ಮಡಿಕೇರಿ, ಜು. ೩: ಮಡಿಕೇರಿಯಲ್ಲಿ ಲಸಿಕೆ ಹಾಕಿಸಿಕೊಳ್ಳಲು ಲಸಿಕಾ ಕೇಂದ್ರಗಳಿಗೆ ತೆರಳುವವರಿಗೆ ಹೊಸ ಆಕರ್ಷಣೆ ಕಾದಿದೆ. ಅದರಲ್ಲಿಯೂ ಯುವಜನಾಂಗಕ್ಕೆ ಆಕರ್ಷಕವಾಗಿರುವ ನಾನೂ ಲಸಿಕೆ ಹಾಕಿಸಿಕೊಂಡಿರುವೆ ಎಂಬ ಸಂದೇಶದ ಫೋಟೋ ತೆಗೆಸಿಕೊಳ್ಳುವ ಕೇಂದ್ರವನ್ನು ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ನೀಡಲಾಗಿದ್ದು, ಜಿಲ್ಲಾಧಿಕಾರಿ ಚಾರುಲತಾಸೋಮಲ್ ಈ ಕೇಂದ್ರ ಉದ್ಘಾಟಿಸಿದರು.
ಮಡಿಕೇರಿಯ ಓಂಕಾರ ಸದನ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಲಸಿಕೆ ಕೇಂದ್ರದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ನೀಡಿದ ಆಕರ್ಷಕ ಫೋಟೋ ಕೇಂದ್ರ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಕೋವಿಡ್ ೧೯ ನ್ನು ಎದುರಿಸಲು ಎಲ್ಲರೂ ಸರ್ವಸನ್ನದ್ದರಾಗಬೇಕು. ಲಸಿಕೆ ಹಾಕಿಸಿಕೊಂಡರೂ ಮಾಸ್ಕ್ ಅನ್ನು ಕಡ್ಡಾಯವಾಗಿ ಧರಿಸಬೇಕು. ಸಾಮಾಜಿಕ ಅಂತರವನ್ನೂ ಕಾಯ್ದುಕೊಳ್ಳಬೇಕು ಎಂದರು. ಆರೋಗ್ಯ ಇಲಾಖೆ ವತಿಯಿಂದ ಜಿಲ್ಲೆಯಾದ್ಯಂತ ಲಸಿಕೆ ವಿತರಣೆ ನಡೆಯುತ್ತಿದೆ. ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯ ನೆರವಿಗೆ ರೋಟರಿಯಂತಹ ಸಾಮಾಜಿಕ ಸೇವಾ ಸಂಸ್ಥೆಗಳು ಮುಂದಾಗಿರುವುದು ಶ್ಲಾಘನೀಯ ಬೆಳವಣಿಗೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರೋಟರಿ ರೀತಿಯ ಸಾಮಾಜಿಕ ಸೇವಾ ಸಂಘಟನೆಗಳು ಜಿಲ್ಲೆಯಲ್ಲಿ ಹಲವಾರು ಯೋಜನೆಗಳಿಗೆ ನೆರವು ನೀಡುವ ನಿಟ್ಟಿನಲ್ಲಿ ಜಿಲ್ಲಾಮಟ್ಟದ ಯೋಜನೆಗಳಿಗೆ ಮುಂದಾಗಬೇಕೆAದೂ ಜಿಲ್ಲಾಧಿಕಾರಿ ಕರೆ ನೀಡಿದರು.
ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ, ಲಸಿಕೆ ಹಾಕಿಸಿಕೊಂಡ ಜನರು ವಿಶೇಷವಾಗಿ ಯುವಪೀಳಿಗೆ ಲಸಿಕೆ ಹಾಕಿಸಿದ ಬಳಿಕ ಕೇಂದ್ರದಲ್ಲಿನ ಫೋಟೋ ಪಾಯಿಂಟ್ನಲ್ಲಿ ನಿಂತು ನಾನೂ ಲಸಿಕೆ ಹಾಕಿಸಿಕೊಂಡಿದ್ದೇನೆ ಎಂಬ ಬರಹದ ಜೊತೆ ಫೋಟೋ ತೆಗೆಸಿಕೊಳ ್ಳಬಹುದಾಗಿದೆ. ಇದು ಯುವಪೀಳಿಗೆ ಯಲ್ಲಿ ಜನಪ್ರಿಯ ವಾಗುತ್ತದೆ. ಲಸಿಕೆ ಹಾಕಿಸಿಕೊಳ್ಳಲು ಯುವಜನಾಂಗ ಮತ್ತಷ್ಟು ಉತ್ಸಾಹದಿಂದ ಮುಂದೆ ಬರುವ ಭರವಸೆ ಇದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮೋಹನ್, ರೋಟರಿ ವಲಯ ಸೇನಾನಿ ಜಗದೀಶ್ ಪ್ರಶಾಂತ್, ಸಮುದಾಯ ಸೇವಾ ಕಾರ್ಯಗಳ ನಿರ್ದೇಶಕಿ ಪ್ರತಿಭಾ ರೈ, ಮಿಸ್ಟಿ ಹಿಲ್ಸ್ ಸ್ಥಾಪಕಾಧ್ಯಕ್ಷ ಬಿ.ಜಿ.ಅನಂತಶಯನ, ನಿರ್ದೇಶಕರಾದ ಬಿ.ಕೆ.ರವೀಂದ್ರ ರೈ, ಜಿ.ಆರ್. ರವಿಶಂಕರ್, ಗಾನಾಪ್ರಶಾಂತ್, ಪ್ರಕಾಶ್ ಪೂವಯ್ಯ, ಶ್ರೀಹರಿ, ಡಿ.ಎಂ.ತಿಲಕ್. ಪ್ರಸಾದ್ ಗೌಡ, ಎಂ.ಪಿ. ನಾಗರಾಜ್, ರೋಷನ್ ಅಣ್ವೇಕರ್, ಎಂ.ಎ.ಅಚ್ಚಯ್ಯ, ಎಸ್.ಎಸ್. ಸಂಪತ್ ಕುಮಾರ್, ಸವಿತಾ ಅರುಣ್, ಶುಭಾ ವಿಶ್ವನಾಥ್, ಲಸಿಕೆ ಕೇಂದ್ರದ ಮುಖ್ಯಸ್ಥೆ ಡಾ.ಶುಭಾರಾಜೇಶ್, ಡಾ. ಅರುಣ್ ಅಸೂಟಿ ಹಾಜರಿದ್ದರು.