ಮಡಿಕೇರಿ, ಜು. ೫: ಮಡಿಕೇರಿ-ಮಂಗಳೂರು ರಾಜ್ಯ ಹೆದ್ದಾರಿ ಹಾದು ಹೋಗುವ ಮದೆ ಗ್ರಾ.ಪಂ. ವ್ಯಾಪ್ತಿಯ ದೇವರಕೊಲ್ಲಿ ಎಂಬಲ್ಲಿ ರಸ್ತೆಯಲ್ಲಿ ವಾಹನಗಳು ಸಾಗುವದೇ ದುಸ್ತರ ವೆನಿಸಿಬಿಟ್ಟಿದೆ. ಹಗಲು ವೇಳೆಯಲ್ಲಿ ಹಾದಿ ಯುದ್ದಕ್ಕೂ ಗುಂಪು ಗುಂಪಾಗಿ ಸಾಗುವ ದನಗಳನ್ನು ದಾಟಿ ಹೋಗಲು ಪರದಾಡಬೇಕಿದ್ದರೆ, ರಾತ್ರಿ ವೇಳೆ ದಾರಿ ಮಧ್ಯೆ ಮಲಗಿ ನಿದ್ರಿಸುವ ದನಗಳನ್ನು ಹಿಂಡಿನಿAದ ಎಬ್ಬಿಸಿ ರಸ್ತೆ ಬದಿಗೆ ಸರಿಸಿ ಮತ್ತೆ ಮುಂದೆ ಸಾಗಬೇಕಾದ ಅನಿವಾರ್ಯತೆ ಇಲ್ಲಿದೆ.

ಮದೆ ಪಂಚಾಯಿತಿ ವ್ಯಾಪ್ತಿಯ ದೇವರಕೊಲ್ಲಿಯಲ್ಲಿ ಬಹುತೇಕ ಕೃಷಿಕರಿದ್ದು, ಜೀವನೋಪಾಯಕ್ಕಾಗಿ ಜಾನುವಾರುಗಳನ್ನು ಸಾಕಿಕೊಂಡಿ ದ್ದಾರೆ. ಆದರೆ ಅವುಗಳನ್ನು ಸರಿಯಾದ ರೀತಿಯಲ್ಲಿ ಪಾಲನೆ ಮಾಡದೆ ಬೇಕಾಬಿಟ್ಟಿ ತಿರುಗಾಡಲು ಬಿಡುತ್ತಿರುವದರಿಂದ ಅವುಗಳು ಪ್ರತಿನಿತ್ಯ ಬೀಡಾಡಿ ದನಗಳಂತೆ ರಸ್ತೆಯಲ್ಲಿಯೇ ಇರುತ್ತವೆ. ಸುತ್ತ ಮುತ್ತಲಿನ ಕಾಡು, ರಸ್ತೆ ಬದಿಗಳಲ್ಲಿ ಸಿಕ್ಕುವ ಆಹಾರವನ್ನು ಸೇವಿಸುತ್ತಾ ರಸ್ತೆ ಹಾಗೂ ರಸ್ತೆ ಬದಿಯಲ್ಲಿಯೇ ಆಶ್ರಯ ಪಡೆಯುತ್ತವೆ. ಹಗಲು ವೇಳೆಯಲ್ಲಿ ಗುಂಪು ಗುಂಪಾಗಿ ಸಾಗುವ ಜಾನುವಾರುಗಳಿಂದಾಗಿ ರಸ್ತೆಯಲ್ಲಿ ಸಂಚರಿಸುವ ವಾಹನ ಚಾಲಕರಿಗೆ ತೊಂದರೆಗಳಾಗುತ್ತಿವೆ. ವಾಹನಗಳ ಹಾಗೂ ಹಾರನ್‌ಗಳ ಸದ್ದು ಇವುಗಳಿಗೆ ಮಾಮೂಲಿಯಾಗಿ ಬಿಟ್ಟಿದ್ದು, ಒಮ್ಮೊಮ್ಮೆ ವಾಹನ ದಿಂದಿಳಿದು ಓಡಿಸಬೇಕಾದ ಪರಿಸ್ಥಿತಿ ಚಾಲಕರದ್ದಾಗಿರುತ್ತದೆ.

ಹಗಲಿಡೀ ಮೇಯುತ್ತಾ ಸಂಜೆ ಕತ್ತಲಾಗುತ್ತಲೇ ದೇವರಕೊಲ್ಲಿ ಜಂಕ್ಷನ್ ಬಳಿ ಜಮಾಯಿಸುವ ಜಾನುವಾರು ಗಳು ಒಂದೊAದಾಗಿ ರಸ್ತೆಯಲ್ಲಿಯೇ

(ಮೊದಲ ಪುಟದಿಂದ) ಮಲಗಿಬಿಡುತ್ತವೆ. ಈ ಸಂದರ್ಭದಲ್ಲಿ ವಾಹನಗಳು ಬಂದರೂ ಮಲಗಿದ ಲ್ಲಿಂದ ಕದಲುವದೇ ಇಲ್ಲ. ಇತ್ತ ಎಲ್ಲಿ ದನಗಳು ಹಾಯ್ದು ಬಿಡುತ್ತವೋ ಎಂದು ವಾಹನದಲ್ಲಿರುವವರಿಗೆ ಇಳಿದು ಹೋಗಲೂ ಕೂಡ ಭಯ. ಆದರೂ ಧೈರ್ಯಮಾಡಿ ಇಳಿದು ಅವುಗಳನ್ನು ಎಬ್ಬಿಸಿ, ಬದಿಗೆ ಓಡಿಸಿ ಮತ್ತೆ ಮುಂದುವರಿಯಬೇಕು. ಇದಾದ ಕೆಲವೇ ಕ್ಷಣಗಳಲ್ಲಿ ಮತ್ತೆ ಬಂದು ಸೇರಿಕೊಳ್ಳುವದರಿಂದ ಮತ್ತದೇ ದನಗಳನ್ನು ಓಡಿಸುವ ಕಾಯಕ ಮತ್ತೆ ಬರುವ ಚಾಲಕರದ್ದು..!

ಮಾಲೀಕರ ನಿರ್ಲಕ್ಷö್ಯ

ಇಲ್ಲಿ ಜಾನುವಾರುಗಳನ್ನು ಸಾಕಿ ಸಲಹುವವರ ನಿರ್ಲಕ್ಷö್ಯವೂ ಎದ್ದು ಕಾಣುತ್ತದೆ. ಸಾಕು ಪ್ರಾಣಿಗಳನ್ನು ಎಲ್ಲೆಂದರಲ್ಲಿ ಸಾರ್ವಜನಿಕ ಪ್ರದೇಶ ಗಳಲ್ಲಿ ಬಿಡಬಾರದೆಂಬ ನಿಯಮ ಗಳಿದ್ದರೂ ಅದನ್ನು ಗಾಳಿಗೆ ತೂರಿ ಬೇಕಾಬಿಟ್ಟಿ ಬಿಡುತ್ತಿರುವದು ಈ ವ್ಯಾಪ್ತಿಯಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಬಹಳಷ್ಟು ವರ್ಷಗಳಿಂದಲೂ ಈ ಪ್ರದೇಶದಲ್ಲಿ ಜಾನುವಾರುಗಳು ರಸ್ತೆ ಮಧ್ಯೆ ಮಲಗುವದು ಕಂಡುಬರುತ್ತಿದೆ ಹಿಂದೆ ಈ ಪ್ರದೇಶಕ್ಕೆ ವಿದ್ಯುತ್ ಸಂಪರ್ಕ ದೊರಕುವ ಮುನ್ನ, ಅಂಗಡಿ,ಮನೆಗಳು ಇಲ್ಲದಿದ್ದ ಸಂದರ್ಭದಲ್ಲಿ ಪ್ರತಿನಿತ್ಯ ಜಾನುವಾರು ಗಳ ಕಳ್ಳತನವಾಗುತ್ತಿದ್ದುದಲ್ಲದೆ, ಕತ್ತಲೆಯಲ್ಲಿ ಮಲಗಿದ್ದ ದನಗಳ ಮೇಲೆ ವಾಹನ ಹರಿದು ಬಹಳಷ್ಟು ಮೂಕ ಪ್ರಾಣಿಗಳು ಸಾವನ್ನಪ್ಪಿರುವ ಘಟನೆಗಳೂ ನಡೆದಿವೆ. ದನ ಕರುಗಳು ಮಾತ್ರವಲ್ಲದೆ ಈ ವ್ಯಾಪ್ತಿಯಲ್ಲಿ ಆಡು, ಕುರಿ, ಕೋಳಿಗಳೂ ಕೂಡ ರಸ್ತೆ ಮಧ್ಯೆ ಇರುವದು ಸಾಮಾನ್ಯವಾಗಿದೆ.

ಪಂಚಾಯಿತಿ ಗಮನವಿಲ್ಲ

ಇಂತಹ ಪ್ರಕರಣಗಳ ಬಗ್ಗೆ ತಿಳುವಳಿಕೆ ನೀಡಿ ಕ್ರಮ ಕೈಗೊಳ್ಳ ಬೇಕಾದ ಗ್ರಾ.ಪಂ. ಗಮನಹರಿಸುತ್ತಿಲ್ಲ ಎಂಬ ಆರೋಪಗಳು ಸಾರ್ವಜನಿಕ ರಿಂದ ವ್ಯಕ್ತಗೊಳ್ಳುತ್ತಿದೆ. ಜಾನುವಾರು ಗಳನ್ನು ರಸ್ತೆಗೆ ಬಿಡುವವರಿಗೆ ಕಾನೂನಿನಡಿಯಲ್ಲಿ ನೋಟೀಸ್ ನೀಡಿ ಮಾಲೀಕರು ಸ್ಪಂದಿಸದೇ ಇದ್ದಲ್ಲಿ ಅಂತಹ ಜಾನುವಾರುಗಳನ್ನು ವಶಕ್ಕೆ ಪಡೆದುಕೊಂಡು ಸುರಕ್ಷಿತ ಗೋಶಾಲೆಗಳಿಗೆ ಸಾಗಿಸುವಂತಾಗ ಬೇಕೆಂಬದು ಗ್ರಾಮಸ್ಥರ ಆಗ್ರಹವಾಗಿದೆ.

? ಸಂತೋಷ್