ಚೆಟ್ಟಳ್ಳಿ, ಜು. ೪: ಭಾರತೀಯ ಸೇನೆಗೆ ಸೇರ ಬಯಸುವ ಉತ್ಸಾಹಿ ಯುವಕ-ಯುವತಿಯರಿಗೆ ಕೊಡಗಿನ ಜೈ ಭಾರತ್ ಕೋಚಿಂಗ್ ಸೆಂಟರ್ ಮತ್ತು ಆರ್ಮಿ ಅಕಾಡೆಮಿ ತರಬೇತಿ ನೀಡುವ ಮೂಲಕ ಸೇನೆಗೆ ಸಿದ್ಧಗೊಳಿಸುತ್ತಿದ್ದು ಈ ಬಾರಿ ಕೊರೊನಾದಿಂದ ತರಬೇತಿಗೆ ಅಡ್ಡಿಯಾಗಿದೆ.
ವೀರ ಯೋಧರ ನಾಡು ಎಂದು ಕರೆಯಲ್ಪಡುವ ಕೊಡಗಿನ ಹೆಗ್ಗಳಿಕೆಯ ವೀರ ಯೋಧರಾದ ಜನರಲ್ ತಿಮ್ಮಯ್ಯ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಸ್ಕಾ÷್ವಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರುಗಳಿಂದ ಹಿಡಿದು ಒಂದು ಕಾಲದಲ್ಲಿ ಭಾರತೀಯ ಸೇನೆಯಲ್ಲಿ ದೇಶಕ್ಕಾಗಿ ದುಡಿದವರು ದೇಶ ರಕ್ಷಣೆಗಾಗಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ದೇಶಕ್ಕಾಗಿ ಮಡಿದವರೂ ಇದ್ದಾರೆ.
ಕಳೆದ ಕೆಲವು ವರ್ಷಗಳಿಂದ ಭಾರತೀಯ ಸೇನೆಗೆ ಸೇರುವವರ ಸಂಖ್ಯೆ ಕೊಡಗಿನಲ್ಲಿ ಕಡಿಮೆಯಾಗ ತೊಡಗಿದೆ ಎಂಬ ಮಾತು ಕೇಳಿ ಬರುತ್ತಿದೆ. ಕೊಡಗಿನಲ್ಲಿ ಪ್ರತ್ಯೇಕವಾದ ಸೇನಾ ನೇಮಕಾತಿ ರ್ಯಾಲಿ ಇಲ್ಲದಿರುವುದು, ಸೇನೆಗೆ ಸೇರುವ ಯುವಕ-ಯುವತಿಯರಿಗೆ ಸರಿಯಾದ ತರಬೇತಿ ಹಾಗೂ ಬೆಂಬಲದ ಕೊರತೆ ಇದಕ್ಕೆ ಕಾರಣ.
ಯೋಧರಿಂದ ಸೇನಾ ತರಬೇತಿ ಕೇಂದ್ರ ಸ್ಥಾಪನೆ
ಭಾರತೀಯ ಸೇನೆಯಲ್ಲಿ ೨೨ ವರ್ಷಗಳ ಕಾಲ ಅತ್ಯುತ್ತಮ ಸೇವೆ ಸಲ್ಲಿಸಿದ ಪರಿಣಾಮ ೨೦೧೨ ರಲ್ಲಿ ಆರ್ಮಿ ಸೇವಾ ಮೆಡಲ್ ಪಡೆದಿರುವು ದಲ್ಲದೆ ಕಾರ್ಗಿಲ್ ಯುದ್ಧದ ಸಮಯ ದಲ್ಲಿ ಗಡಿ ರಕ್ಷಣಾ ಪಡೆಯಲ್ಲಿದ್ದು, ಆರ್ಮಿ ಕಮಾಂಡೊ ತರಬೇತು ದಾರನಾಗಿ ಸೇವೆ ಸಲ್ಲಿಸಿ ತಾಯಿ ನಾಡಿಗೆ ಹಿಂದಿರುಗಿದ ಅಮ್ಮತ್ತಿ-ಕಾರ್ಮಾಡುವಿನ ಕುಟ್ಟಂಡ ಲವಾ ಪೊನ್ನಪ್ಪ ಅವರು ಕೊಡಗಿ ನಲ್ಲೊಂದು ಆರ್ಮಿ ಕೋಚಿಂಗ್ ಸೆಂಟರನ್ನು ಸ್ಥಾಪಿಸಿದ್ದಾರೆ.
ಹಲವು ರಾಜ್ಯಗಳಲ್ಲಿ ನಡೆಯುತ್ತಿದ್ದ ಆರ್ಮಿ ಕೋಚಿಂಗ್ ಸೆಂಟರಿನ ಬಗ್ಗೆ ಮಾಹಿತಿ ಪಡೆದು ಬೆಂಗಳೂರಿನ ಐಎಸ್ಓ ನಿಂದ ಅನುಮತಿಯೊಂದಿಗೆ ೨೦೨೦ರಲ್ಲಿ ವೀರಾಜಪೇಟೆಯಲ್ಲಿ ಜೈ ಭಾರತ್ ಕೋಚಿಂಗ್ ಸೆಂಟರ್ ಹಾಗೂ ಆರ್ಮಿ ಅಕಾಡೆಮಿಯನ್ನು ಪ್ರಾರಂಭಿಸಿದರು.
ನಿಗದಿತ ಶುಲ್ಕದೊಂದಿಗೆ ಎರಡು ತಂಡಗಳಿಗೆ ನುರಿತ ಯೋಧರಿಂದ ಯುವಕ-ಯುವತಿಯರು ಸೇರಿ ಸುಮಾರು ೬೦ ವಿದ್ಯಾರ್ಥಿಗಳಿಗೆ ಆರ್ಮಿ, ಬಿಎಸ್ಎಫ್, ಸಿಆರ್ ಪಿಎಫ್, ಐಟಿಬಿಪಿ, ಕೆಎಸ್ಆರ್ಪಿ, ಸೇನೆಯ ಇತರ ಹುದ್ದೆಗಳು, ಏರ್ ಫರ್ಸ್, ನೇವಿ, ಪೊಲೀಸ್, ಫಾರೆಸ್ಟ್ನಲ್ಲಿ ಸೇರುವವರಿಗೆ ದೈಹಿಕ ತರಬೇತಿ ಹಾಗೂ ಪರೀಕ್ಷೆಯನ್ನು ಎದುರಿಸುವ ಸಾಮರ್ಥ್ಯ ಕುರಿತ ತರಬೇತಿಯನ್ನೆಲ್ಲ ಎರಡು ತಿಂಗಳವರೆಗೆ ತರಬೇತಿ ಒದಗಿಸಲಾಗುತ್ತಿತ್ತು. ನಿರಂತರವಾಗಿ ನಡೆÀಯುವ ಸೇನಾ ತರಬೇತಿಯಿಂದ ಕೊಡಗಿ ನಿಂದ ಅದೆಷ್ಟೋ ಯುವಕ-ಯುವತಿಯರು ಸೇನೆಗೆ ಸೇರಲು ಸಿದ್ಧರಾಗುತ್ತಿದ್ದರು. ಆದರೆ ಈ ಬಾರಿಯ ಕೊರೊನಾ ಲಾಕ್ಡೌನ್ ಪ್ರಾರಂಭವಾದಲ್ಲಿAದ ಸೇನಾ ತರಬೇತಿ ನಡೆಯಲು ಸಾಧ್ಯ ವಾಗುತ್ತಿಲ್ಲ.
ಲಾಕ್ಡೌನ್ ಮುಗಿದ ನಂತರವಷ್ಟೇ ಮುಂದಿನ ತಂಡ ವನ್ನು ಆಯ್ಕೆಮಾಡಿ ತರಬೇತಿ ನೀಡ ಲಾಗುವುದೆಂದು ತರಬೇತಿ ಸಂಸ್ಥೆಯ ಮುಖ್ಯಸ್ಥ ನಿವೃತ್ತ ಯೋಧ ಕುಟ್ಟಂಡ ಲವಾ ಪೊನ್ನಪ್ಪ ಹೇಳುತ್ತಾರೆ.
- ಪುತ್ತರಿರ ಕರುಣ್ ಕಾಳಯ್ಯ