ಕೂಡಿಗೆ, ಜು. ೭: ಶಿರಂಗಾಲ ಗ್ರಾ. ಪಂ. ವ್ಯಾಪ್ತಿಯ ಹಾರಂಗಿ ಅಚ್ಚುಕಟ್ಟು ವ್ಯಾಪ್ತಿಗೆ ಒಳಪಡುವ ಉಪ ಕಾಲುವೆಗಳನ್ನು ಸರಿಪಡಿಸಲು ರೈತರು ಒತ್ತಾಯಿಸಿದ್ದಾರೆ. ಕೊಡಗಿನ ಗಡಿ ಭಾಗವಾದ ಶಿರಂಗಾಲ ಗ್ರಾ.ಪಂ. ವ್ಯಾಪ್ತಿಯಲ್ಲಿ ಹಾರಂಗಿ ನೀರು ಬಳಕೆಯ ಅಚ್ಚುಕಟ್ಟು ಪ್ರದೇಶ ಹೆಚ್ಚು ಇದೆ. ಆದರೆ ಎಡ ದಂಡೆಯ ನಾಲೆ ಉಪ ಕಾಲುವೆಗಳು ಕೆಲ ಭಾಗಗಳಲ್ಲಿ ಮಾತ್ರ ದುರಸ್ತಿ ಮಾಡಲು ಕ್ರಿಯಾ ಯೋಜನೆ ತಯಾರಿ ಸಿದ್ದು, ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿವೆ. ಮುಂದಿನ ತಿಂಗಳುಗಳಲ್ಲಿ ನಾಲೆಗೆ ಬೇಸಾಯಕ್ಕೆ ನೀರು ಹರಿಸುವ ಸಮಯವಾಗಿದೆ. ನಾಲೆಯಿಂದ ನೀರು ಹರಿಸಿದರೂ ಉಪ ಕಾಲುವೆಗಳ ಸಮರ್ಪಕವಾಗಿ ಇಲ್ಲದೆ ಇರುವುದ ರಿಂದ ನೀರು ಕಟ್ಟ ಕಡೆಯ ಜಮೀನಿಗೆ ಹರಿಯಲು ಸಾಧ್ಯವಾಗು ವುದಿಲ್ಲ. ಸಂಬAಧಿಸಿದ ಇಲಾಖೆಯವರು ಉಪ ಕಾಲುವೆಗಳ ದುರಸ್ತಿಗೆ ಕ್ರಮಕೈ ಗೊಳ್ಳುವಂತೆ ರೈತರು ಒತ್ತಾಯಿಸಿದ್ದಾರೆ.