ಮಡಿಕೇರಿ, ಜು. ೫: ಲಾಕ್‌ಡೌನ್ ಸಂದರ್ಭದಲ್ಲಿ ಹಲವು ನಿಬಂಧನೆಗಳನ್ನು ಅನುಸರಿಸಿ ಸರ್ಕಾರಿ ಇಲಾಖೆಗಳು ಕಾರ್ಯನಿರ್ವಹಿಸುತ್ತಿದ್ದರೂ, ಜಿಲ್ಲಾ ಪ್ರಾದೇಶಿಕ ಸಾರಿಗೆ ಇಲಾಖಾ ಕಚೇರಿ ಮಾತ್ರ ಪೂರ್ಣ ಮುಚ್ಚಿದ್ದು, ಗ್ರಾಹಕರ ಸೇವೆಗೆ ಅಲಭ್ಯವಾಗಿದೆ. ಇಲಾಖೆಗೆ ಸಂಬAಧಿಸಿದ ಹಲವಷ್ಟು ಕೆಲಸಗಳು ಸ್ಥಗಿತಗೊಂಡಿದ್ದು, ಗ್ರಾಹಕರು ಪರದಾಡುವಂತಾಗಿದೆ. ವಾಹನ ಚಾಲನಾ ಪರವಾನಗಿ ಅವಧಿ ಮುಗಿದಿದ್ದರೂ, ನವೀಕರಿಸಲಾಗದೆ, ಹೊಸ ತರಬೇತಿ ಅನುಮತಿ ಪತ್ರ ಲಭ್ಯವಾಗದೆ, ಇತರ ವಿಭಾಗಗಳ ಕೆಲಸಗಳೂ ಸ್ಥಗಿತಗೊಂಡಿದ್ದು, ಕಚೇರಿ ಗೇಟ್‌ಗಳಿಗೆ ಬೀಗ ಮುದ್ರೆ ಹಾಕಲಾಗಿದೆ. ಕಚೇರಿ ಮುಚ್ಚಲು ಸರ್ಕಾರ ಆದೇಶಿಸಿದ್ದು, ಜಿಲ್ಲಾಧಿಕಾರಿಗಳು ಒಪ್ಪಿಗೆ ನೀಡಿದರೆ ಮಾತ್ರ ತೆರೆಯಲಾಗುವುದೆಂದು ಅಧಿಕಾರಿಗಳು ಹೇಳಿದ್ದಾರೆ.