ಪೊನ್ನಂಪೇಟೆ, ಜು. ೨: ಯಾವುದೇ ಉದ್ಯಮ ಅಥವಾ ವ್ಯವಹಾರವನ್ನು ಆರ್ಥಿಕ ಲಾಭದ ದೃಷ್ಟಿಯಿಂದ ಮಾತ್ರ ಕೇಂದ್ರೀಕರಿಸಬಾರದು. ಉದ್ಯಮಶೀಲತೆ ಎಂಬುದು ಸಮಾಜದ ಉನ್ನತಿಗೆ ಪೂರಕವಾಗಿರಬೇಕು. ಅಲ್ಲದೆ, ಅದು ಸಾಮಾಜಿಕ ಬದಲಾವಣೆಗೂ ದಾರಿಯಾಗಬೇಕು ಎಂದು ಜೇಸಿಸ್ನ ಉದಯೋನ್ಮುಖ ತರಬೇತುದಾರರಾದ, ವಲಯದ ವ್ಯವಹಾರ ವಿಭಾಗದ ನಿರ್ದೇಶಕ ಪ್ರಜ್ವಲ್ ಜೈನ್ ಅಭಿಪ್ರಾಯಪಟ್ಟರು.
ಜೆ. ಸಿ. ಐ. ಪೊನ್ನಂಪೇಟೆ ನಿಸರ್ಗ ಮತ್ತು ಜೆ.ಸಿ ಐ. ಮೈಸೂರು ಕಿಂಗ್ಸ್ ಘಟಕಗಳ ವತಿಯಿಂದ 'ವ್ಯವಹಾರ ಅಭಿವೃದ್ಧಿ' ಕುರಿತ ಆನ್ ಲೈನ್ ತರಬೇತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಸಾಮಾಜಿಕ ಚಿಂತನೆಗಳೊAದಿಗೆ ದೂರದೃಷ್ಟಿ ಹೊಂದಿರುವ ಮತ್ತು ಬಹುಕಾಲದ ಮಹತ್ವಾಕಾಂಕ್ಷೆಗಳೊAದಿಗೆ ಆರಂಭಗೊಳ್ಳುವ ಯಾವ ಉದ್ಯಮವೂ ಇದುವರೆಗೆ ವಿಫಲತೆಯನ್ನು ಕಂಡಿಲ್ಲ ಎಂದು ಹೇಳಿದರು.
‘ಜೂಮ್' ವೇದಿಕೆಯ ಮೂಲಕ ನಡೆದ ಈ ವೆಬಿನಾರನ್ನು ಉದ್ಘಾಟಿಸಿ ಮಾತನಾಡಿದ ಭಾರತೀಯ ಜೇಸಿಸ್ ನ ವಲಯ ೧೪ರ ವಲಯಾಧ್ಯಕ್ಷ ಸೆನೆಟರ್ ಭರತ್ ಎನ್. ಆಚಾರ್ಯ ಅವರು, ಉದ್ಯಮಶೀಲತೆಗೆ ಹಿಂದಿನಿAದಲೂ ಒತ್ತು ನೀಡುತ್ತಿರುವ ಜೇಸಿಸ್ ಸಂಸ್ಥೆ ರಾಷ್ಟçದ ಉದ್ಯಮ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾದದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಂಡಿದ್ದ ವಲಯ ಉಪಾಧ್ಯಕ್ಷ ಬಾಬು ಎನ್. ಗೌಡ ಅವರು ಈ ಸಂದರ್ಭದಲ್ಲಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆ.ಸಿ.ಐ. ಪೊನ್ನಂಪೇಟೆ ನಿಸರ್ಗ ಘಟಕದ ಅಧ್ಯಕ್ಷ ಎಂ.ಎನ್. ಪೇಜಾವರ ಗೋ ಸೇವಾ ಕೇಂದ್ರ ಸುಮೇಧ ಫೌಂಡೇಶನ್ ಗೋ ಶಾಲೆಗೆ ತಲುಪಿಸಲಾಯಿತು.
ಈ ಸಂದರ್ಭ ವಿಶ್ವ ಹಿಂದೂ ಪರಿಷತ್ನ ಅಧ್ಯಕ್ಷ ಮನೋಜ್ ವನಿತ್ಕುಮಾರ್ ಅವರು ವಹಿಸಿದ್ದರು. ಆರಂಭದಲ್ಲಿ ಕುಪ್ಪಂಡ ಜಶ್ಮಿ ದಿಲನ್ ಜೇಸಿವಾಣಿ ವಾಚಿಸಿದರು. ಜೆ.ಸಿ.ಐ. ಮೈಸೂರು ಕಿಂಗ್ಸ್ ಘಟಕದ ಅಧ್ಯಕ್ಷರಾದ ಟಿ.ಸಿ. ಮಂಜುನಾಥ್ ಸ್ವಾಗತಿಸಿದರು. ರಾಕೇಶ್ ಅವರು ಸಂಪನ್ಮೂಲ ಅತಿಥಿಗಳನ್ನು ಪರಿಚಯಿಸಿದರು. ಶರತ್ ಸೋಮಣ್ಣ ವಂದಿಸಿದರು.