ಗೋಣಿಕೊಪ್ಪಲು, ಜು.೬: ಗ್ರಾ.ಪಂ. ಸದಸ್ಯನ ಮೇಲೆ ಅತ್ಯಾಚಾರ ಯತ್ನ, ಜಾತಿ ನಿಂದನೆ ಹಾಗೂ ಕೊಲೆ ಬೆದರಿಕೆಗೆ ಸಂಬAಧಿಸಿದAತೆ ಗೋಣಿಕೊಪ್ಪಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾ.೫.ರಂದು ಗೋಣಿಕೊಪ್ಪಲು ಹರಿಶ್ಚಂದ್ರಪುರದ ನಿವಾಸಿ ವಸಂತಮ್ಮ ಅವರಿಗೆ ಸೇರಿದ್ದ ಕಟ್ಟಡದ ಹಿಂಭಾಗದಲ್ಲಿ ನಿರ್ಮಿಸಿದ್ದ ಕಾರ್ಶೆಡ್ ಅನ್ನು ತೆರವುಗೊಳಿಸುವ ಪ್ರಕರಣಕ್ಕೆ ಸಂಬAಧಿಸಿದAತೆ ವಸಂತಮ್ಮ ಅವರ ಪುತ್ರಿ ಪದ್ಮಿನಿ ಗೋಣಿಕೊಪ್ಪಲು ಗ್ರಾ.ಪಂ. ಸದ್ಯಸ್ಯ ಕೆ. ಗಣಪತಿ ಅವರ ಮೇಲೆ ವಿವಿಧ ಪ್ರಕರಣಕ್ಕೆ ಸಂಬAಧಿಸಿದAತೆ ನೀಡಿದ ದೂರಿನ ಅನ್ವಯ
ಆರೋಪಿತನ ಮೇಲೆ ಅತ್ಯಾಚಾರಕ್ಕೆ ಯತ್ನ, ಜಾತಿ ನಿಂದನೆ ಹಾಗೂ ಕೊಲೆ ಬೆದರಿಕೆ ಆರೋಪದಡಿ ಪ್ರಕರಣ ದಾಖಲಾಗಿದೆ.
ವಸಂತಮ್ಮ ಅವರ ಮನೆಯ ಹಿಂಭಾಗದ ಶೆಡ್ ಅನ್ನು ಗ್ರಾ.ಪಂ. ಸದಸ್ಯ ಗಣಪತಿ ಹಾಗೂ ಗ್ರಾ.ಪಂ.ನ ಕೆಲ ಪೌರಕಾರ್ಮಿಕರು ಏಕಾಏಕಿ ಯಾವುದೇ ಪೂರ್ವ ಸೂಚನೆ ನೀಡದೆ ತೆರವುಗೊಳಿಸಲು ಮುಂದಾಗಿದ್ದು, ಶೆಡ್ಡಿಗೆ ಹಾನಿ ಮಾಡಲು ಯತ್ನಿಸಿರುತ್ತಾರೆ ಎಂದು ಆರೋಪ ಹೊರಿಸಿದ್ದಾರೆ.
ಈ ವೇಳೆ ವಸಂತಮ್ಮ ಅವರ ಪುತ್ರಿ ಪದ್ಮಿನಿ ಮನೆಯಿಂದ ಹೊರ ಬಂದು ಪ್ರತಿರೋಧ ಒಡ್ಡಿದ್ದಾರೆ. ಹೊರಗೆ ಉಂಟಾದ ಗಲಭೆ ಆಲಿಸಿ ಮನೆಯೊಳಗಿದ್ದ ವಸಂತಮ್ಮ ಹಾಗೂ ಪದ್ಮಿನಿಯ ಮಗಳು ಕೂಡ ಸ್ಥಳಕ್ಕೆ ಆಗಮಿಸಿದ್ದಾರೆ. ಈ ಸಂದರ್ಭ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ನಂತರ ಪೊಲೀಸ್ ಪುಕಾರು ನೀಡಿದ್ದಾರೆ. ಪದ್ಮಿನಿ ನೀಡಿದ ದೂರಿನ ಅನ್ವಯ ಗಣಪತಿಯ ಮೇಲೆ ಗೋಣಿಕೊಪ್ಪಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.