ಉತ್ತರಾಖಂಡದ ಮುಖ್ಯಮಂತ್ರಿಯಾಗಿ ಪುಷ್ಕರ್ ಸಿಂಗ್
ಡೆಹ್ರಾಡೂನ್, ಜು. ೪: ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ನಂತರ ಉತ್ತರಾಖಂಡ ರಾಜ್ಯದ ೧೧ನೇ ಮುಖ್ಯಮಂತ್ರಿಯಾಗಿ ಬಿಜೆಪಿ ಮುಖಂಡ ಪುಷ್ಕರ್ ಸಿಂಗ್ ಧಮಿ ಭಾನುವಾರ ಅಧಿಕಾರ ಸ್ವೀಕರಿ ಸಿದರು. ಪುಷ್ಕರ್ ಸಿಂಗ್ ಧಮಿ ಕಾಟಿಮಾ ಕ್ಷೇತ್ರದಿಂದ ಎರಡು ಶಾಸಕ ರಾಗಿದ್ದರೂ ರಾಜ್ಯ ಸರ್ಕಾರದಲ್ಲಿ ಸಚಿವರಾಗಿರಲಿಲ್ಲ ಆದರೆ, ಧಮಿ ಉತ್ತರಾ ಖಂಡ ರಾಜ್ಯದ ಕಿರಿಯ ವಯಸ್ಸಿನ ಮುಖ್ಯಮಂತ್ರಿಯಾಗಿ ಹೊರಹೊಮ್ಮಿದ್ದಾರೆ. ಸುಮಾರು ನಾಲ್ಕು ತಿಂಗಳ ಅವಧಿಯಲ್ಲಿ ಮೂರನೇ ಮುಖ್ಯಮಂತ್ರಿಯಾಗಿ ಅಧಿಕಾರಿ ಸ್ವೀಕರಿಸಿರುವ ಧಮಿ, ಶನಿವಾರ ಉತ್ತರಾ ಖಂಡ ರಾಜ್ಯದ ಬಿಜೆಪಿ ಶಾಸಕಾಂಗ ಪಕ್ಷದ ನೂತನ ನಾಯಕನಾಗಿ ಆಯ್ಕೆಯಾಗಿದ್ದರು.
ವೈಮಾನಿಕ ವಾಹನಗಳಿಗೆ ನಿಷೇಧ
ಶ್ರೀನಗರ, ಜು. ೪: ಡ್ರೋನ್ ಬಳಸಿ ಜಮ್ಮು ವಾಯುನೆಲೆ ಮೇಲೆ ದಾಳಿಯಾದ ನಂತರ ಡ್ರೋನ್ಗಳು ಮತ್ತು ಇದೇ ರೀತಿಯ ಮಾನವ ರಹಿತ ವೈಮಾನಿಕ ವಾಹನಗಳಿಗೆ ಶ್ರೀನಗರ ಜಿಲ್ಲಾ ಆಡಳಿತ ನಿರ್ಬಂಧ ಹೇರಿದೆ. ಶ್ರೀನಗರ ಜಿಲ್ಲಾ ವ್ಯಾಪ್ತಿಯೊಳಗೆ ಡ್ರೋಣ್ಗಳಂತಹ ಮಾನವ ರಹಿತ ವಾಹನಗಳ ಬಳಕೆ, ಹಾರಾಟ, ಸಂಗ್ರಹ, ಮಾರಾಟವನ್ನು ನಿಷೇಧಿಸಿ ಶ್ರೀನಗರ ಜಿಲ್ಲಾಧಿಕಾರಿ ಮೊಹಮ್ಮದ್ ಅಜಾಜ್ ಶನಿವಾರ ಆದೇಶ ಹೊರಡಿಸಿದ್ದಾರೆ. ಈಗಾಗಲೇ ಡ್ರೋನ್ ಕ್ಯಾಮೆರಾಗಳು, ಅಂತಹುದೇ ಮಾನವರಹಿತ ವೈಮಾನಿಕ ವಾಹನಗಳನ್ನು ಹೊಂದಿರುವ ವ್ಯಕ್ತಿಗಳು ಸರಿಯಾದ ರಶೀದಿಯಡಿಯಲ್ಲಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಇಡಬೇಕೆಂದು ಆದೇಶಿಸಲಾಗಿದೆ ಎಂದು ಅಜಾಜ್ ಆದೇಶದಲ್ಲಿ ತಿಳಿಸಿದ್ದಾರೆ. ಕೃಷಿ, ಪರಿಸರ ಸಂರಕ್ಷಣೆ ಮತ್ತು ವಿಪತ್ತು ತಗ್ಗಿಸುವಿಕೆ ಕ್ಷೇತ್ರಗಳಲ್ಲಿ ಮ್ಯಾಪಿಂಗ್, ಸಮೀಕ್ಷೆಗಳು ಮತ್ತು ಕಣ್ಗಾವಲುಗಾಗಿ ಡ್ರೋನ್ಗಳನ್ನು ಬಳಸುವ ಸರ್ಕಾರಿ ಇಲಾಖೆಗಳು ಸಾರ್ವಜನಿಕ ಹಿತದೃಷ್ಟಿಯಿಂದ ಇಂತಹ ಯಾವುದೇ ಚಟುವಟಿಕೆಯನ್ನು ಕೈಗೊಳ್ಳುವ ಮೊದಲು ಸ್ಥಳೀಯ ಪೊಲೀಸರಿಗೆ ತಿಳಿಸಬೇಕಾಗುತ್ತದೆ ಆದೇಶದಲ್ಲಿ ಹೇಳಲಾಗಿದೆ. ಒಂದು ವೇಳೆ ಆದೇಶ ಉಲ್ಲಂಘನೆಯಾದಲ್ಲಿ ಶಿಕ್ಷಾರ್ಹ ಅಪರಾಧವಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ಮೀನುಗಾರರು ನಾಪತ್ತೆ
ಕಾಸರಗೋಡು, ಜು. ೪: ಕಾಸರಗೋಡು ಕರಾವಳಿಯ ಅರಬ್ಬಿ ಸಮುದ್ರದಲ್ಲಿ ಭಾನುವಾರ ಮುಂಜಾನೆ ದೋಣಿ ಮುಳುಗಿ ಮೂವರು ಮೀನುಗಾರರು ನಾಪತ್ತೆಯಾಗಿರುವ ಘಟನೆ ನಡೆದಿದೆ. ಇಲ್ಲಿನ ಕಿಜೂರ್ ಕರಾವಳಿಯ ಅರಬ್ಬಿ ಸಮುದ್ರದಲ್ಲಿ ಏಳು ಮೀನುಗಾರರಿದ್ದ ದೋಣಿ ಮುಳುಗಡೆಯಾಗಿದ್ದು, ಈ ಪೈಕಿ ನಾಲ್ವರು ಮೀನುಗಾರರು ಕಡಲ ತೀರಕ್ಕೆ ಈಜಿ ಸುರಕ್ಷಿತವಾಗಿ ಪಾರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ನಾಪತ್ತೆಯಾದ ಮೀನುಗಾರರನ್ನು, ಕಾರ್ತಿಕ್ ರತ್ಗೀಶ್ ಮತ್ತು ಸಂದೀಪ್ ಎಂದು ಗುರುತಿಸಲಾಗಿದೆ. ನಾಪತ್ತೆಯಾದವರ ಪತ್ತೆಗೆ ಕರಾವಳಿ ರಕ್ಷಣಾ ಪಡೆ ಮತ್ತು ಇತರ ಮೀನುಗಾರರು ಶೋಧ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತಮಿಳುನಾಡು ಸಿಎಂ ಸ್ಟಾಲಿನ್ಗೆ ಪತ್ರ ಬರೆದ ಯಡಿಯೂರಪ್ಪ
ಬೆಂಗಳೂರು, ಜು. ೪: ಮೇಕೆದಾಟು ಬಳಿ ಸಮಾನಾಂತರ ಜಲಾಶಯ ನಿರ್ಮಿಸುವ ಕರ್ನಾಟಕದ ಯೋಜನೆಯಿಂದ ತಮಿಳುನಾಡಿನ ಹಿತಾಸಕ್ತಿಗೆ ಯಾವುದೇ ರೀತಿಯಿಂದಲೂ ಧಕ್ಕೆಯಾಗದು. ಹೀಗಾಗಿ ಈ ಯೋಜನೆಗೆ ಅಡ್ಡಿಪಡಿಸಬಾರದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರಿಗೆ ಪತ್ರ ಬರೆದಿದ್ದಾರೆ. ವಿದ್ಯುತ್ ಉತ್ಪಾದನೆಗೆ ಸುಪ್ರೀಂಕೋರ್ಟ್ ಅವಕಾಶ ನೀಡಿದ್ದ ಕಾರಣ ಸುಪ್ರೀಂಕೋರ್ಟ್ ಆದೇಶದನ್ವಯ ಯೋಜನೆ ಕೈಗೆತ್ತಿಕೊಳ್ಳಲಿದ್ದೇವೆ. ಯೋಜನೆಯಿಂದ ೪೦೦ ಮೆಗಾವಾಟ್ ವಿದ್ಯುತ್ ಉತ್ಪಾದಿಸಲು ಅವಕಾಶವಿದೆ. ಬೆಂಗಳೂರಿಗೆ ಕುಡಿಯುವ ನೀರು ಪೂರೈಸುವುದಕ್ಕಾಗಿ ೪.೭೫ ಟಿಎಂಸಿ ಅಡಿ ನೀರನ್ನು ಕೊಂಡೊಯ್ಯುವುದಕ್ಕೂ ಅನುಮತಿ ನೀಡಲಾಗಿತ್ತು. ಈ ಯೋಜನೆ ಎರಡೂ ರಾಜ್ಯಕ್ಕೆ ಉಪಯುಕ್ತವಾಗಲಿದೆ. ಜತೆಗೆ ಯೋಜನೆಯಿಂದ ತಮಿಳುನಾಡಿನ ರೈತರಿಗೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಪತ್ರದಲ್ಲಿ ಈಗಾಗಲೇ ತಮಿಳುನಾಡು ಸರ್ಕಾರದಿಂದ ಸುಪ್ರೀಂಗೆ ಅರ್ಜಿ ಸಲ್ಲಿಸಿರುವುದನ್ನು ಉಲ್ಲೇಖಿಸಿರುವ ಸಿಎಂ ಯಡಿಯೂರಪ್ಪ, ನಾವೂ ಯೋಜನೆಗೆ ಅನುಮತಿ ಕೋರಿ ಕೇಂದ್ರ ಸರ್ಕಾರದ ಮುಂದೆ ಮನವಿ ಸಲ್ಲಿಸಿದ್ದೇವೆ. ತಮಿಳುನಾಡು ಸರ್ಕಾರ ಕಾವೇರಿ ನೀರು ಬಳಸಿ ಪವರ್ ಪ್ರಾಜೆಕ್ಟ್ ಆರಂಭಿಸಲು ನಿರ್ಧರಿಸಿದೆ. ಎರಡೂ ರಾಜ್ಯದ ನಡುವೆ ಸಾಮರಸ್ಯ ಮುಂದುವರಿಯಲಿ. ಮೇಕೆದಾಟು ಯೋಜನೆಗೆ ತಮಿಳುನಾಡಿನಿಂದ ಅಡ್ಡಿ ಬೇಡ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ವೀರ ಯೋಧನಿಗೆ ವಿದಾಯ
ವಿಜಯಪುರ, ಜು. ೪: ದಕ್ಷಿಣ ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಹುತಾತ್ಮರಾದ ಕಾಶಿರಾಯ ಅಂತಿಮ ಸಂಸ್ಕಾರ ಸಕಲ ಸರಕಾರಿ ಗೌರವದೊಂದಿಗೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಉಕ್ಕೆಲಿ ಗ್ರಾಮದಲ್ಲಿ ನಡೆಯಿತು. ಸೇನೆ ಹಾಗೂ ಪೊಲೀಸರು ಗಾಳಿಯಲ್ಲಿ ಮೂರು ಸುತ್ತಿನ ಗುಂಡು ಹಾರಿಸಿ ಹುತಾತ್ಮ ಸೈನಿಕನಿಗೆ ಗೌರವ ಅರ್ಪಿಸಿದರು. ಯೋಧನ ಪಾರ್ಥಿವ ಶರೀರದ ಮೇಲಿದ್ದ ರಾಷ್ಟçಧ್ವಜವನ್ನು ಮಡದಿ ಹಾಗೂ ತಾಯಿಗೆ ಹಸ್ತಾಂತರಿಸಿದರು.
೧೯೪ ಮೊಸಳೆಗಳ ಸ್ಥಳಾಂತರ
ಅಹ್ಮದಾಬಾದ್, ಜು. ೪: ಗುಜರಾತ್ನ ಸ್ಟಾö್ಯಚ್ಯು ಆಫ್ ಯೂನಿಟಿಯಲ್ಲಿರುವ ಪ್ರವಾಸಿಗರಿಗೆ ದೋಣಿ ವಿಹಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಸರ್ದಾರ್ ಸರೋವರದಲ್ಲಿದ್ದ ಸುಮಾರು ೧೯೪ ಮೊಸಳೆಗಳನ್ನು ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಸ್ಟಾö್ಯಚ್ಯು ಆಫ್ ಯೂನಿಟಿ ಗುಜರಾತ್ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದ್ದು, ದೋಣಿ ವಿಹಾರವನ್ನು ಆನಂದಿಸಲು ಬರುವ ಪ್ರವಾಸಿಗರ ಸುರಕ್ಷತೆಗಾಗಿ ಕಳೆದ ಎರಡು ವರ್ಷಗಳಲ್ಲಿ ಗುಜರಾತ್ನ ನರ್ಮದಾ ಜಿಲ್ಲೆಯ ಪ್ರತಿಮೆ ಯೂನಿಟಿ ಬಳಿಯ ಸರೋವರದಿಂದ ೧೯೪ ಮೊಸಳೆಗಳನ್ನು ಸ್ಥಳಾಂತರಿಸಲಾಗಿದೆ. ಕೆವಾಡಿಯಾದ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ೧೮೨ ಮೀಟರ್ ಎತ್ತರದ ಪ್ರತಿಮೆಯ ಬಳಿ ಇರುವ ಪಂಚಮುಲಿ ಸರೋವರವು ಹೆಚ್ಚಿನ ಸಂಖ್ಯೆಯ ಮೊಸಳೆಗಳನ್ನು ಹೊಂದಿದ್ದು ಪ್ರವಾಸಿಗರಿಗೆ ಅಪಾಯವನ್ನುಂಟುಮಾಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬಿ ರಿಪೋರ್ಟ್ ತಿರಸ್ಕರಿಸಿದ ನ್ಯಾಯಾಲಯ
ಬೆಂಗಳೂರು, ಜು. ೪: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ನೋಟಿಫಿಕೇಶನ್ ಕೇಸಿಗೆ ಸಂಬAಧಪಟ್ಟAತೆ ಮತ್ತೊಮ್ಮೆ ಹಿನ್ನಡೆಯಾಗಿದೆ. ನಗರದ ಪ್ರಮುಖ ಪ್ರದೇಶವೊಂದರಲ್ಲಿ ೧೫ ವರ್ಷಗಳ ಹಳೆಯ ಡಿನೋಟಿ ಫಿಕೇಶನ್ ಪ್ರಕರಣಕ್ಕೆ ಸಂಬAಧಪಟ್ಟAತೆ ತನಿಖೆಯನ್ನು ಅಂತ್ಯಗೊಳಿಸುವAತೆ ಕೋರಿ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟ್ನ್ನು ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ. ಇದೇ ವೇಳೆ ನ್ಯಾಯಾಲಯ ತನಿಖೆಯನ್ನು ತ್ವರಿತಗೊಳಿಸಿ ಅಂತಿಮ ಅಥವಾ ಹೆಚ್ಚುವರಿ ವರದಿಯನ್ನು ಕೂಡಲೇ ಸಲ್ಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಆದೇಶ ನೀಡಿದೆ. ಕ್ರಿಮಿನಲ್ ವಿಧಾನ ಕೋಡ್ನ ಸೆಕ್ಷನ್ ೧೭೩(೨)ರಡಿ ತನಿಖಾಧಿಕಾರಿಗಳು ಸಲ್ಲಿಸಿರುವ ಬಿ ರಿಪೋರ್ಟ್ನ್ನು ತಿರಸ್ಕರಿಸಲಾಗುವುದು ಎಂದು ನ್ಯಾಯಾಧೀಶ ಶ್ರೀಧರ್ ಗೋಪಾಲಕೃಷ್ಣ ಭಟ್ ವಿಚಾರಣೆ ಬಳಿಕ ತಿಳಿಸಿದರು.
ನೀರು ಬಳಕೆ ನೀತಿ ಕುರಿತು ಸಂಪುಟ ಸಮಿತಿಯಲ್ಲಿ ಚರ್ಚೆ
ಬೆಂಗಳೂರು, ಜು. ೪: ನೀರಿನ ಬಳಕೆಗಾಗಿ ಸಮಗ್ರ ನೀತಿ ರೂಪಿಸುತ್ತಿರುವ ಸಂಪುಟ ಉಪಸಮಿತಿ ಶನಿವಾರ ಉಪಮುಖ್ಯಮಂತ್ರಿ ಗೋವಿಂದ್ ಕಾರ್ಜೋಲ್ ಅವರ ಅಧ್ಯಕ್ಷತೆಯಲ್ಲಿ ಸಭೆ ಸೇರಿತು. ಈ ವೇಳೆ ಐದು ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಲು ನಿರ್ಧಾರ ಕೈಗೊಳ್ಳಲಾಯಿತು ಎಂದು ತಿಳಿದುಬಂದಿದೆ. ಕುಡಿಯುವ, ನೀರಾವರಿ, ಪಶುಸಂಗೋಪನೆ, ವಿದ್ಯುತ್, ಕೈಗಾರಿಕೆಗಳು ಮತ್ತು ಪರಿಸರ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವರದಿಗಳು ತಿಳಿಸಿವೆ. ಪ್ರಸ್ತುತ ಲಭ್ಯತೆಯ ಆಧಾರದ ಮೇಲೆ ಪ್ರತೀ ವ್ಯಕ್ತಿಗೆ ನೀರಿನ ಬಳಕೆಯನ್ನು ಗ್ರಾಮೀಣ ಪ್ರದೇಶಗಳಲ್ಲಿ ದಿನಕ್ಕೆ ೫೫ ಲೀಟರ್, ನಗರ ಪ್ರದೇಶಗಳಲ್ಲಿ ೭೫ ಲೀಟರ್ ಮತ್ತು ಬೆಂಗಳೂರಿನAತಹ ದೊಡ್ಡ ನಗರಗಳಲ್ಲಿ ೯೦ ಲೀಟರ್ರಂತೆ ಬಳಕೆ ಮಾಡಲಾಗುತ್ತಿದೆ. ಸಭೆಯಲ್ಲಿ ಪ್ರಸ್ತುತ ಎದ್ದಿರುವ ಪ್ರಶ್ನೆಗಳಿಗೆ ಸಂಬAಧಿಸಿದAತೆ ವಿವರಗಳ ಸಲ್ಲಿಸಲು ಅಧಿಕಾರಿಗಳಿಗೆ ೧೫ ದಿನಗಳ ಕಾಲಾವಕಾಶವನ್ನು ಸಮಿತಿ ನೀಡಿದೆ ಎಂದು ತಿಳಿದುಬಂದಿದೆ.