ಶನಿವಾರಸAತೆ, ಜು. ೨: ಭಾರದ ವಸ್ತುಗಳನ್ನು ತುಂಬಿಸಿಕೊAಡು ಸಾರ್ವಜನಿಕ ರಸ್ತೆಯಲ್ಲಿ ಚಲಿಸುವ ವಾಹನಗಳ ಸಂಚಾರವನ್ನು ನಿಷೇಧ ಮಾಡಿದ ಜಿಲ್ಲಾಧಿಕಾರಿಗಳ ಆದೇಶವನ್ನು ಉಲ್ಲಂಘನೆ ಮಾಡಿದ ಲಾರಿ (ಕೆಎ-೧೩ ಬಿ-೭೯೧೫) ಶನಿವಾರಸಂತೆ, ಜು. ೨: ಭಾರದ ವಸ್ತುಗಳನ್ನು ತುಂಬಿಸಿಕೊAಡು ಸಾರ್ವಜನಿಕ ರಸ್ತೆಯಲ್ಲಿ ಚಲಿಸುವ ವಾಹನಗಳ ಸಂಚಾರವನ್ನು ನಿಷೇಧ ಮಾಡಿದ ಜಿಲ್ಲಾಧಿಕಾರಿಗಳ ಆದೇಶವನ್ನು ಉಲ್ಲಂಘನೆ ಮಾಡಿದ ಲಾರಿ (ಕೆಎ-೧೩ ಬಿ-೭೯೧೫)ಲಾರಿಯ ಬಾಡಿ ಲೆವೆಲ್‌ನಿಂದ ಹೊರಗಡೆ ಚಾಚಿದ್ದು, ಪರಿಶೀಲಿಸಲಾಗಿ ೨೨೮೬೦ ಕೆ.ಜಿ. ಭಾರವಿದ್ದು, ನಿಗದಿತ ಭಾರಕ್ಕಿಂತ ಅಧಿಕ ಭಾರವಿದ್ದುದರಿಂದ ಲಾರಿಯನ್ನು ವಶಪಡಿಸಿಕೊಂಡು ಸಾರಿಗೆ ಪ್ರಾಧಿಕಾರ ಕಚೇರಿಗೆ ವರದಿ ಸಲ್ಲಿಸಲಾಗಿತ್ತು. ರಹದಾರಿ ನಿಯಮ ಉಲ್ಲಂಘನೆ ಮಾಡಿರುವ ಲಾರಿ ಚಾಲಕ ಹೆಚ್.ಯು. ಶರತ್‌ನಿಗೆ ರೂ. ೫೧,೦೦೦ ದಂಡ ವಿಧಿಸಲಾಗಿದೆ. ಚಾಲಕ ದಂಡ ಪಾವತಿಸಿ ಲಾರಿಯನ್ನು ಬಿಡಿಸಿಕೊಂಡಿದ್ದಾರೆ. ಕಾರ್ಯಾಚರಣೆ ಯಲ್ಲಿ ಹೆಡ್‌ಕಾನ್ಸ್ಟೇಬಲ್ ಬೋಪಣ್ಣ, ಶನಿವಾರಸಂತೆ ಪೊಲೀಸ್ ಠಾಣಾ ಸಿಬ್ಬಂದಿಗಳು ಪಾಲ್ಗೊಂಡಿದ್ದರು.