ಸೋಮವಾರಪೇಟೆ, ಜೂ. ೩: ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ತಾಲೂಕಿನ ಕೂತಿ ಗ್ರಾಮದಲ್ಲಿ ಸಾರ್ವಜನಿಕರಿಗೆ ವಿವಿಧ ಜಾತೀಯ ಗಿಡಗಳನ್ನು ವಿತರಿಸಲಾಯಿತು. ಇಲಾಖೆ ವತಿಯಿಂದ ಕಾಚಂಪುಳಿ, ಸಿಲ್ವರ್, ನಂದಿ, ಬೀಟೆ, ಕರಿಬೇವು ಸೇರಿದಂತೆ ಇತರ ಗಿಡಗಳನ್ನು ವಿತರಿಸಲಾಯಿತು. ಈ ಸಂದರ್ಭ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಮೋಹನ್, ಕಾರ್ಯದರ್ಶಿ ಬಿ.ಆರ್. ವಿನೋದ್ ಕುಮಾರ್, ಅಶ್ವಥ್, ಕಿರಣ್, ಗಣೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.