ಡಿಜಿಟಲ್ ಯುಗದಲ್ಲಿ ಫೇಸ್‌ಬುಕ್, ವಾಟ್ಸಾಪ್, ಟ್ವಿಟರ್, ಇನ್ಸಾ÷್ಟಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣವನ್ನು ಬಳಸದವರು ಬಹಳ ಕಡಿಮೆ. ರಾಜಕಾರಣಿಗಳು, ಸರಕಾರಿ ಅಧಿಕಾರಿಗಳು ಸೇರಿದಂತೆ ಸಮಾಜದ ಉನ್ನತ ಶ್ರೇಣಿಯಲ್ಲಿರುವ ವ್ಯಕ್ತಿಗಳ ಹೆಸರಿನಲ್ಲಿ ಫೇಸ್‌ಬುಕ್‌ನಲ್ಲಿ ನಕಲಿ ಖಾತೆಯನ್ನು ಸೃಷ್ಟಿಸಿ ಮೆಸ್ಸೆಂಜರ್ ಮೂಲಕ ಹಣ ದೋಚುವ ಗುಂಪುಗಳು ಇಡೀ ದೇಶಾದ್ಯಂತ ವ್ಯಾಪಿಸಿದ್ದು, ಈ ಕುರಿತು ಹಲವು ದೂರುಗಳು ದಾಖಲಾಗಿದ್ದು, ಈ ಬಗ್ಗೆ ವರ್ಷದ ಹಿಂದೆಯೇ "ಶಕ್ತಿಯಲ್ಲಿ" ವರದಿ ಕೂಡಾ ಪ್ರಕಟವಾಗಿತ್ತು.

ಭಾರತದಲ್ಲಿ ಸೋಶಿಯಲ್ ಮೀಡಿಯಾ ಗೀಳು ಜಾಸ್ತಿ ಇದ್ದು, ಸೆಕ್ಯುರಿಟಿ ರಿಸ್ಕ್ ತುಂಬಾ ಹೆಚ್ಚಾಗಿರು ವುದರಿಂದ ಖಾಸಗಿ ಮಾಹಿತಿಗಳು ಸುಲಭವಾಗಿ ಸೈಬರ್ ಖದೀಮರ ಕೈಸೇರುತ್ತಿರುವ ಬಗ್ಗೆ ಈ ಹಿಂದೆಯೇ ಸೈಬರ್ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಇದರ ನಡುವೆ ಇದೀಗ ಫೇಸ್‌ಬುಕ್‌ನಲ್ಲಿ ಮೆಸ್ಸೆಂಜರ್ ಮೂಲಕ ಸೆಕ್ಸ್ ವೀಡಿಯೋ ಮಾಡುವ ಮಹಿಳೆಯರನ್ನು ಒಳಗೊಂಡ ಸೈಬರ್ ಖದೀಮರ ಗುಂಪುಗಳು ಹಣದ ಬೇಡಿಕೆಯೊಂದಿಗೆ ವ್ಯಕ್ತಿಗಳ ಮಾನವೂ ಹರಾಜು ಮಾಡುವುದಾಗಿ ಬೆದರಿಕೆ ಹಾಕುತ್ತಿರುವ ಕೆಲವು ಘಟನೆಗಳು ಜಿಲ್ಲೆಯ ವಿವಿಧ ಭಾಗಗಳಲ್ಲಿ ನಡೆದಿದೆ ಎಂಬ ಮಾತು ಕೇಳಿಬಂದಿದೆ.

ಏನಿದು ನಗ್ನ ವೀಡಿಯೋ ಕಾಲ್ ಪ್ರಕರಣ?

ಮೊದಲಿಗೆ ಅಪರಿಚಿತ ಯುವತಿಯ ಅಥವಾ ಮಹಿಳೆಯ ಫೋಟೋ ಇರುವ ಫೇಸ್‌ಬುಕ್ ಖಾತೆ ಯಿಂದ ಒಬ್ಬ ವ್ಯಕ್ತಿಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸುತ್ತಾರೆ. ರಿಕ್ವೆಸ್ಟನ್ನು ಸ್ವೀಕರಿಸಿ ಒಪ್ಪಿಕೊಂಡ ನಂತರ ಮೆಸ್ಸೆಂಜರ್ ಮೂಲಕ ಹಿಂದಿ/ಇAಗ್ಲಿಷ್ ಭಾಷೆಯಲ್ಲಿ (ಹೆಚ್ಚಾಗಿ ಬಳಸುವ ಭಾಷೆ) ಚಾಟಿಂಗ್ ಪ್ರಾರಂಭಿಸಿ ವ್ಯಕ್ತಿಯ ಜೊತೆಗೆ ಗೆಳೆತನದ ನಾಟಕ ಮಾಡುತ್ತಾರೆ.

ಬಳಿಕ ವಾಟ್ಸಾಪ್ ನಂಬರ್ ಕೂಡಾ ಪಡೆಯುತ್ತಾರೆ. ಕೊನೆಗೆ ಫೇಸ್‌ಬುಕ್ ಮೆಸ್ಸೆಂಜರ್ ಮೂಲಕ ನಗ್ನ ವೀಡಿಯೋ ಕಾಲ್ ಮಾಡುವ ಮಹಿಳೆ ಆಮಿಷಗಳನ್ನು ನೀಡಿ ಕೆಲವೇ ನಿಮಿಷಗಳಲ್ಲಿ ವ್ಯಕ್ತಿಯನ್ನು ಬೆತ್ತಲೆ ಮಾಡಿಸಿ, ಮಾತನಾಡುತ್ತಾ ಇಡೀ ವೀಡಿಯೋವನ್ನು ರೆಕಾರ್ಡ್ ಮಾಡುತ್ತಾರೆ.

ಇದಾದ ಕೆಲವು ಸಮಯದ ನಂತರ ಈ ಖದೀಮರ ಗುಂಪಿನಿAದ ಬ್ಲ್ಯಾಕ್ ಮೇಲ್ ತಂತ್ರ ಪ್ರಾರಂಭ ವಾಗುತ್ತದೆ. "ಈ ನಗ್ನ ಹುಡುಗಿಯ / ಮಹಿಳೆಯ ಜೊತೆಗಿನ ನಿನ್ನ ಈ ವೀಡಿಯೋ ಫೇಸ್‌ಬುಕ್, ವಾಟ್ಸಾಪ್, ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗುವುದು. ವೈರಲ್ ಮಾಡಬಾರದು ಎಂದರೆ ಇಂತಿಷ್ಟು ಹಣ ನೀಡಬೇಕು. ಈ ವೀಡಿಯೋ ನಿನ್ನ ಮನೆಯವರು/ಕುಟುಂಬ ನೋಡಿದರೆ ನಿನ್ನ ಇಡೀ ಕುಟುಂಬ ಫಿನಿಶ್. ಹಾಗಾಗಿ ನಾವು ಹೇಳುವ ಬ್ಯಾಂಕ್ ಖಾತೆಗೆ ಬೇಗ ದುಡ್ಡು ಹಾಕು, ಆಮೇಲೆ ವೀಡಿಯೋ ಡಿಲೀಟ್ ಮಾಡುವುದಾಗಿ" ಬೆದರಿಕೆಯ ಸಂದೇಶ ಕಳಿಸುತ್ತಾರೆ.

ಜಿಲ್ಲೆಯ ಕೆಲವು ಕಡೆಗಳಲ್ಲಿ ಈ ರೀತಿಯ ಘಟನೆಗಳು ಸಂಭವಿಸಿವೆ. ಬ್ಲ್ಯಾಕ್ ಮೇಲ್ ಮಾಡುವ ಈ ಸೈಬರ್ ಖದೀಮರ ಗುಂಪು ೧೦ ಲಕ್ಷದಿಂದ ಪ್ರಾರಂಭಿಸಿ ಕೊನೆಗೆ ೫ ಸಾವಿರದವರೆಗೂ ಬೇಡಿಕೆ ಇಡುತ್ತಾರೆ. ಅಲ್ಲದೆ ವ್ಯಕ್ತಿಯ ಫೇಸ್‌ಬುಕ್‌ನ ಮ್ಯೂಚುವಲ್ ಫ್ರೆಂಡ್ಸ್ನಲ್ಲಿರುವ ಒಂದಿಬ್ಬರನ್ನು ಸಂಪರ್ಕಿಸಿ ಅವರ ಮೂಲಕವೂ ಹಣಕ್ಕಾಗಿ ಒತ್ತಡ ಹಾಕುವ ಪ್ರಯತ್ನ ಮಾಡುತ್ತಾರೆ. ಒಂದು ವೇಳೆ ನಗ್ನ ವೀಡಿಯೋ ಕಾಲ್ ಮಾಡಿದ ಸಂದರ್ಭ ವ್ಯಕ್ತಿ ಬೆತ್ತಲಾಗಲು ಒಪ್ಪದಿದ್ದರೆ ನಗ್ನ ಹುಡುಗಿಯ ಜೊತೆಗಿನ ವ್ಯಕ್ತಿಯ ಫೋಟೋ ಸ್ಕಿçÃನ್ ಶಾರ್ಟ್ ತೆಗೆದು ಬ್ಲ್ಯಾಕ್ ಮೇಲ್ ಮಾಡುತ್ತಾರೆ. ಮದುವೆಯಾಗಿರುವ ವ್ಯಕ್ತಿಗಳನ್ನು ಹೆಚ್ಚಾಗಿ ಟಾರ್ಗೆಟ್ ಮಾಡಲಾಗುತ್ತಿದೆ.

ದೂರುಗಳು ದಾಖಲಾಗಿಲ್ಲ...

ಆದರೆ ಜಿಲ್ಲೆಯಲ್ಲಿ ಈ ಬ್ಲ್ಯಾಕ್ ಮೇಲ್ ಗುಂಪಿನ ಬಲೆಗೆ ಬಿದ್ದವರು ಹಣ ಕಳೆದುಕೊಂಡಿರುವ ಬಗ್ಗೆ ಯಾವುದೇ ದೂರುಗಳಾಗಿಲ್ಲ. ಕುಟುಂಬದ ಹಾಗೂ ವೈಯಕ್ತಿಕ ಗೌರವಕ್ಕೆ ಧಕ್ಕೆಯಾಗುತ್ತದೆ ಎಂದು ಮರ್ಯಾದೆ ಅಂಜಿ ದೂರು ನೀಡಲು ಸಹ ಯಾರೂ ಮುಂದಾಗಿಲ್ಲ.

ಅಪರಿಚಿತರ ಫ್ರೆಂಡ್ ರಿಕ್ವೆಸ್ಟ್ ಬಂದರೆ ಅವರು ಯಾರು, ಏನು ಅಂತ ತಿಳಿಯದೆ ಅಂತವರನ್ನು ಫ್ರೆಂಡ್ ಮಾಡುವ ಮೊದಲು ಎಚ್ಚರವಹಿಸ ಬೇಕಾಗಿದೆ. ಬ್ಲ್ಯಾಕ್ ಮೇಲ್ ಮಾಡಿದಾಗ ಕಂಗಾಲಾಗಿ ಅವರಿಗೆ ದುಡ್ಡು ಕಳಿಸಿದರೆ ಮತ್ತಷ್ಟು ಹಣಕ್ಕೆ ಬೇಡಿಕೆ ಇಡುವ ಸಾಧ್ಯತೆ ಹೆಚ್ಚಿರುವುದರಿಂದ ಈ ಬಗ್ಗೆ ಜಾಗೃತರಾಗಿರಬೇಕು. ವಾಟ್ಸಾಪ್‌ನಲ್ಲಿ ಕೂಡಾ ವೀಡಿಯೋ ಕಾಲ್ ಮಾಡುವ ವ್ಯವಸ್ಥೆ ಇರುವುದರಿಂದ ಅಪರಿಚಿತರಿಗೆ ವಾಟ್ಸಾಪ್ ನಂಬರ್ ನೀಡುವಾಗ ಎಚ್ಚರವಹಿಸಬೇಕಾಗಿದೆ ಹಾಗೂ ಅಪರಿಚಿತ ಸಂಖ್ಯೆಯಿAದ ಬರುವ ವಾಟ್ಸಾಪ್ ವೀಡಿಯೋ ಕರೆಯನ್ನು ಪರಿಶೀಲಿಸದೆ ಸ್ವೀಕರಿಸಿದರೆ ಅಪಾಯ ಎದುರಾಗುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳನ್ನು ಅತ್ಯಂತ ಸೂಕ್ಷö್ಮತೆ ಹಾಗೂ ಎಚ್ಚರಿಕೆ ಯಿಂದ ಬಳಸ ಬೇಕಾಗಿದೆ.

- ಮುಸ್ತಫಾ, ಸಿದ್ದಾಪುರ