ಕೊಡಗು ಅನ್ಲಾಕ್ ಭವಿಷ್ಯದ ಬಗ್ಗೆ ಜಿಲ್ಲಾಧಿಕಾರಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಬಿ.ಎಸ್. ಯಡಿಯೂರಪ್ಪ ಅವರು ತಿಳಿಸಿದ್ದು, ಅದರಂತೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಭಾನುವಾರ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದು, ಕೊಡಗಿನ ಭವಿಷ್ಯ ಇಂದು ತಿಳಿಯಲಿದೆ. ಈ ಬಗ್ಗೆ ‘ಶಕ್ತಿ’ಯೊಂದಿಗೆ ಮಾತನಾಡಿದ ಚಾರುಲತಾ ಅವರು, ಅನ್ಲಾಕ್ ಬಗೆಗಿನ ಸರಕಾರದ ಮಾರ್ಗಸೂಚಿ ನನ್ನ ಕೈ ಸೇರಿದೆ. ಅದರ ಆಧಾರದಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು. ಜಿಲ್ಲೆಯಲ್ಲಿ ನಿಯಮ ಸಡಿಲಿಕೆ ಬಗ್ಗೆ ಮಾರ್ಗ ಸೂಚಿಯಲ್ಲಿ ಪ್ರಸ್ತಾಪವಿಲ್ಲ. ಕೊಡಗು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಲಾಗಿದೆ. ಕೊಡಗು ಜಿಲ್ಲೆ ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ನಿಯಮ ಸಡಿಲಿಸಲಾಗಿದೆ ಎಂದಿರುವ ಅವರು, ಒಂದು ವಾರ ಬಿಗಿನಿಯಮಗಳು ಮುಂದುವರೆಯುವ ಸಾಧ್ಯತೆಗಳಿವೆ ಎಂದು ಕೂಡ ತಿಳಿಸಿದ್ದಾರೆ.