ಮಡಿಕೇರಿ, ಜು. ೨: ಬೆಂಗಳೂರು ಸಿಸ್ಕೋ ಕಂಪೆನಿಯ ಸಹಭಾಗಿತ್ವದಲ್ಲಿ ಜಾಗೃತಿ ಸಂಸ್ಥೆ ವತಿಯಿಂದ ತಾ. ೩ರಂದು (ಇಂದು) ಮುಕ್ಕೋಡ್ಲು, ಹಟ್ಟಿಹೊಳೆ, ಗರ್ವಾಲೆ, ಸೂರ್ಲಬ್ಬಿ, ಮಾದಾಪುರ, ಹರದೂರು, ಕಾನ್‌ಬೈಲ್, ೭ನೇ ಹೊಸಕೋಟೆ, ಕಂಬಿಬಾಣೆ ಹಾಗೂ ಕೊಡಗರಹಳ್ಳಿ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರಿಗೆ ಆಹಾರ ಕಿಟ್ ವಿತರಿಸಲಾಗುವುದು ಎಂದು ಜಾಗೃತಿ ಸಂಸ್ಥೆಯ ಶಿವಪ್ರಸಾದ್, ಸಿಸ್ಕೋ ಸಂಸ್ಥೆಯ ಸಂಪತ್ ಬಾನಂಡ ತಿಳಿಸಿದ್ದಾರೆ.