ಸಿದ್ದಾಪುರ, ಜು. ೬: ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ಬೈಕ್‌ವೊಂದನ್ನು ಕಳ್ಳತನ ಮಾಡಿದ ಅಂತರ್‌ರಾಜ್ಯ ಕಳ್ಳರಿಬ್ಬರನ್ನು ಬಂಧಿಸುವಲ್ಲಿ ಸಿದ್ದಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಕಂಬಿಲ್ ಗ್ರಾಮದ ಕೊಡಚೇರಿ ನಿವಾಸಿಯಾಗಿರುವ ನಿಹಾದ್ ಎ.ಪಿ. (೨೦) ಹಾಗೂ ಕಣ್ಣೂರು ಜಿಲ್ಲೆಯ ಪಾಪಿಂಚೇರಿ ಗ್ರಾಮದ ಕಳವಟ್ಟಣ ನಿವಾಸಿಯಾಗಿರುವ ಮೊಹಮ್ಮದ್ ಅಫ್ರಿದಿ ಕೆ. (೨೧) ಎಂಬ ಯುವಕರೇ ಬಂಧಿತ ಆರೋಪಿಗಳಾಗಿದ್ದಾರೆ. ಈ ಯುವಕರಿಬ್ಬರು ಕೇರಳ ರಾಜ್ಯದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಲಾಕ್‌ಡೌನ್ ಸಂದರ್ಭದಲ್ಲಿ ಅಲ್ಲಿಂದ ಗೂಡ್ಸ್ ವಾಹನವೊಂದರಲ್ಲಿ ಸಿದ್ದಾಪುರಕ್ಕೆ ಆಗಮಿಸಿದ್ದರು. ಬಳಿಕ ೨೭.೬.೨೦೨೧ರಂದು ನೆಲ್ಯಹುದಿಕೇರಿ ಗ್ರಾಮದ ಬೆಟ್ಟದಕಾಡು ನಿವಾಸಿಯಾಗಿರುವ ಮೊಹಮ್ಮದ್ ತಸ್ಸೀರ್ ಎಂಬವರಿಗೆ ಸೇರಿದ ಪಲ್ಸರ್ ಬೈಕ್ (ಕೆಎ-೧೨ ಎಸ್-೮೨೦೦) ಅನ್ನು ಮನೆಯ ಮುಂಭಾಗದಿAದ ರಾತ್ರಿ ಸಮಯದಲ್ಲಿ ಕಳ್ಳತನ ಮಾಡಿದ್ದಾರೆ.

ಈ ಬಗ್ಗೆ ಮೊಹಮ್ಮದ್ ತಸ್ಸೀರ್ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದರ ಜಾಡು ಹಿಡಿದ ಪೊಲೀಸರು ತನಿಖೆ ಕೈಗೊಂಡಿದ್ದರು. ತಾ. ೨೮ರಂದು ನೀಡಿದ ಪುಕಾರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಂಡವೊAದನ್ನು ರಚನೆ ಮಾಡಿ ಬಿರುಸಿನ ತನಿಖೆ ನಡೆಸಿದರು.

ತಾ.೬ರ ಬೆಳಗ್ಗಿನ ಜಾವ ಸಿದ್ದಾಪುರದ ಠಾಣಾಧಿಕಾರಿ ಮೋಹನ್ ರಾಜ್ ಅವರು ಮಾಲ್ದಾರೆ ಚೆಕ್‌ಪೋಸ್ಟ್ನಲ್ಲಿ ವಾಹನಗಳನ್ನು ತಪಾಸಣೆ ಮಾಡುತ್ತಿರುವ ಸಂದರ್ಭದಲ್ಲಿ ಇಬ್ಬರು ಯುವಕರು ನಂಬರ್ ಪ್ಲೇಟ್‌ಗಳು ಇಲ್ಲದೆ ಬರುತ್ತಿರುವುದು ಕಂದುಬAದಿತು. ಈ ಬಗ್ಗೆ ಠಾಣಾಧಿಕಾರಿ ಹೆಚ್ಚಿನ ಮಾಹಿತಿ ಕಲೆ ಹಾಕಿದಾಗ ಈ ಯುವಕರಿಬ್ಬರು ಸೇರಿ ನೆಲ್ಲಿಹುದಿಕೇರಿಯ ಬೆಟ್ಟದಕಾಡು ನಿವಾಸಿಯಾಗಿರುವ ತಸ್ಸೀರ್ ಮೊಹಮ್ಮದ್ ಅವರಿಗೆ ಸೇರಿದ ಬೈಕ್ ಅನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

ಈ ಯುವಕರು ಕಳ್ಳತನ ಮಾಡಿದ ಬೈಕ್ ಅನ್ನು ಮಾರಾಟ ಮಾಡಲು ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಪೊಲೀಸರ ಕೈಗೆ ಸಿಕ್ಕಿರುತ್ತಾರೆ. ಆರೋಪಿಗಳಾದ ನಿಹಾದ್ ಹಾಗೂ ಮೊಹಮ್ಮದ್ ಅಫ್ರೀದಿ ಈ ಹಿಂದೆ ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಲಾಕ್‌ಡೌನ್ ಆದ ಬಳಿಕ ಕಣ್ಣೂರು ಜಿಲ್ಲೆಗೆ ಬಂದಿದ್ದರು. ಆರೋಪಿಗಳನ್ನು ಬಂಧಿಸಿ ಕಳ್ಳತನ ಮಾಡಿರುವ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಹಾಗೂ ಮಡಿಕೇರಿ ವಿಭಾಗದ ಡಿವೈಎಸ್‌ಪಿ ಬಾರಿಕೆ ದಿನೇಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಮಡಿಕೇರಿ ವೃತ್ತ ನಿರೀಕ್ಷಕ ಪಿ.ವಿ. ವೆಂಕಟೇಶ್, ಸಿದ್ದಾಪುರ ಠಾಣಾಧಿಕಾರಿ ಮೋಹನ್ ರಾಜ್ ನೇತೃತ್ವದಲಿ ಸಹಾಯಕ ಠಾಣಾಧಿಕಾರಿಗಳಾದ ಎನ್.ಟಿ. ತಮ್ಮಯ್ಯ, ಗಣಪತಿ, ಮುಖ್ಯಪೇದೆ ರತನ್ ಟಿ.ಜೆ., ಸಿಬ್ಬಂದಿಗಳಾದ ಹೆಚ್.ಕೆ. ವಸಂತಕುಮಾರ್, ಪಿ.ಆರ್. ಲವ ಕುಮಾರ್, ಮಲ್ಲಪ್ಪ ಮುಶಿಗೇರಿ, ಸಿ.ಡಿ.ಆರ್. ಘಟಕದ ರಾಜೇಶ್, ಚಾಲಕ ಗೋವರ್ಧನ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

-ವಾಸು ಎ.ಎನ್.