*ಗೋಣಿಕೊಪ್ಪ: ಪಾಲಿಬೆಟ್ಟ ಮೂಕ ಎಸ್ಟೇಟ್ನ ೬೫ ಕಾರ್ಮಿಕ ಕುಟುಂಬಗಳಿಗೆ ದಿನಸಿ ಕಿಟ್ಗಳನ್ನು ಶಾಸಕ ಕೆ.ಜಿ. ಬೋಪಯ್ಯ ಅವರು ವಿತರಿಸಿದರು. ಕಳೆದ ೧೪ ದಿನಗಳ ಹಿಂದೆ ಕೊರೊನಾ ಬಾಧೆಗೆ ಒಳಗಾಗಿ ಚೇತರಿಸಿಕೊಂಡ ಕುಟುಂಬಗಳು ಆರ್ಥಿಕವಾಗಿ ಕಂಗೆಟ್ಟಿವೆ ಎಂದು ತಿಳಿದು ಶಾಸಕರು ಸ್ವಯಂ ಪ್ರೇರಿತರಾಗಿ ಆಹಾರ ಕಿಟ್ಟ್ಗಳನ್ನು ವಿತರಿಸಿದರು.
ಕೋವಿಡ್ ನಿಯಂತ್ರಿಸಲು ಪ್ರತಿಯೊಬ್ಬರ ಸಹಕಾರವು ಪ್ರಮುಖವಾಗಿದೆ. ನಿಯಮಪಾಲನೆಯ ಮೂಲಕ ಕೋವಿಡ್ ಹರಡದಂತೆ ಕ್ರಮ ವಹಿಸಲು ಕಾರ್ಮಿಕರು ಜಾಗೃತೆ ಕಂಡುಕೊಳ್ಳಬೇಕು ಎಂದು ಹೇಳಿದರು. ಪ್ರತಿ ಕಾರ್ಮಿಕರಿಗೂ ಲಸಿಕೆ ಅಳವಡಿಕೆಗೆ ಅವಕಾಶ ಕಲ್ಪಿಸಲಾಗುತ್ತಿದೆ. ಪರಿಪೂರ್ಣ ಲಸಿಕೆ ವಿತರಣೆಯಾದಾಗ ಶೇ. ೧೦೦ ರಷ್ಟು ಲಸಿಕೆ ಅಳವಡಿಕೆ ಕಾರ್ಯ ನಡೆಯಲಿದೆ. ಪ್ರತಿಯೊಬ್ಬರು ಸ್ವಯಂ ಪ್ರೇರಿತರಾಗಿ ಲಸಿಕೆ ಪಡೆದುಕೊಳ್ಳಲು ಮುಂದಾಗಬೇಕು. ಮತ್ತು ಇತರರಿಗೂ ಈ ಬಗ್ಗೆ ಜಾಗೃತಿ ಮೂಡಿಸಬೇಕೆಂದು ತಿಳಿಸಿದರು. ಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಂದ್ಯAಡ ಶಾಂತಿಸೋಮಯ್ಯ, ಸದಸ್ಯರುಗಳಾದ ವಿಶಾಲಕ್ಷಿ, ಮುರುವಂಡ ಸುರೇಶ್, ಶಕ್ತಿ ಕೇಂದ್ರ ಅಧ್ಯಕ್ಷ ಮುರುವಂಡ ಸಾಬು, ಪ್ರಮುಖರಾದ ಸೋಮಯ್ಯ, ಮಾಜಿ ಗ್ರಾ.ಪಂ. ಅಧ್ಯಕ್ಷ ಕೊಲ್ಲೀರ ಗೋಪಿ ಚಿಣ್ಣಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರು ಕೊಲ್ಲೀರ ಧರ್ಮಜ, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮಧು ದೇವಯ್ಯ, ಆಪ್ತ ಸಹಾಯಕ ನರಸಿಂಹ ಹಾಜರಿದ್ದರು.ನಾಪೋಕ್ಲು: ಜವಾಹರ್ ನವೋದಯ ವಿದ್ಯಾಲಯದ ಹಳೇ ವಿದ್ಯಾರ್ಥಿ ಸಂಘದ ವತಿಯಿಂದ ನರಿಯಂದಡ ಸಮೀಪದ ಕೋಕೇರಿ ಅಂಬಾಡಿ ಕಾಲೋನಿ ನಿವಾಸಿಗಳಿಗೆ ಆಹಾರ ಕಿಟ್ ವಿತರಿಸಲಾಯಿತು. ಈ ಸಂದರ್ಭ ಸಂಘದ ಉಪಾಧ್ಯಕ್ಷ ಡಾ. ಕೇಲೇಟಿರ ಬೋಪಣ್ಣ, ಈಶ್ವರಿ, ನರಿಯಂದಡ ಗ್ರಾ.ಪಂ. ಸದಸ್ಯರು ಇದ್ದರು.ನಾಪೋಕ್ಲು: ಜವಾಹರ್ ನವೋದಯ ವಿದ್ಯಾಲಯದ ಹಳೇ ವಿದ್ಯಾರ್ಥಿ ಸಂಘದ ವತಿಯಿಂದ ನರಿಯಂದಡ ಸಮೀಪದ ಕೋಕೇರಿ ಅಂಬಾಡಿ ಕಾಲೋನಿ ನಿವಾಸಿಗಳಿಗೆ ಆಹಾರ ಕಿಟ್ ವಿತರಿಸಲಾಯಿತು. ಈ ಸಂದರ್ಭ ಸಂಘದ ಉಪಾಧ್ಯಕ್ಷ ಡಾ. ಕೇಲೇಟಿರ ಬೋಪಣ್ಣ, ಈಶ್ವರಿ, ನರಿಯಂದಡ ಗ್ರಾ.ಪಂ. ಸದಸ್ಯರು ಇದ್ದರು.ವೀರಾಜಪೇಟೆ: ವೀರಾಜಪೇಟೆ ನಗರದ ಸುತ್ತಮುತ್ತ ಇರುವ ನಿರ್ಗತಿಕರಿಗೆ ತಾಲೂಕು ಮೈದಾನದಲ್ಲಿ ಸ್ನೇಹಿತರ ಬಳಗದಿಂದ ಒಂದು ಹೊತ್ತಿನ ಊಟದ ವ್ಯವಸ್ಥೆ ಕಲ್ಪಿಸಲಾಯಿತು.
ಈ ಸಂದರ್ಭ ಸ್ನೇಹಿತರ ಬಳಗದ ಅಧ್ಯಕ್ಷ ನಿಕ್ಸನ್ ಮಾತನಾಡಿ, ತಮ್ಮ ಸಂಘವು ಕಳೆದ ಎರಡು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಅದೇ ರೀತಿಯಲ್ಲಿ ಪಟ್ಟಣದಲ್ಲಿ ಇರುವ ಭಿಕ್ಷುಕರು ಹಾಗೂ ನಿರ್ಗತಿಕರಿಗೆ ತಮ್ಮಿಂದ ಸಾಧ್ಯವಾದ ಮಟ್ಟಿಗೆ ಒಂದು ಹೊತ್ತಿನ ಮಾಂಸಹಾರಿ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. ಪಟ್ಟಣ ಪಂಚಾಯಿತಿ ಸದಸ್ಯ ಸಿ.ಕೆ. ಪೃಥ್ವಿನಾಥ್ ಮುಖ್ಯ ಅತಿಥಿಯಾಗಿ ಆಗಮಿಸಿ ಊಟ ವಿತರಣೆ ಮಾಡಿದರು. ಪೃಥ್ವಿನಾಥ್ ಮಾತನಾಡಿ, ಕೊರೊನಾ ಸಮಯದಲ್ಲಿ ಈ ಸಂಘವು ಮಾಡಿದ ಕಾರ್ಯ ಉತ್ತಮ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಜೊನ್ಸ್, ಕೃಷ್ಣ, ತಂಬು, ಕುಮಾರ್, ಮಹೇಶ್, ರಾಮಕೃಷ್ಣ ಸೇರಿದಂತೆ ಸದಸ್ಯರು ಭಾಗವಹಿಸಿದ್ದರು.