ಗುಡ್ಡೆಹೊಸೂರು, ಜು. ೩: ಜಿಲ್ಲಾ ಬಿ.ಜೆ.ಪಿ. ವತಿಯಿಂದ ಸ್ಥಳೀಯವಾಗಿ ಪಕ್ಷದ ವತಿಯಿಂದ ಆರೋಗ್ಯ ಸ್ವಯಂ ಸೇವಕರನ್ನು ಆಯ್ಕೆ ಮಾಡುವ ಸಲುವಾಗಿ ಗ್ರಾ.ಪಂ. ವ್ಯಾಪ್ತಿಯ ಶಕ್ತಿ ಕೇಂದ್ರದ ವತಿಯಿಂದ ಗ್ರಾಮಕ್ಕೆ ಸ್ವಯಂಸೇವಕರನ್ನು ನೇಮಿಸಲು ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದ ವತಿಯಿಂದ ಆರೋಗ್ಯ ಅಭಿಯಾನ ಪ್ರಾರಂಭಿಸಲಾಗಿದೆ. ಈ ಕಾರ್ಯಕ್ರಮದ ಮೊದಲ ಹಂತವಾಗಿ ಪಕ್ಷದ ವತಿಯಿಂದ ಸ್ವಯಂ ಸೇವಕರನ್ನು ನೇಮಿಸಲು ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಭೆಯನ್ನು ನಡೆಸಲಾಯಿತು.

ಸಭೆಯಲ್ಲಿ ರಾಜ್ಯ ಕೃಷಿ ಮೋರ್ಚಾದ ಕಾರ್ಯದರ್ಶಿ ಡಾ. ನವೀನ್ ಆರೋಗ್ಯ ಕಾರ್ಯಕ್ರಮ ಅಭಿಯಾನದ ಬಗ್ಗೆ ಮಾಹಿತಿ ನೀಡಿದರು. ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರ ರೀತಿ ಇನ್ನೂ ಮುಂದೆ ಪಕ್ಷದ ವತಿಯಿಂದ ಸ್ವಯಂಸೇವಕರು ಕಾರ್ಯನಿರ್ವಹಿಸಲಿದ್ದಾರೆ. ಅಲ್ಲದೆ ಕೌಶಲ್ಯ ಅಭಿವೃದ್ಧಿ ಇಲಾಖೆ ವತಿಯಿಂದ ಆಯ್ಕೆಯಾದ ಸ್ವಯಂಸೇವಕರಿಗೆ ತರಬೇತಿ ನೀಡಲಾಗುತ್ತದೆ. ಅಲ್ಲದೆ ಆರೋಗ್ಯ ಪರಿಕರಗಳನ್ನು ನೀಡಲಾಗುತ್ತದೆ ಎಂದು ತಿಳಿಸಿದರು.

ಬೂತ್ ಮಟ್ಟದಲ್ಲಿ ಶೇ. ೮೦ ಲಸಿಕೆ ನೀಡಲು ಸದ್ಯದಲ್ಲಿಯೇ ಕಾರ್ಯಕ್ರಮ ರೂಪಿಸಲಾಗುವುದಾಗಿ ಅವರು ತಿಳಿಸಿದರು. ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿವಿಧ ಯೋಜನೆಗಳನ್ನು ಸ್ವಯಂ ಸೇವಕರು ಸಾರ್ವಜನಿಕರಿಗೆ ಮುಂದೆ ಮಾಹಿತಿ ನೀಡಲಿದ್ದಾರೆ ಎಂದು ಡಾ. ನವೀನ್ ಮಾಹಿತಿ ನೀಡಿದರು.

ಸಭೆಯಲ್ಲಿ ರಾಜ್ಯ ಆರೋಗ್ಯ ಅಭಿಯಾನದ ವಕ್ತಾರ ಸುವಿನ್‌ಗಣಪತಿ, ಬಿ.ಜೆ.ಪಿ. ಯುವ ಮೋರ್ಚಾದ ಅಧ್ಯಕ್ಷ ದರ್ಶನ್ ಜೋಯಪ್ಪ, ಮಂಡಲ ಕಾರ್ಯಾಲಯದ ಕಾರ್ಯದರ್ಶಿ ಗೌತಮ್, ತಾಲೂಕು ಉಪಾಧ್ಯಕ್ಷ ದಾಸಂಡ ರಮೇಶ್, ಜಿಲ್ಲಾ ಕಾರ್ಯದರ್ಶಿ ಪುಷ್ಪಾ ನಾಗೇಶ್, ಮಂಡಲದ ಕಾರ್ಯದರ್ಶಿ ಎಂ.ಡಿ. ಕೃಷ್ಣಪ್ಪ, ಗುಡ್ಡೆಹೊಸೂರು ಗ್ರಾ.ಪಂ. ಶಕ್ತಿ ಕೇಂದ್ರದ ಅಧ್ಯಕ್ಷರುಗಳಾದ ಕುಡೆಕ್ಕಲ್ ನಿತ್ಯ ಮತ್ತು ಪ್ರವೀಣ್, ಇಲ್ಲಿನ ಗ್ರಾ.ಪಂ. ಅಧ್ಯಕ್ಷೆ ನಂದಿನಿ, ಉಪಾಧ್ಯಕ್ಷೆ ಯಶೋಧ, ಸದಸ್ಯರಾದ ಕೆ.ಕೆ. ಚಿದಾನಂದ, ಎಂ.ಆರ್. ಮಾದಪ್ಪ, ಬಿ.ಎಂ. ಪ್ರದೀ, ಸುಶೀಲ, ಸೌಮ್ಯ, ಉಮಾ, ಗಂಗಮ್ಮ, ರುಕ್ಮಿಣಿ ಮತ್ತು ಎಲ್ಲಾ ವಿಭಾಗದ ಬೂತ್ ಅಧ್ಯಕ್ಷರು ಮತ್ತು ಬಿ.ಜೆ.ಪಿ. ಪಕ್ಷದ ಕಾರ್ಯಕರ್ತರು ಹಾಜರಿದ್ದರು.