ಮಡಿಕೇರಿ, ಜು. ೭: ಕುಶಾಲನಗರ-ಮಡಿಕೇರಿ ರಸ್ತೆಯ ಆನೆಕಾಡು ಬಳಿ ಚಾಲಕನ ನಿಯಂತ್ರಣ ತಪ್ಪಿದ ಓಮ್ನಿ ಮಗುಚಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ. ವಾಹನದಲ್ಲಿ ಇಬ್ಬರು ಇದ್ದು, ಮಡಿಕೇರಿಗೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ. ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಘಟನೆ ಸಂಬAಧ ಯಾವುದೇ ಪ್ರಕರಣ ದಾಖಲಾಗಿಲ್ಲ. ಚಾಲಕನ ಪ್ರಕಾರ ರಸ್ತೆ ಮಧ್ಯೆ ಕರಡಿ ಅಡ್ಡ ಬಂದಿದ್ದು, ಕರಡಿಗೆ ವಾಹನ ಅಪ್ಪಳಿಸುವುದನ್ನು ತಡೆಯಲು ಹೋದಾಗ ಓಮ್ನಿ ನಿಯಂತ್ರಣ ತಪ್ಪಿ ಮಗುಚಿದೆ ಎನ್ನಲಾಗಿದೆ. -ಟಿ.ಜಿ. ಸತೀಶ್