ಸಿದ್ದಾಪುರ, ಜು. ೩: ಮಾಲ್ದಾರೆ ವ್ಯಾಪ್ತಿಯ ವಿವಿಧ ಹಾಡಿಗಳ ನಿವಾಸಿಗಳ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆಯಲು ಬೆಂಗಳೂರಿನಿAದ ಶುಕ್ರವಾರದಂದು ತಂಡವೊAದು ಆಗಮಿಸಿ ಮಾಹಿತಿ ಕಲೆಹಾಕಿತು. ಮಾಲ್ದಾರೆ ಸಮೀಪದ ದಿಡ್ಡಳ್ಳಿ ಚೊಟ್ಟೆಪಾರೆ ಹಾಗೂ ಇನ್ನಿತರ ಹಾಡಿಗಳಿಗೆ ಪರಿಶಿಷ್ಟ ಜಾತಿ - ಪಂಗಡಗಳ ಬೆಂಗಳೂರಿನ ಇಲಾಖೆಯ ಮೂಲಕ ಮಾಹಿತಿ ಸಂಗ್ರಹಿಸಲು ಹಾಡಿಗಳಿಗೆ ಭೇಟಿ ನೀಡಿದರು.
ಡ್ರೋನ್ ಕ್ಯಾಮರಾಗಳ ಮುಖಾಂತರ ಹಾಡಿಯ ಮನೆಗಳ ವಿವರಗಳನ್ನು ಹಾಗೂ ಮನೆಗಳ ಸ್ಥಿತಿಗತಿಗಳನ್ನು ಪರಿಶೀಲಿಸಿದರು. ಜುಲೈ ೧೦ ರಂದು ಬೆಂಗಳೂರಿನಲ್ಲಿ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಪರಿಶಿಷ್ಟ ಜಾತಿ - ಪಂಗಡಗಳ ಇಲಾಖಾಧಿಕಾರಿಗಳ ಸಭೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಹಾಡಿಯ ನಿವಾಸಿಗಳ ಮೂಲಭೂತ ಸೌಕರ್ಯಗಳ ಸ್ಥಿತಿಗತಿಯ ಬಗ್ಗೆ ವಿವರ ನೀಡಲು ಈ ಮಾಹಿತಿಯನ್ನು ಸಂಗ್ರಹಿಸಲಾಗಿದೆ ಎನ್ನಲಾಗಿದೆ.
ಹಾಡಿಗಳಿಗೆ ಭೇಟಿ ನೀಡಿದ ತಂಡದವರು ಹಾಡಿಯ ಮನೆಗಳಿಗೆ ತೆರಳಿ ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿದರು. ನಂತರ ಆದಿವಾಸಿ ಜನಾಂಗದ ಮುಖಂಡ ಹಾಗೂ ಹೋರಾಟಗಾರ ಜೆ.ಕೆ. ಅಪ್ಪಾಜಿ ಅವರಿಂದ ಮಾಹಿತಿ ಕಲೆ ಹಾಕಿ ಹಾಡಿಯಲ್ಲಿ ನೀವುಗಳು ಎಷ್ಟು ವರ್ಷದಿಂದ ವಾಸ ಮಾಡಿ ಕೊಂಡಿದ್ದೀರಾ ಹಾಗೂ ಸರ್ಕಾರದ ವತಿಯಿಂದ ಸಿಗುವ ಸೌಲಭ್ಯಗಳು ಸಮರ್ಪಕವಾಗಿ ದೊರೆಯು ತ್ತಿದೆಯೋ ಹಾಗೂ ಹಾಡಿಯಲ್ಲಿ ಇರುವ ಆದಿವಾಸಿಗಳು ಯಾವ ರೀತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಮೂಲ ಸೌಕರ್ಯಗಳು ಆಗಿದೆಯೋ ಹಾಗೂ ಹಾಡಿಗಳಲ್ಲಿ ಭತ್ತ ಸೇರಿದಂತೆ ಇನ್ನಿತರ ಕೃಷಿಯನ್ನು ಮಾಡಲಾಗುತ್ತಿದೆ ಎಂದು ಮಾಹಿತಿ ಪಡೆದುಕೊಂಡರು.
ಈ ಸಂದರ್ಭ ಆದಿವಾಸಿ ಮುಖಂಡ ಅಪ್ಪಾಜಿ ಮಾತನಾಡಿ, ಇಲ್ಲಿನ ಆದಿವಾಸಿಗಳು ೧೯೬೩ರಿಂದಲೇ ಅರಣ್ಯ ಪ್ರದೇಶದೊಳಗೆ ವಾಸ ಮಾಡಿಕೊಂಡಿದ್ದಾರೆ. ತಲಾ ತಲಾಂತರದಿAದ ವಾಸ ಮಾಡಿಕೊಂಡಿರುವ ಆದಿವಾಸಿಗಳು ತೆರಳಿ ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿದರು. ನಂತರ ಆದಿವಾಸಿ ಜನಾಂಗದ ಮುಖಂಡ ಹಾಗೂ ಹೋರಾಟಗಾರ ಜೆ.ಕೆ. ಅಪ್ಪಾಜಿ ಅವರಿಂದ ಮಾಹಿತಿ ಕಲೆ ಹಾಕಿ ಹಾಡಿಯಲ್ಲಿ ನೀವುಗಳು ಎಷ್ಟು ವರ್ಷದಿಂದ ವಾಸ ಮಾಡಿ ಕೊಂಡಿದ್ದೀರಾ ಹಾಗೂ ಸರ್ಕಾರದ ವತಿಯಿಂದ ಸಿಗುವ ಸೌಲಭ್ಯಗಳು ಸಮರ್ಪಕವಾಗಿ ದೊರೆಯು ತ್ತಿದೆಯೋ ಹಾಗೂ ಹಾಡಿಯಲ್ಲಿ ಇರುವ ಆದಿವಾಸಿಗಳು ಯಾವ ರೀತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಮೂಲ ಸೌಕರ್ಯಗಳು ಆಗಿದೆಯೋ ಹಾಗೂ ಹಾಡಿಗಳಲ್ಲಿ ಭತ್ತ ಸೇರಿದಂತೆ ಇನ್ನಿತರ ಕೃಷಿಯನ್ನು ಮಾಡಲಾಗುತ್ತಿದೆ ಎಂದು ಮಾಹಿತಿ ಪಡೆದುಕೊಂಡರು.
ಈ ಸಂದರ್ಭ ಆದಿವಾಸಿ ಮುಖಂಡ ಅಪ್ಪಾಜಿ ಮಾತನಾಡಿ, ಇಲ್ಲಿನ ಆದಿವಾಸಿಗಳು ೧೯೬೩ರಿಂದಲೇ ಅರಣ್ಯ ಪ್ರದೇಶದೊಳಗೆ ವಾಸ ಮಾಡಿಕೊಂಡಿದ್ದಾರೆ. ತಲಾ ತಲಾಂತರದಿAದ ವಾಸ ಮಾಡಿಕೊಂಡಿರುವ ಆದಿವಾಸಿಗಳು ಹಿಂದಿನ ಕಾಲದಲ್ಲಿ ಗೆಡ್ಡೆ ಗೆಣಸು ತಿಂದು ಕಾಡಿನಲ್ಲೇ ವಾಸ ಮಾಡಿಕೊಂಡು ಅರಣ್ಯವನ್ನು ಅಭಿವೃದ್ಧಿಪಡಿಸುತ್ತ ಜೀವನ ಸಾಗಿಸುತ್ತಾ ಬಂದಿದ್ದಾರೆ ಎಂದು ಮಾಹಿತಿ ನೀಡಿದರು.
ಅರಣ್ಯದಲ್ಲಿ ವಾಸ ಮಾಡುತ್ತಿರುವ ಆದಿವಾಸಿಗಳು ನಿರಂತರ ಹೋರಾಟ ಮಾಡಿದ ಹಿನ್ನೆಲೆಯಲ್ಲಿ ೨೦೦೬ರಲ್ಲಿ ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ ನಿವಾಸಿಗಳಿಗೆ ಹಕ್ಕು ಪತ್ರ ಲಭಿಸಿದೆ ಎಂದರು. ಸರ್ಕಾರದ ಮುಖಾಂತರ ಹಾಡಿಗಳಿಗೆ ಸ್ವಲ್ಪ ಮಟ್ಟದಲ್ಲಿ ಮಾತ್ರ ಮೂಲ ಸೌಕರ್ಯ ಲಭಿಸಿದ್ದು, ಬಹುತೇಕ ಹಾಡಿ ನಿವಾಸಿಗಳು ಇನ್ನು ಕೂಡ ಅತಂತ್ರ ಸ್ಥಿತಿಯಲ್ಲಿದ್ದಾರೆಂದರು.
ಈ ಸಂದರ್ಭ ಬೆಂಗಳೂರಿನಿAದ ಆಗಮಿಸಿದ ಮಾಹಿತಿ ತಂಡದ ನಾಗೇಂದ್ರ, ಗೀತಾ ಹಾಗೂ ಜಿಲ್ಲಾ ಐಟಿಡಿಪಿ ಅಧಿಕಾರಿ ಶಿವಕುಮಾರ್, ವೀರಾಜಪೇಟೆ ತಾಲೂಕು ಅಧಿಕಾರಿ ಗುರುಶಾಂತಪ್ಪ ಇನ್ನಿತರರು ಹಾಜರಿದ್ದರು. ಡ್ರೋನ್ ಕ್ಯಾಮರಾ ಮುಖಾಂತರ ಹಾಡಿಯನ್ನು ಚಿತ್ರೀಕರಿಸಲಾಯಿತು.
- ವಾಸು ಎ.ಎನ್.