮೋದ್, ಬೋಜೇಗೌಡ, ಶರತ್, ಕೃಷ್ಣಪ್ಪ ಸೇರಿದಂತೆ ೫೦ಕ್ಕೂ ಅಧಿಕ ಗ್ರಾಮಸ್ಥರು ಭಾಗಿಯಾಗಿದ್ದರು.