ಕಣಿವೆ, ಜು. ೫: ಬಸವನಹಳ್ಳಿಯ ಗಿರಿಜನ ವಿವಿಧೋದ್ದೇಶ ಸಹಕಾರ ಸಂಘದ ಆವರಣದಲ್ಲಿ ನಿರ್ಮಿಸಿದ್ದ ಹೊಲಿಗೆ ತರಬೇತಿ ಕಟ್ಟಡ ಉದ್ಘಾಟನಾ ಸಮಾರಂಭ ಸಂಘದ ಹಾಲಿ ಮತ್ತು ಮಾಜಿ ಅಧ್ಯಕ್ಷರುಗಳ ಜಟಾಪಟಿಗೆ ವೇದಿಕೆಯಾದ ಪ್ರಸಂಗ ನಡೆಯಿತು.
ಸಂಘದಲ್ಲಿದ್ದ ೨೦ ಲಕ್ಷ ರೂಗಳನ್ನು ಮಾಜಿ ಅಧ್ಯಕ್ಷರಾಗಿದ್ದ ರಾಜರಾವ್ ಮನಬಂದAತೆ ಡ್ರಾ ಮಾಡಿಬಿಟ್ಟಿದ್ದಾರೆ. ಮೊದಲೇ ನಷ್ಟದಲ್ಲಿರುವ ಸಹಕಾರ ಸಂಘ ಮತ್ತಷ್ಟು ಪಾತಾಳಕ್ಕೆ ಕುಸಿಯುವ ಮುನ್ನ ಶಾಸಕರು ಏನಾದರೂ ಮಾಡಿ ಸಂಘಕ್ಕೆ ರಾಜರಾವ್ ಕಟ್ಟಬೇಕಾದ ಹಣವನ್ನು ಕಟ್ಟಿಸಲು ಕ್ರಮಕೈಗೊಳ್ಳಬೇಕು ಎಂದು ಸಂಘದ ಹಾಲಿ ಅಧ್ಯಕ್ಷ ಆರ್.ಕೆ.ಚಂದ್ರು ಹೇಳಿದರು.
ನಂತರ ಶಾಸಕರ ಅನುಮತಿ ಪಡೆದು ಮಾತು ಆರಂಭಿಸಿದ ಸಂಘದ ಮಾಜಿ ಅಧ್ಯಕ್ಷ ರಾಜರಾವ್, ಸಂಘದ ಆವರಣದಲ್ಲಿನ ೪೦೦ ಮೆಟ್ರಿಕ್ ಟನ್ ಸಾಮರ್ಥ್ಯದ ಸೀಗೆ ಗೋದಾಮು, ಸಂಘದ ಕಚೇರಿ ಇರುವ ವಾಣಿಜ್ಯ ಮಳಿಗೆಗಳು, ೨೫ ಲಕ್ಷ ವೆಚ್ಚದ ಮತ್ತೊಂದು ನೂತನ ಗೋದಾಮು, ೮೫ ಲಕ್ಷ ವೆಚ್ಚದಲ್ಲಿ ಕಟ್ಟಿ ಉದ್ಘಾಟಿಸಿದ ಕಟ್ಟಡ ಎಲ್ಲವನ್ನೂ ತಾನು ಮಾಡಿದ್ದೇನೆ ಎಂದು ಸಮರ್ಥಿಸಿದರು. ರಾಜರಾವ್ ಏನೂ ಮಾಡೇ ಇಲ್ಲ ಅನ್ನೋರಿಗೆ ಇದು ನನ್ನ ಉತ್ತರ.
ಹಾಗೆಯೇ ಸಂಘಕ್ಕೆ ತÀನ್ನ ಅವಧಿಯಲ್ಲಿ ಜವಳಿ ಇಲಾಖೆಯ ಸಿದ್ಧ ಉಡುಪು ತಯಾರಿಕ ಘಟಕ ನಿರ್ಮಾಣಕ್ಕೆ ಜವಳಿ ಇಲಾಖೆಯಿಂದ ೫ ಕೋಟಿ ಅನುದಾನ ತರಲು ವರ್ಷಗಟ್ಟಲೆ ಬೆಂಗಳೂರಿಗೆ ಅಲೆದು ಹಣ ಬಿಡುಗಡೆಗೆ ಓಡಾಡಿದ ಖರ್ಚು, ಕಾರಿಗೆ ಇಂಧನ, ಅಲ್ಲಿ ಕಚೇರಿಗಳಲ್ಲಿ ಲಂಚವಿಲ್ಲದೇ ಏನೂ ಆಗಲ್ಲ. ಹಾಗಾಗಿ ೫ ಕೋಟಿಗೆ ಸುಮಾರು ೨೦ ಲಕ್ಷ ಹೊಲಿಗೆ ತರಬೇತಿ ಕೇಂದ್ರಗಳಲ್ಲಿ ತರಬೇತಿ ಪಡೆಯುವ ಮೂಲಕ ಮಹಿಳೆಯರು ಸ್ವಾವಲಂಬಿಗಳಾಗಬೇಕೆAದು ಶಾಸಕ ಅಪ್ಪಚ್ಚು ರಂಜನ್ ಕರೆಕೊಟ್ಟರು. ಹೊಲಿಗೆ ತರಬೇತಿ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಟೈಲರಿಂಗ್ ವೃತ್ತಿಯಲ್ಲಿ ಗುಣಮಟ್ಟದ ಬಟ್ಟೆ ಹಾಗೂ ಉತ್ತಮವಾದ ಫಿಟ್ಟಿಂಗ್ಸ್ಗಳಿಗೆ ಆದ್ಯತೆ ನೀಡುವ ಮೂಲಕ ಗ್ರಾಹಕರಿಗೆ ಉತ್ತಮ ಸೇವೆ ಕಲ್ಪಿಸಿ ಒಳ್ಳೆಯ ಆದಾಯ ಗಳಿಸಲು ಶಾಸಕರು ಮಹಿಳೆಯರಿಗೆ ಕರೆ ನೀಡಿದರು.
ಐಟಿಡಿಪಿ ಅಧಿಕಾರಿ ಶಿವಕುಮಾರ್, ವಲಯ ಅರಣ್ಯಾಧಿಕಾರಿ ಅನನ್ಯಕುಮಾರ್, ಸಹಕಾರ ಅಭಿವೃದ್ಧಿ ಅಧಿಕಾರಿ ಮೋಹನ್, ನಿರ್ಮಿತಿ ಕೇಂದ್ರದ ಸಹಾಯಕ ನಿರ್ದೇಶಕ ಸಚಿನ್, ಅಭಿಯಂತರ ರವಿ, ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಂದಿನಿ, ಪಿಡಿಓ ಶ್ಯಾಂ, ಗಿರಿಜನ ಸಹಕಾರ ಸಂಘದ ಕಾರ್ಯನಿರ್ವಹಣಾಧಿಕಾರಿ ಹನಿಕುಮಾರ್ ಹಾಗು ನಿರ್ದೇಶಕರುಗಳಿದ್ದರು.