ಮಡಿಕೇರಿ, ಜು. ೬: ಕೊಡಗು ಜಿಲ್ಲೆಯ ಮಡಿಕೇರಿ ಕಂದಾಯ ತಾಲೂಕಿನಲ್ಲಿ ಖಾಲಿ ಇರುವ ೧ ನೋಟರಿ ಹುದ್ದೆಯನ್ನು ಭರ್ತಿ ಮಾಡಲು ನೋಟರಿ ನಿಯಮಗಳು ೧೯೫೬ ರ ನಿಯಮ ೩ ರಂತೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಆಗಸ್ಟ್ ೭ ಕೊನೆಯ ದಿನವಾಗಿದೆ. ಅರ್ಜಿಯನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶರು, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಕೊಡಗು-ಮಡಿಕೇರಿ ಇಲ್ಲಿಗೆ ಸಲ್ಲಿಸಬೇಕು.
ನೋಟರಿ ನಿಯಮಗಳು ೧೯೫೬ ರ ನಿಯಮ ೩ ರ ನಿಬಂಧನೆಗಳAತೆ ಅರ್ಹವಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬೇಕು. ಫಾರಂ ೧ (ರೂಲ್೪(೨)) ರನ್ವಯ ಅರ್ಜಿದಾರರು ವಿವರಗಳನ್ನು ಭರ್ತಿ ಮಾಡಿ ಸಂಬAಧಪಟ್ಟ ದಾಖಲೆ ಪ್ರತಿಗಳೊಂದಿಗೆ ದ್ವಿಪ್ರತಿಯಲ್ಲಿ ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಸಲ್ಲಿಸಬೇಕು. ಅಪೂರ್ಣವಾಗಿರುವ, ಭರ್ತಿ ಮಾಡದ ಮತ್ತು ವಿದ್ಯಾರ್ಹತೆ, ಇನ್ನಿತರ ದಾಖಲೆಗಳನ್ನು ಹೊಂದಿರದ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಅರ್ಜಿದಾರರು ಸಲ್ಲಿಸುವ ಅರ್ಜಿಗಳು ನೋಟರಿಗಳ ನಿಯಮಗಳು ೧೯೫೬ ರ ನಿಯಮ ೬(೧)(೨) ಮತ್ತು ೭(೧)(೨)(೩) ರನ್ವಯ ಹಾಗೂ ಕಾನೂನು ಅಧಿಕಾರಿಗಳ (ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಗಳು, ೧೯೭೭ ರ ನಿಯಮ ೧೨ ನ್ವಯ ಪರಿಶೀಲನೆಗೆ ಒಳಪಡಿಸಲಾಗುವುದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಎಲ್. ಜಿನರಾಳಕರ ತಿಳಿಸಿದ್ದಾರೆ.