ಮಡಿಕೇರಿ, ಜು. ೩: ವಿಶಿಷ್ಟವಾದ ಕೊಡವ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ನಿಟ್ಟಿನಲ್ಲಿ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಕೇಂದ್ರ ಪ್ರವಾಸೋದ್ಯಮ ಇಲಾಖೆಯ ಅನುದಾನದ ಮೂಲಕ ಕಳೆದ ಹಲವು ವರ್ಷಗಳ ಹಿಂದೆ ರೂಪಿತವಾಗಿರುವ ಕೊಡವ ಹೆರಿಟೇಜ್ ಸೆಂಟರ್ (ಕೊಡವ ಪಾರಂಪರಿಕ ತಾಣ) ಯೋಜನೆ ಇನ್ನೂ ಪೂರ್ಣಗೊಂಡಿಲ್ಲ. ಈ ಯೋಜನೆ ರೂಪಿತಗೊಂಡು ಸುಮಾರು ೧೧ ವರ್ಷಗಳೇ ಕಳೆದಿವೆ. ಈ ಕಾಮಗಾರಿ ಇನ್ನೂ ಆಮೆ ನಡಿಗೆಯಂತೆ ಮಂದಗತಿಯಲ್ಲೇ ಸಾಗುತ್ತಿದೆ. ಈ ಹಿಂದೆ ಕೊಡಗು ಮೂಲದವರಾದ ರತಿ ವಿನೇಜಾ ಅವರು ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿಗಳಾಗಿದ್ದ ಸಂದರ್ಭ ಈ ಯೋಜನೆ ರೂಪಿತವಾಗಿತ್ತು. ನಗರದ ಹೊರವಲಯದಲ್ಲಿ ತಲೆ ಎತ್ತುತ್ತಿರುವ ಈ ಕಾಮಗಾರಿಯ ಸ್ಥಳಕ್ಕೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ಭೇಟಿ ನೀಡಿ ವಸ್ತು ಸ್ಥಿತಿಯ ಬಗ್ಗೆ ಪರಿಶೀಲನೆ ನಡೆಸಿ ಸಂಬAಧಿಸಿದವರಿಗೆ ತ್ವರಿತವಾಗಿ ಕೆಲಸ ಪೂರ್ಣಗೊಳಿಸುವ ನಿಟ್ಟಿನಲ್ಲಿ ನಿರ್ದೇಶನ ನೀಡಿದರು.

ಹಲವಾರು ಲೋಪ

ಉದ್ದೇಶಿತ ಯೋಜನೆ ಆರಂಭದಲ್ಲಿ ರೂ. ೧.೪೫ ಕೋಟಿ ವೆಚ್ಚದ್ದಾಗಿತ್ತು. ಆದರೆ ಸಕಾಲದಲ್ಲಿ ಕೆಲಸ ಪೂರ್ಣಗೊಳಿಸದಿರುವದು, ಸಂಬAಧಿಸಿದ ಇಲಾಖೆಗಳ ನಿರ್ಲಕ್ಷö್ಯ, ಗುತ್ತಿಗೆದಾರರ ಲೋಪ ಇನ್ನಿತರ ಕಾರಣಗಳಿಂದಾಗಿ ಈ ಹಣ ವ್ಯಯವಾದರೂ ಯೋಜನೆ ಆರಂಭಿಕ ಹಂತದಲ್ಲೇ ಉಳಿದಿತ್ತು. ಬಳಿಕ ಯೋಜನೆಗೆ ಇನ್ನಷ್ಟು ಅನುದಾನ ಬೇಕಾಗಿ ಈ ಮೊತ್ತ ಮತ್ತೆ ೨.೬೮ ಕೋಟಿಗೆ ಏರಿಕೆಯಾಗಿತ್ತು. ಆದರೂ ಕಾಮಗಾರಿ ಪೂರ್ಣಗೊಳ್ಳಲಿಲ್ಲ. ಇದರಲ್ಲಿ ಆರಂಭದಲ್ಲಿ ಬಿಡುಗಡೆಯಾಗಿದ್ದ ರೂ. ೧.೪೫ ಕೋಟಿ ಹಾಗೂ ನಂತರ ಏರಿಕೆಯಾದ ಮೊತ್ತದಲ್ಲೂ ಸುಮಾರು ರೂ. ೫೦ ಲಕ್ಷಕ್ಕೂ ಅಧಿಕ ಮೊತ್ತ ವ್ಯಯವಾಗಿದೆ. ಕಾಮಗಾರಿ ಅಸಮರ್ಪಕವಾದ ಹಿನ್ನೆಲೆಯಲ್ಲಿ ಹಣ ಪಾವತಿ ಮಾಡದಿರುವಂತೆ ಶಾಸಕರು ಸೂಚಿಸಿದ್ದರೂ, ಹಣ ಮಾತ್ರ ಪಾವತಿಯಾಗಿದೆ. ಈ ಬಗ್ಗೆ ಶಾಸಕರು ಆಕ್ಷೇಪಿಸಿದ್ದಾರೆ.

ಆರಂಭಿಕ ಹಂತದಲ್ಲಿ ಎರಡು ಗುತ್ತಿಗೆದಾರರು ಈ ಕೆಲಸ ನಿರ್ವಹಿಸಿದ್ದಾರೆ. ಇದರಲ್ಲಿ ಮೈಸೂರಿನ ಗುತ್ತಿಗೆದಾರರೊಬ್ಬರನ್ನು ಕರ್ತವ್ಯ ಲೋಪದಂತೆ ಕಪ್ಪುಪಟ್ಟಿಗೂ ಸೇರಿಸಲಾಗಿದೆ.

(ಮೊದಲ ಪುಟದಿಂದ) ಇದಲ್ಲದೆ ಪಿಟಿಷನ್ ಕಮಿಟಿ ಮೂಲಕ ಅಪವ್ಯಯ ಮಾಡಿರುವ ಹಣವನ್ನು ಮರು ವಸೂಲಿ ಮಾಡಲೂ ಸೂಚಿಸಲಾಗಿತ್ತು.

ಮರು ಪ್ರಸ್ತಾವನೆ

ಪ್ರಸ್ತುತ ಈ ಕಾಮಗಾರಿಯನ್ನು ಪೂರ್ಣಗೊಳಿಸಲು ಹೊಸದಾಗಿ ಮರು ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ವಿಳಂಬದ ಕಾರಣದಿಂದಾಗಿ ಕಾಮಗಾರಿಯ ಮೊತ್ತ ಸುಮಾರು ರೂ. ೫ ಕೋಟಿಯಷ್ಟಾಗಲಿದ್ದು, ಅಗತ್ಯವಿರುವ ಬಾಕಿ ಹಣಕ್ಕಾಗಿ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ಶಾಸಕ ರಂಜನ್ ‘ಶಕ್ತಿ’ಗೆ ತಿಳಿಸಿದರು.

ಶೇ. ೬೦ ರಷ್ಟು ಕೆಲಸ

ಸದ್ಯದ ಮಟ್ಟಿಗೆ ಶೇ. ೬೦ ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಉಳಿದ ಕಾಮಗಾರಿ ಬಾಕಿ ಇದೆ. ಕೊಡವ ಸಂಸ್ಕೃತಿಯನ್ನು ಪ್ರತಿಬಿಂಬಿಸುವAತೆ, ಎರಡು ಐನ್‌ಮನೆಗಳ ಮಾದರಿಯಲ್ಲಿ ಹೆರಿಟೇಜ್ ಸೆಂಟರ್ ನಿರ್ಮಾಣವಾಗುತ್ತಿದೆ. ಇಲ್ಲಿ ಸಂಸ್ಕೃತಿಗೆ ಪೂರಕವಾದ ಇತರ ಪರಿಕರಗಳೂ ಗಮನ ಸೆಳೆಯಲಿದ್ದು, ಲೋಕೋಪಯೋಗಿ ಇಲಾಖೆಯ ಮೂಲಕ ಕಾಮಗಾರಿ ಪೂರ್ಣಗೊಂಡ ಬಳಿಕ ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರವಾಗಬೇಕಿದೆ. ಕಾಮಗಾರಿಗೆ ಬಳಸಿರುವ ಮರಗಳು ಹಾಳಾಗಿರುವ ಹಿನ್ನೆಲೆಯಲ್ಲಿ ಇದನ್ನು ಬದಲಾಯಿಸಿ ಕಬ್ಬಿಣವನ್ನು ಅಳವಡಿಸಲಾಗುತ್ತಿದೆ.

ಕ್ರಮಕ್ಕೆ ಆಗ್ರಹ

ಕಾಮಗಾರಿಯ ವಿಳಂಬ ಸೇರಿದಂತೆ, ಆಗಿರುವ ಲೋಪದ ಬಗ್ಗೆ ಸಂಬAಧಿಸಿದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕಿದೆ. ಈ ಬಗ್ಗೆ ಸರಕಾರದ ಗಮನಕ್ಕೂ ತರಲಾಗಿದೆ ಎಂದು ಶಾಸಕರು ತಿಳಿಸಿದ್ದಾರೆ. ಇದೀಗ ಜಿಲ್ಲಾಧಿಕಾರಿಗಳ ಮೂಲಕ ಉಳಿಕೆ ಅನುದಾನಕ್ಕೆ ಸರಕಾರಕ್ಕೆ ಮರು ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುದಾನ ಸದ್ಯದಲ್ಲಿ ಸಿಗಲಿದೆ ಎಂದಿರುವ ಶಾಸಕರು ಅಪೂರ್ಣವಾಗಿರುವ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಸಂಬAಧಿಸಿದವರಿಗೆ ಸೂಚನೆ ನೀಡಿದ್ದಾರೆ. ನಿನ್ನೆ ಶಾಸಕರು ಭೇಟಿ ನೀಡಿದ ಸಂದರ್ಭ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಹಾಜರಿದ್ದು, ಮಾಹಿತಿ ಒದಗಿಸಿದರು.