ಕೂಡಿಗೆ, ಜು. ೬: ಕೂಡಿಗೆಯಲ್ಲಿರುವ ತೋಟಗಾರಿಕಾ ಕ್ಷೇತ್ರದಲ್ಲಿ ಇಲಾಖೆಯ ವತಿಯಿಂದ ಬೆಳೆಸಲಾದ ತೆಂಗಿನ ಗಿಡಗಳನ್ನು ರೈತರಿಗೆ ಸರಕಾರ ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗುತ್ತಿದೆ.

ಇಲಾಖೆಯ ವತಿಯಿಂದ ೩,೫೦೦ ತೆಂಗಿನ ಗಿಡಗಳನ್ನು ಬೆಳೆಸಲಾಗಿದ್ದು ಸರಕಾರ ನಿಗದಿ ಪಡಿಸಿದ ದರದಲ್ಲಿ ರೈತರ ಜಮೀನಿನ ದಾಖಲೆ ಮತ್ತು ಆಧಾರ ಕಾರ್ಡ್ಗಳ ಪ್ರತಿಯನ್ನು ಪಡೆದು ದಾಖಲೆಯ ಅನುಗುಣವಾಗಿ ವಿತರಣೆ ಮಾಡಲಾಗುತ್ತಿದೆ ಎಂದು ಕೂಡಿಗೆ ತೋಟಗಾರಿಕಾ ಸಹಾಯಕ ಅಧಿಕಾರಿ ಆನಂದ ತಿಳಿಸಿದ್ದಾರೆ.