ಕೂಡಿಗೆ, ಜು. ೫: ಈ ಸಾಲಿನ ಹವಾಮಾನ ಬದಲಾವಣೆಯ ಹಿನ್ನೆಲೆಯಲ್ಲಿ ಜೋಳದ ಬೆಳೆಗೆ ಹೆಚ್ಚು ಹುಳುಗಳ ಕಾಟ ಹೆಚ್ಚಾದ ಹಿನ್ನೆಲೆ ಕುಶಾಲನಗರ ರೈತ ಸಂಪರ್ಕ ಕೇಂದ್ರ ಅಧಿಕಾರಿಗಳು ಅಯಾ ವ್ಯಾಪ್ತಿಯ ರೈತರ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ
ಕುಶಾಲನಗರ ತಾಲೂಕು ವ್ಯಾಪ್ತಿಯ ಅರೆ ಮಲೆನಾಡು ಪ್ರದೇಶಗಳಾದ ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೬ ನೇ ಹೊಸಕೋಟೆ ಮರೂರು ಹಳೇಕೋಟೆ ತೊರೆನೂರು ಸಿದ್ದಲಿಂಗಪುರ ಅಳುವಾರ ಬೈರಪ್ಪನಗುಡಿ ಸೀಗೆಹೊಸೂರು ಚಿಕ್ಕತ್ತೂರು ದೊಡ್ಡತ್ತೂರು ಬಸವನತ್ತೂರು ವ್ಯಾಪ್ತಿಯಲ್ಲಿ ಹೆಚ್ಚು ಮಳೆ ಅಧಾರಿತವಾಗಿ ಹೆಚ್ಚು ಮುಸುಕಿನ ಜೋಳದ ಬೆಳೆಯನ್ನು ಬೆಳೆಯಲಾಗಿದೆ.
ಈ ವ್ಯಾಪ್ತಿಯಲ್ಲಿ ಈಗಾಗಲೇ ಸಾವಿರಾರು ಎಕರೆಗಳಷ್ಟು ಪ್ರದೇಶದಲ್ಲಿ ಜೋಳದ ಬಿತ್ತನೆ ಮಾಡಲಾಗಿ, ಅನೇಕ ರೈತರು ವಿವಿಧ ಕಂಪನಿಯ ಜೋಳದ ಹೈಬ್ರೀಡ್ ತಳಿಯ ಬಿತ್ತನೆ ಬೀಜ ಗಳನ್ನು ಬಿತ್ತನೆ ಮಾಡಿರುತ್ತಾರೆ. ಈಗಾಗಲೇ ಬಿತ್ತನೆ ಮಾಡಿ ಒಂದೂವರೆ ತಿಂಗಳುಗಳಷ್ಟು ದಿನ ಕಳೆದಿದೆ. ಜೋಳ ಬೆಳೆ ಒಂದು ಅಡಿಗಳಷ್ಟು ಬೆಳವಣಿಗೆ ಬಂದಿದೆ. ಅದರಲ್ಲಿ ಈಗಾಗಲೇ ಬೆಳೆಗೆ ವಿವಿಧ ರೋಗದ ಕಾಟಾ ಆರಂಭವಾಗಿದೆ ಹೆಚ್ಚಾಗಿ ಚಿಗುರು ಒಡೆದು ಬೆಳೆಯುತ್ತಿರುವ ಜೋಳದ ಬೆಳೆಯನ್ನು ತಿನ್ನುತ್ತಿವೆ ಇದರಿಂದಾಗಿ ಜೋಳದ ಬೆಳೆ ಹಾಳಾಗುವ ಹಂತ ತಲುಪುತ್ತಿದೆ.
ರೈತರ ಜಮೀನುಗಳಿಗೆ ಕುಶಾಲನಗರದ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಅರುಣ ಭೇಟಿ ನೀಡಿ ಪರಿಶೀಲನೆ ನಡೆಸಿ ಜಮೀನಿನ ಅನುಗುಣವಾಗಿ ಇಂತಿಷ್ಟು ಪ್ರಮಾಣದಲ್ಲಿ ರೋಗ ನಿರೋಧಕ ಔಷಧಿಯನ್ನು ಸಿಂಪಡಣೆ ಮಾಡಲು ರೈತರು ಗಳಿಗೆ ಸಮಗ್ರವಾದ ಮಾಹಿತಿಯನ್ನು ನೀಡಿರುತ್ತಾರೆ.ಇದರ ಜೊತೆಯಲ್ಲಿ ಹವಾಮಾನ ವೈಪರೀತ್ಯ ಯಿಂದಾಗಿಯು ರೋಗ ಕಾಣಿಸಿಕೊಳ್ಳುತ್ತದೆ. ಕೃಷಿ ಇಲಾಖೆಯ ಅಧಿಕಾರಿಗಳ ಮಾಹಿತಿಯನ್ನು ಪಡೆದು ಈ ಭಾಗದ ರೈತರು ಔಷಧಿಯನ್ನು ಸಿಂಪಡಣೆ ಮಾಡುವುದರಲ್ಲಿ ತೊಡಗಿದ್ದಾರೆ.