“ಸತ್ಯ ಸಂಧನಾದ ಹರಿಶ್ಚಂದ್ರನ ಮಾತುಗಳನ್ನು ಕೇಳಿ ಮುನಿವರೇಣ್ಯರ ಮಧ್ಯದಲ್ಲಿ ಆಸೀನರಾದ ಅಗಸ್ತö್ಯರು ರಾಜನಿಗೆ ಹೀಗೆಂದು ನುಡಿದರು||೧||

ಅಗಸ್ತö್ಯ ಉವಾಚ: “ನೃಪೋತ್ತಮನಾದ ಹರಿಶ್ಚಂದ್ರ ಮಹಾಭಾಗನೇ ತುಲಾಕಾವೇರಿಯ ಮಹಾತ್ಮೆöÊಯನ್ನು ಕೇಳಲು ಇಚ್ಛಿಸುವ ನಿನ್ನ ಕುತೂಹಲದಿಂದ ಕೂಡಿದ ಪ್ರಶ್ನೆಯು ಉತ್ತಮವಾದುದೆ ||೨||

ತುಲಾಕಾವೇರಿಯ ಮಹಾತ್ಮೆöÊಯನ್ನು ಅಥವಾ ಅಧ್ಯಾಯವನ್ನು ಅಥವಾ ಶ್ಲೋಕವನ್ನು ಯಾವನು ಕೇಳಿ ಅಥವಾ ಓದಿ ಸ್ನಾನ ಮಾಡುತ್ತಾನೋ, ಅದರ ಪುಣ್ಯವು ಅನಂತವಾದುದು ||೩||

ಭಗವಂತನ ಧ್ಯಾನದ ಹೊರತಾಗಿ ಕಾವೇರಿ ಮಹಾತ್ಮೆöÊಯನ್ನು ಈ ಲೋಕದಲ್ಲಿ ಹೇಳಿದರೆ ಅವರ ಪೂರ್ವ ಪುಣ್ಯದ ಪ್ರಭಾವದಿಂದ ಸಾಧು ಸಜ್ಜನರ ಗೆಳೆತನವಾಗುತ್ತದೆ ||೪||

ಅನೇಕ ಜನ್ಮ-ಜನ್ಮಗಳಿಂದ ಸಿದ್ಧಿಸಬೇಕೆಂದಿರುವ ಸಾಧುಜನರ (ಸಜ್ಜನರ) ಸಂಗವು ವೇದಪಾರಾಯಣ ವ್ರತದಿಂದ ಖಂಡಿತವಾಗಿಯೂ ಪೂರ್ತಿಯಾಗುತ್ತದೆ. ||೫||

ಒಳ್ಳ್ಳೆಯ ಜನರ (ಸಜ್ಜನರ) ಸಂಗದಿAದ ಪುಣ್ಯ ಕಥೆ ಕೇಳಲು ಆಸಕ್ತಿ ಮೂಡುತ್ತದೆ. ಒಳ್ಳೆಯ ಉತ್ತಮ ಕಥೆಯ ಶ್ರವಣದಿಂದ ಮೂರು ವಿಧದ (ತ್ರಿವಿಧ) (ಕಾಯಾ-ವಾಚಾ-ಮನಸಾ) ಪಾಪಗಳು ನಿವಾರಣೆಯಾಗುತ್ತವೆ.||೬||

ಓ ನೃಪೋತ್ತಮನೇ, ಶ್ರೀಹರಿಯ ಪಾದಕಮಲದ ಧ್ಯಾನದಿಂದ ನರನ ಮನಶ್ಶುದ್ಧಿಯಾಗುತ್ತದೆ. ಪಾಪ ವಿಮೋಚನೆಯಾಗುತ್ತದೆ. ಅಂತರಾತ್ಮವು ಶುದ್ಧವಾಗುತ್ತದೆ. ||೭||

“ತುಲಾ ಮಾಸದಲ್ಲಿ ಕಾವೇರಿಯು ಸರ್ವ ತೀರ್ಥಗಳಿಂದ ಕೂಡಿರುತ್ತಾಳೆ. ಹಾಗಾಗಿ ಆಕೆಯು ಪಂಚಪಾತಕಗಳನ್ನು ನಾಶ ಮಾಡುವವಳು. ಅಶ್ವಮೇಧಯಾಗದ ಫಲವನ್ನು ಕೊಡುವವಳಾಗಿರುತ್ತಾಳೆ||೮||

ಓ ಮಹಾತೇಜನೇ ಭಗವಾನ್ ನಾರಾಯಣನನ್ನು ಒಮ್ಮೆ ಧ್ಯಾನಿಸಿದರೆ ಅವನು ಪ್ರಸನ್ನನಾಗಿ ಕರ್ಮಫಲವನ್ನು ಕೊಡುತ್ತಾನೆ. ಆದುದರಿಂದ ರಾಜನೇ, ನೀನು ನಿನ್ನ ಕರ್ಮವನ್ನು ಮುಗಿಸಿ ಸತ್ಸಂಗ ನಿರತನಾಗಿರು ||೯||

ಪರಮೇಶ್ವರ ಲಕ್ಷ-ಕೋಟಿ ಶಿವಲಿಂಗಗಳು ಕಾವೇರಿಯ ಜಲ ಪ್ರವಾಹದ ಸ್ಪರ್ಶದಿಂದ ಸಹಸ್ರಕೋಟಿ ಶಿವಲಿಂಗಗಳಾಗುತ್ತವೆ||೧೦||

ಸ್ವರ್ಗದ ಜಲ, ತೀರ್ಥ ಹಾಗೂ ದಿವ್ಯಲಿಂಗವು ಕಾವೇರಿ ತಟವನ್ನು ಬಂದು ಸೇರುತ್ತವೆ. ಆದುದರಿಂದ ಸಹ್ಯಾದ್ರಿಯಿಂದ ಹುಟ್ಟಿದ, ನದಿಗಳಲ್ಲಿಯೇ ಶ್ರೇಷ್ಠವಾದ ಈ ಕಾವೇರಿ ನದಿಯು ಸುಲಭವಾಗಿ ಜನರಿಗೆ ಸಿಗುವುದು ಕಷ್ಟ ಸಾಧ್ಯ||೧೧||

ಕೈವಲ್ಯ ಸಿದ್ಧಿಂವಿದಧಾತಿ ನೂÈಣಾಂ ಅನ್ಯೆöÊಸ್ತಿçಭಿಃ ಕಿಂ ಪುರುಷಾರ್ಥವರ್ಗೈ|

ತುಲಾಮಾಸೇತು ಕಾವೇರೀಂ ಪ್ರಶಂಸAತಿ ಮಹರ್ಷಯ: ||೧೨||

ದಿವಿದೇವಾಶ್ಚಪಿತರಃ ಸಾಧುಸಾಧ್ವಿತಿ ಭಾಷಿತಾಃ|

ತುಲಾಮಾಸೇತು ಕಾವೇರ್ಯಾಂತ್ರö್ಯಹAಸ್ನಾತಿಚಯೋನರಃ ||೧೩||

ಮುಕ್ರಪಾಪೋದಿವಂ ತ್ಯಕ್ತಾ÷್ವವಿಷ್ಣುಲೋಕಂ ಸಗಚ್ಛತಿ|

ಕೃತಸ್ನಾತಸ್ತು ಕಾವೇರ್ಯಾಂ ಮಾಘೇಮಾಸಿಚತೌಲಿಕೇ ||೧೪||

ತ್ರಿಕೋಟಿ ಕುಲಸಂಯುಕ್ತೋ ಬ್ರಹ್ಮಲೋಕೇಮಹೀಯತೇ|

ತೀರೇ ತಸ್ಯಾಸ್ತುಲಾಮಾಸೇದತ್ತಂ ಕೋಟಿ ಗಣಂ ಭವೇತ್ ||೧೫||

ಸತ್ಪಾತ್ರೇ ಪುಣ್ಯಕಾಲೇಚತ್ವಕ್ಷಯ್ಯಂ ಫಲಮೃಚ್ಛತಿ|

ಪಿತೂÈನುದ್ದಿಶ್ಯಯದ್ದತ್ತಂ ಶ್ರಾದ್ಧಂಪಿAಡA ತಿಲೋದಕಂ ||೧೬||

ಆಕಲ್ಪತೃಪ್ತಯೇ ಭೂಯಾದ್ದಿತಿ ವೇದವಿದೋವಿದುಃ |

ಬ್ರಹ್ಮಾದ್ಯಾದೇವತಾ ಸ್ಯರ್ವಾಮಾತರಸ್ಯರ್ವಏವಹಿ ||೧೭||

ಸರ್ವಾಅಪ್ಸರಸೋ ರೌದ್ರೀವಾಣೀ ವೈಕುಂಠವಲ್ಲಭಾ |

ಇಂದ್ರಾಣೀ ರೋಹಿಣೀ ಚೈವಯಾಶ್ವಾನ್ಯಾ ಅಮರಾಜನಾಃ ||೧೮||

ಮಾನವನಿಗೆ ಮೂರು ಪುರುಷಾರ್ಥಗಳಿಂದ (ಧರ್ಮ, ಅರ್ಥ, ಕಾಮ) ಯಾವ ಲಾಭವಿಲ್ಲ. ಕೈವಲ್ಯ (ಮೋಕ್ಷ) ಸಿದ್ಧಿಯಾಗದಿದ್ದರೆ ಎಲ್ಲವೂ ವ್ಯರ್ಥ, ನಿಷ್ಪçಯೋಜಕÀ. ಅಂತಹ ಮೋಕ್ಷವನ್ನು ಕಾವೇರಿ ನೀಡುತ್ತಾಳೆ. ತುಲಾ ಮಾಸದಲ್ಲಿ ಋಷಿಮುನಿಗಳು ಕಾವೇರಿಯನ್ನು ಪ್ರಶಂಸಿಸುತ್ತಾರೆ.||೧೨||

ತುಲಾ ಮಾಸದಲ್ಲಿ ಕಾವೇರಿಯ ನೀರಿನಲ್ಲಿ ಸ್ನಾನ ಮಾಡುವುದು ಒಳ್ಳೆಯದು. ಒಳ್ಳೆಯದು ಎಂದು ದೇವಲೋಕದಲ್ಲಿ ದೇವತೆಗಳು, ಪಿತೃಗಳು ಹೇಳುತ್ತಾರೆ ||೧೩||

ಯಾರು ತುಲಾ ಮಾಸದಲ್ಲಿ ಹಾಗೂ ವೈಶಾಖ ಮಾಸದಲ್ಲಿ ಕಾವೇರಿಯಲ್ಲಿ ಸ್ನಾನ ಮಾಡುತ್ತಾರೋ ಅವರು ಪಾಪಗಳಿಂದ ಮುಕ್ತರಾಗಿ ಸ್ವರ್ಗಕ್ಕಿಂತಲೂ ಮಿಗಿಲಾದ ವೈಕುಂಠವನ್ನು ಸೇರುತ್ತಾರೆ. ||೧೪||

ಯಾವನು ಮಾಘಮಾಸದಲ್ಲಿ ಕಾವೇರಿಯಲ್ಲಿ ಸ್ನಾನ ಮಾಡುತ್ತಾನೋ, ಅವನು ಮುಕ್ಕೋಟಿ ಕುಲದಿಂದ ಕೂಡಿದ ಬ್ರಹ್ಮಲೋಕವನ್ನು ಸೇರುತ್ತಾನೆ. ಕಾವೇರಿ ತೀರದಲ್ಲಿ ತುಲಾಮಾಸದಲ್ಲಿ ದಾನ ಮಾಡಿದ ಫಲವು ಕೋಟಿ ಪಟ್ಟು ಹೆಚ್ಚಾಗುತ್ತದೆ.||೧೫||

ಈ ಪುಣ್ಯ ಕಾಲದಲ್ಲಿ ಯೋಗ್ಯನಾದವನಿಗೆ ದಾನ ಮಾಡಿದರೆ ಆತನು ಅಕ್ಷಯ (ಅನಂತ) ಫಲ ಪಡೆಯುತ್ತಾನೆ. ಪಿತೃಗಳಿಗೆ ಕಾವೇರಿ ತೀರದಲ್ಲಿ ತರ್ಪಿಸುವ ಶ್ರಾದ್ಧ, ಪಿಂಡ ಹಾಗೂ ತಿಲೋದಕ ಫಲವು ||೧೬||

ಸಹಸ್ರಾದಿ ಯುಗಗಳವರೆಗೆ ಲಭಿಸುತ್ತವೆ ಎಂದು ವೇದ ವಿದ್ವಜ್ಜನರು ಹೇಳಿದ್ದಾರೆ. ಬ್ರಹ್ಮ ಮತ್ತು ಇತರ ದೇವತೆಗಳು ಎಲ್ಲಾ ಮಾತೆಯಂದಿರು ಕಾವೇರಿಯಲ್ಲಿ ತುಲಾ ಮಾಸದಲ್ಲಿ ನಿತ್ಯವೂ ಸ್ನಾನ ಮಾಡುತ್ತಾರೆ.||೧೭||

ಎಲ್ಲಾ ಅಪ್ಸರೆಯರು ಶೌದ್ರಿ, ವಾಣೀ, ವೈಕುಂಠ ವಲ್ಲಭಾ (ಲಕ್ಷಿö್ಮ), ಇಂದ್ರಾಣಿ, ರೋಹಿಣಿ ಮೊದಲಾದ ಮಾತೆಯರು, ಅಶ್ವಿನೀ ದೇವತೆಗಳು||೧೮||

ತುಲಾ ಮಾಸದಲ್ಲಿ ಕಾವೇರಿಯಲ್ಲಿ ಬಂದು ನಿತ್ಯವೂ ಸ್ನಾನ ಮಾಡುತ್ತಾರೆ.

ತುಲಾಮಾಸೇತು ಕಾವೇರ್ಯಾಂ ಸಂಪ್ರಾಪ್ಯಸ್ನಾತಿ ನಿತ್ಯಶಃ

ಕಿಮತ್ರ ಬಹುನೋಕ್ತೇನ ಶ್ರದ್ಧಾಯ ಮುಕ್ತಯೇ ನೃಣಾಂ||೧೯||

ಬ್ರಹ್ಮಣಾ ನಿರ್ಮಿತಾಪೂರ್ವಂ ಕಾವೇರೀತೀರ್ತ್ಥನಾಯಿಕಾ|

ಸಹ್ಯಚಾಯಾಂ ತುಲಾಮಾಸಿಸ್ನಾನಂ ಮಕ್ಷಯಾಯಚ ||೨೦||

ಇಷ್ಟಕಾಮ್ಯಾಪ್ತಯೇನಂ ಹ್ವಾಸಂತಿನೇಹನರಾಸ್ತಿçÃಯಃ |

ಕಾವೇರಿತೀರ ಜನ್ಮಾನಃ ಮೃಗ ಪಕ್ಷಿ ಮಹೀರುಹಾಃ ||೨೧||

ತದ್ವಾರಿಶೀತವಾತೈಶ್ಚ ಪುಷ್ಪಾಯಾಂತಿ ಹರೇಃಪದಂ||

ಭಕ್ತಾö್ಯಪುನBಕಿA ಜಾಸ್ವಾಪ್ನುತಾ ನಿರ್ಮಲಾಂಭಸಿ ||೨೩||

ಕಾವೇರಿ ತೀರ್ಥವು ನರರ ಶುದ್ಧಿ-ಮುಕ್ತಿಗಾಗಿ ಇರುವುದು. ಹಾಗಾಗಿ ಇದರ ಬಗ್ಗೆ ವಿಸ್ತಾರವಾಗಿ ಹೇಳುವುದು ಯಾತಕ್ಕಾಗಿ ?||೧೯||

ಈ ಕಾವೇರಿ ತೀರ್ಥವು ಬ್ರಹ್ಮನಿಂದ ನಿರ್ಮಿಸಲ್ಪಟ್ಟಿದೆ. ಈ ಕಾವೇರಿಯ ಜಲದಲ್ಲಿ ತುಲಾ ಮಾಸದಲ್ಲಿ ಸ್ನಾನ ಮಾಡುವುದು ಅಕ್ಷಯ ಫಲಕ್ಕಾಗಿ ||೨೦||

ಇಷ್ಟಾರ್ಥ ಸಿದ್ಧಿಗಾಗಿ ಆದುದರಿಂದ ಈ ತೀರ್ಥದಲ್ಲಿ ಸ್ನಾನಗೈಯದ ನರರಾಗಲಿ, ಸ್ತಿçÃಯರಾಗಲಿ ಇಲ್ಲ. ಅಂದರೆ ಸರ್ವರೂ ಇಲ್ಲಿ ಸ್ನಾನಗೈಯುತ್ತಾರೆ. ಕಾವೇರಿ ತೀರದಲ್ಲಿ ಜನಿಸಿದ ಮೃಗ-ಪಕ್ಷಿ ಮರಗಳು ||೨೧||

ಕಾವೇರಿಯ ಶೀತಲ ನೀರಿನಿಂದ ಹರಿಯ ಪಾದವನ್ನು ಸೇರುತ್ತವೆ. ಹಾಗಾಗಿ ಭಕ್ತಿಯಿಂದ ನಿರ್ಮಲವಾದ ಕಾವೇರಿ ಜಲದಲ್ಲಿ ಸ್ನಾನ ಮಾಡಿದರೆ ಎಲ್ಲವೂ ಲಭ್ಯ ||೨೨||

ತಸ್ಮಾತ್ ಕಾವೇರಿ ಮಾಹಾತ್ಮಾö್ಯ ಸಾಕ್ಷಾಚ್ಛೇಷೇಣ ವಾಗ್ವಿದಾ|

ನಶಕ್ಯಂ ವಿಸ್ತರಾದ್ವಕ್ತುಂ ದಿವ್ಯೆöÊವರ್ಷಶತೈರಪಿ ||೨೪||

ತಸ್ಮಾತ್ ಸಂಕ್ಷೇಪತೋವಕ್ಷೆö್ಯÃ ಮಾಹಾತ್ಯö್ಮಂ ಸಹ್ಯಜೋದ್ಭವಂ|

ವಿದ್ವತ್ ಪ್ರತಾಪ ತುಳಸೀ ಮಾಹಾತ್ಯö್ಮಂ ಜನ್ಹುಜೋದ್ಭವಂ ||೫||

ಏಕಾದಶ್ಯಾಶ್ಚ ಮಾಹಾತ್ಮö್ಯಂ ಜಹ್ನುö್ಯ ಪಾಸ್ತಿ ಸಮುದ್ಭವಂ |

ತುಳಸ್ಯರ್ಚಪ್ರಾಭಾವಂತು ಸಾಲಗ್ರಾಮ ಶಿಲೋಪರೀ ||೨೬||

ಸಹಸ್ರವದನೋನಂತಃ ಶಕ್ತಏವಸ್ವಯಂ ಪ್ರಭುಃ |

ಕಾವೇರ್ಯಾಂ ಸ್ಮರಣಂ ಶಸ್ತಂ ಸ್ಮರಣಂ ದರ್ಶನಂ ಶ್ರುತಂ ||೨೭||

ಸ್ಪರ್ಶನಂ ತಜ್ವಲಸ್ನಾನಂ ಜನ್ಮಾಂತರ ತಪಃಫಲಂ |

ಅನೇಕಜನ್ಮ ಸಂಸಿದ್ಧ ಪುಣ್ಯರಾಶೀರ್ನರ ಸ್ಯತು ||೨೮||

ಸ್ನಾತುಂಮತಿ ಭವೇದ್ರಾಜನ್ ಕಾವೇರ್ಯಾವಿಮಲೇಜಲೇ |

ತುಲಾಮಾಸೇತು ಕಾವೇರ್ಯಾಂಮಾಸಿ ವೈಶಾಖ ಏವಚ ||೨೯||

ಯಸ್ನಾತಿ ತತ್ಫಲಂವಕ್ತುA ಶಕ್ತ ಏವಹರಿಸ್ವಯಂ ||

ಯಥಾಗಂಗಾ ನೃಪಶ್ರೇಷ್ಠ ವಿಷ್ಣುಪಾದಾಬ್ಜ ಸಂಭವಾ ||೩೦||

ಯಥಾಪುಷ್ಪೇಷು ತುಳಸೀ ವ್ರತೇಷ್ವ್ಯೆಕಾದಶೀ ವ್ರತಂ |

ಯಥಾಪಂಚ ಮಹಾಯಜ್ಞಾ ಗೃಹಸ್ಥಾಶ್ರಮ ಕರ್ಮಣಿ ||

ಶುದ್ಧೇಯಥಾಮನಶುದ್ಧಿಯಥಾದೇವೇಷು ಮಾಧವಃ ||೩೨||

ಯಥಾವರ್ಣೇಷುಚೋಂಕಾರೋಮAತ್ರೇಷು ತ್ರಿಪದಾಯಥಾ |

ವೇದೇಷುಚ ಯಥಾಸಾಮಃ ಯಥಾರುದ್ರೇಷು ಶಂಕರಃ ||೩೩||

ಅರುಂಧತೀ ಬ್ರಾಹ್ಮಣಾನಾಂ ನಾರೀಣಾಂ ಕಮಲಾಯಥಾ |

ಯಥಾಸೂರ್ಯಾದಿ ಗ್ರಹೇಷ್ಟಿಂದುಶ್ಚವಾಪಿತುಃ ಯಥಾ ||೩೪||

ತಥಾ ಸರಿತ್ಸು ರಾಜೇಂದ್ರಕಾವೇರೀ ಪ್ರವರಾಸ್ಮೃತಾ |

ತೇಜಸ್ವಿನಾಂಯಥಾಸೂರ್ಯೋ ಯಜ್ಞಾನಾಮಶ್ವಮೇಧವತ್ ||೩೫||

ಮಿತ್ರೇಷ್ಟಿವಯಥಾಧರ್ಮೋ ಜಪವತ್ತಪಸಾನೃಪ |

ವಿಷ್ಣುಪೂಜೈವ ಪೂಜಾನಾಂ ಗಾರ್ಹಸ್ಥö್ಯಂ ಚಾಶ್ರಮೇಷ್ಟಿವ ||೩೬||

ಅಂತಹ ಪವಿತ್ರವೂ ಪುಣ್ಯವೂ ಆದ ಕಾವೇರಿಯ ಮಾಹಾತ್ಮೆöÊಯನ್ನು, ಉತ್ತಮ ವಾಗ್ಮಿಗಳಿಂದ ಕೂಡಿ ಸಹಸ್ರಾರು ವರ್ಷಗಳನ್ನು ತೆಗೆದುಕೊಂಡರೂ ವಿಸ್ತಾರವಾಗಿ ಹೇಳಲು ಸಾಧ್ಯವಿಲ್ಲ ||೨೪||

‘‘ಹೇ ವಿದ್ವತ್ ಪ್ರತಾಪನೇ, ನಾನು ನಿನಗೆ ಸಂಕ್ಷಿಪ್ತವಾಗಿ ಸಹ್ಯಾದ್ರಿಯಲ್ಲಿ ಜನಿಸಿದ ಕಾವೇರಿ ಮಾಹಾತ್ಮೆöÊಯನ್ನು ತುಳಸೀ ಮಹಾತ್ಮೆöÊಯನ್ನು, ಜಹ್ನುವಿಗೆ ಜನಿಸಿದ ಗಂಗೆಯ ಮಹಾತ್ಮೆöÊಯನ್ನು ||೨೫||

ಏಕಾದಶಿ ಮಹಾತ್ಮೆöÊಯನ್ನೂ, ಅಗ್ನಿ ಉಪಾಸನೆಯ ಮಹಾತ್ಮೆöÊಯನ್ನೂ, ಸಾಲಿಗ್ರಾಮದ ಮೇಲೆ ತುಳಸೀ ಅರ್ಚನೆಯಿಂದ ಉಂಟಾಗುವ ಪರಿಣಾಮವನ್ನೂ ಹೇಳುತ್ತೇನೆ ||೨೬||

ಆದರೆ ವಿವರವಾಗಿ ಈ ಎಲ್ಲಾ ಮಹಾತ್ಮೆöÊಯನ್ನು ಸಹಸ್ರವದನನೂ, ಅನಂತನೂ ಆದ ಶ್ರೀಮಹಾವಿಷ್ಣುವೇ ಹೇಳಲು ಶಕ್ತನು. ಕಾವೇರಿಯ ಸ್ಮರಣೆಯು ಶ್ರೇಯಸ್ಕರ, ಕಾವೇರಿಯ ಸ್ಮರಣೆ, ದರ್ಶನ ಹಾಗೂ ಕೇಳುವುದೂ ಒಳಿತು. ||೨೭||

ಕಾವೇರಿ ಜಲದ ಸ್ಪರ್ಶದಿಂದ, ಸ್ನಾನದಿಂದ ಜನ್ಮಜನ್ಮಾಂತರದ ತಪಸ್ಸಿನ ಫಲವು ಲಭಿಸುತ್ತದೆ. ಅಲ್ಲದೆ ಅನೇಕ ಜನ್ಮಗಳ ಪುಣ್ಯರಾಶಿಯನ್ನೇ ಪಡೆಯಬಹುದು. ||೨೮||

ತುಲಾಮಾಸದಲ್ಲಿ ಮತ್ತು ವೈಶಾಖ ಮಾಸದಲ್ಲಿ, ಕಾವೇರಿಯ ನಿರ್ಮಲ ಜಲದಲ್ಲಿ ಸ್ನಾನ ಮಾಡಲು ಮನಸ್ಸಿರಬೇಕು. ||೨೯||

ಹಾಗೇ ಸ್ನಾನ ಮಾಡಿದಲ್ಲಿ ಅದರ ಫಲವನ್ನು ಹೇಳಲು ವಿಷ್ಣುವೇ ಅರ್ಹನು ಏ ಶ್ರೇಷ್ಠ ರಾಜನೇ ವಿಷ್ಣುವಿನ ಪಾದಕಮಲದಿಂದ ಜನಿಸಿದ ಗಂಗೆಯAತೆ ||೩೦||

ಹೂವುಗಳಲ್ಲಿ ಶ್ರೇಷ್ಠವಾದ ತುಳಸಿಯಂತೆ, ವ್ರತಗಳಲ್ಲಿ ಶ್ರೇಷ್ಠವಾದ ಏಕಾದಶಿಯಂತೆ ಗ್ರಹಸ್ಥಾಶ್ರಮ ಕರ್ಮದಲ್ಲಿ ಪಂಚಮಹಾಯಜ್ಞದAತೆ, (ದೇವಯಜ್ಞ, ಪಿತೃಯಜ್ಞ, ಭೂತಯಜ್ಞ, ಮನುಷ್ಯಯಜ್ಞ, ಬ್ರಹ್ಮಯಜ್ಞ) ||೩೧||

ಶುದ್ಧದಲ್ಲಿ ಮನಸ್‌ಶುದ್ಧಿಯಂತೆ ದೇವರುಗಳಲ್ಲಿ ವಿಷ್ಣುವಿನಂತೆಯೂ ||೩೨||

ಅಕ್ಷರಗಳಲ್ಲಿ ಓಂಕಾರದAತೆಯೂ, ಮಂತ್ರಗಳಲ್ಲಿ ತ್ರಿಪದದಂತೆಯೂ (ಗಾಯಿತ್ರಿ ಯಂತೆ), ವೇದಗಳಲ್ಲಿ ಸಾಮವೇದದಂತೆಯೂ, ರೌದ್ರದಲ್ಲಿ ಶಿವನಂತೆಯೂ ||೩೩||

ಬ್ರಾಹ್ಮಣರಲ್ಲಿ ಅರುಂಧತಿಯAತೆಯೂ, ಸ್ತಿçÃಯರಲ್ಲಿ ಲಕ್ಷಿö್ಮಯಂತೆಯೂ, ಸೂರ್ಯಾದಿ ಗ್ರಹಗಳಲ್ಲಿ ಚಂದ್ರನAತೆಯೂ ||೩೪||

ಓ ರಾಜನೇ, ಅಂತೆಯೇ ನದಿಗಳಲ್ಲಿ ಕಾವೇರಿಯು ಶ್ರೇಷ್ಠ್ಠವಾದುದು. ತೇಜಸ್ಸಿನಲ್ಲಿ ಸೂರ್ಯನಂತೆಯೂ ಯಜ್ಞಗಳಲ್ಲಿ ಅಶ್ವಮೇಧÀಯಾಗದಂತೆಯೂ ||೩೫||

ಮಿತ್ರತ್ವದಲ್ಲಿ, ಧರ್ಮದಂತೆಯೂ ತಪಸ್ಸುಗಳಲ್ಲಿ ಜಪದಂತೆ, ಪೂಜೆಗಳಲ್ಲಿ ವಿಷ್ಣುಪೂಜೆಯಂತೆ, ಆಶ್ರಮಗಳಲ್ಲಿ ಗೃಹಸ್ಥಾಶ್ರಮದಂತೆ ||೩೬||

ಬ್ರಹ್ಮಾಸ್ತçಂಚಯಥಾಸ್ತೆçÃಷು ಪುಣ್ಯಕ್ಷೇತ್ರೇಷು ರಂಗವತ್ ||೩೭||

ಪಾವನೇಷು ಯಥಾಸೇತುಃ| ಸೂಕ್ತಾನಾಂ ಪೌರುಷಂ ಯಥಾ |

ಧೇನೂನಾಂ ಕಾಮಧೇನುಶ್ಚ ಯಗೇಷುಚ ಯಥಾಕೃತಂ ||೩೮||

ಚಾನ್ಹವ್ಯಾಂ ಮರಣಾನ್ಮುಕ್ತಿಃ ಧನುಷ್ಕೋಟ್ಯಾಸ್ತುದರ್ಶನಾತ್ |

ಶ್ರವಣಾದ್ರಾಮಗಾದಾಯಾಃ ಕಾವೇರ್ಯ ಸ್ಮರಣಾಧ್ಭವೇತ್ ||೩೯||

ಅಸೇತು ಕೈಲಾಸಾವಧಿ ಕರ್ಮಭೂಮಿರಿಯಂ ಸ್ಮೃತಾ |

ನವಯೋಜನ ಸಾಹಸ್ರಂ ಮಹಾಪಾತಕನಾಶನಂ ||೪೦||

ಕ್ಷಮೆಯಲ್ಲಿ ಧರಿತ್ರಿಯಂತೆ, ಅಸ್ತçಗಳಲ್ಲಿ ಬ್ರಹ್ಮಾಸ್ತçದಂತೆ, ಪುಣ್ಯಕ್ಷೇತ್ರಗಳಲ್ಲಿ ಶ್ರೀರಂಗದAತೆ ||೩೭||, ಪಾವಿತ್ರö್ಯದಲ್ಲಿ ಓಂಕಾರದAತೆ, ಸೂಕ್ತಗಳಲ್ಲಿ ಪುರುಷ ಸೂಕ್ತದಂತೆ, ಹಸುಗಳಲ್ಲಿ ಕಾಮಧೇನುವಿನಂತೆ, ಯುಗಗಳಲ್ಲಿ ಕೃತಯುಗದಂತೆ, ನದಿಗಳಲ್ಲಿ ಕಾವೇರಿಯು ಪವಿತ್ರವೂ, ಶ್ರೇಷ್ಠವೂ ಆಗಿದೆ ||೩೮||

ಗಂಗೆಯಲ್ಲಿ ಸ್ನಾನ ಮಾಡುವುದರಿಂದ ಮರಣದಿಂದ ಮುಕ್ತಿ ಲಭಿಸುತ್ತದೆ. ಧನುಷ್ಕೋಟಿ (ರಾಮೇಶ್ವರದ ಬಳಿ ಕಡಲ ತೀರದಲ್ಲಿರುವ ಒಂದು ಕ್ಷೇತ್ರ)ಯ ದರ್ಶನದಿಂದ ಮುಕ್ತಿ ಲಭಿಸುತ್ತದೆ. ರಾಮಾಯಣದ ಶ್ರವಣದಿಂದ ಮುಕ್ತಿ ಲಭಿಸುತ್ತದೆ. ಆದರೆ ಕಾವೇರಿಯ ಸ್ಮರಣೆಯಿಂದಲೇ ಮುಕ್ತಿ ದೊರಕುತ್ತದೆ. ||೩೯||

ರಾಮೇಶ್ವರದಿಂದ ಕೈಲಾಸದವರೆಗೆ ವಿಸ್ತರಿಸಿರುವ ಈ ಕರ್ಮ ಭೂಮಿಯಲ್ಲಿ, ಒಂಭತ್ತು ಸಾವಿರ ಯೋಜನೆಗಳಷ್ಟು ದೂರದ ಮಹಾಪಾತಕಗಳನ್ನು (ಕೆಟ್ಟ ಕೆಲಸ) ಕಾವೇರಿಯು ಆಕೆಯನ್ನು ಸ್ಮರಿಸುವುದರಿಂದಲೇ ನಾಶಮಾಡುತ್ತಾಳೆ. ||೪೦||

ಹರಿಶ್ಚಂದ್ರನಿಗೆ ಅಗಸ್ತö್ಯ ಋಷಿಗಳು ಹೇಳುತ್ತಾರೆ. ದ್ವಾಪರ ಯುಗದಲ್ಲಿ ನಾರದ ಮಹರ್ಷಿಗಳನ್ನು ಪಾಂಡವರು ದ್ರೌಪದಿ ಸಹಿತರಾಗಿ ಸಂದರ್ಶಿಸುತ್ತಾರೆ. ಆಗ ತಾನೇ ದ್ರೌಪದಿಯನ್ನು ಐವರೂ ವಿವಾಹವಾಗಿ ಧರ್ಮಸಂಕಟದಲ್ಲಿ ಸಿಲುಕಿದ್ದ ಪಾಂಡವರು ದ್ರೌಪದಿ ತಮ್ಮ ಮಾನಸಿಕ ತುಮುಲವನ್ನು ನೀಗಿಕೊಳ್ಳಲು ಪ್ರಶ್ನಿಸುತ್ತಾರೆ. ಆಗ ನಾರದ ಮಹರ್ಷಿಗಳು ದ್ರೌಪದಿಗೆ ಹೀಗೆ ಹೇಳುತ್ತಾರೆ. ಯಾರು ಇಲ್ಲಿ ಶ್ರದ್ಧೆಯಿಂದ ತುಲಾ ಮಾಸದಲ್ಲಿ ವಿಧಿವತ್ತಾಗಿ ಸ್ನಾನ ಮಾಡುತ್ತಾನೋ, ಅವನು ಎರಡು ಜನ್ಮಗಳಿಂದ ಮುಕ್ತನಾಗಿ ಇಪ್ಪತ್ತೊಂದು ಸ್ವರ್ಗವನ್ನು ಸೇರುತ್ತಾನೆ. ಕಣ್ಣು, ಕಿವಿ, ಕಾಲು, ದೇಹ, ಸದೃಢವಾಗಿರುವ ಸಮಯದಲ್ಲಿ ರಾಜಕುಮಾರರು ಮಾಘ, ಚೈತ್ರ, ವೈಶಾಖ, ತುಲಾ (ಅಶ್ವಯುಜ ಅಥವಾ ಕಾರ್ತಿಕ ಮಾಸದಲ್ಲಿ) ಕಾವೇರಿಯಲ್ಲಿ ಒಮ್ಮೆ ಸ್ನಾನ ಮಾಡಿದರೆ ಎಲ್ಲಾ ಪಾಪಗಳಿಂದ ಮುಕ್ತರಾಗುತ್ತಾರೆ.

ಅಗಸ್ತö್ಯ ಉವಾಚ: ನಾರದರಿಂದ ಹೇಳಲ್ಪಟ್ಟ ಧರ್ಮಸಾರದ ರಹಸ್ಯವು ಉತ್ತಮವಾದುದು. ||೪೨|| (ಮುಗಿಯಿತು)

(ಸಂಗ್ರಹ) : ಎಸ್. ಎಸ್. ಸಂಪತ್‌ಕುಮಾರ್, ಭಾಗಮಂಡಲ.