ಅಮ್ಮತ್ತಿ, ಜು. ೧: ವಿಶ್ವ ವೈದ್ಯರ ದಿನದ ಅಂಗವಾಗಿ ಸುನ್ನಿ ಯುವಜನ ಸಂಘ ಹಾಗೂ ಸುನ್ನಿ ಸ್ಟುಡೆಂಟ್ಸ್ ಫೆಡರೇಷನ್ ಅಮ್ಮತ್ತಿ ಘಟಕದ ವತಿಯಿಂದ ವೈದ್ಯರಾದ ಡಾ.ಬೋಪಣ್ಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ಎಸ್.ವೈ.ಎಸ್ ಅಮ್ಮತ್ತಿ ಶಾಖಾ ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್, ಶಾಖಾ ಇಸಾಬಾ ಕಾರ್ಯದರ್ಶಿ ಮುಹಮ್ಮದ್, ಕೆ.ಸಿ.ಎಫ್ ಪ್ರಮುಖ ಆಶಿಕ್, ಎಸ್ಸೆಸ್ಸೆಫ್ ಅಮ್ಮತ್ತಿ ಶಾಖಾ ಕಾರ್ಯದರ್ಶಿ ಜಂಶೀದ್, ಎಸ್ಸೆಸ್ಸೆಫ್ ವೀರಾಜಪೇಟೆ ಡಿವಿಷನ್ ಕ್ಯಾಂಪಸ್ ಕನ್ವೀನರ್ ತೌಸೀಫ್ ಅಹ್ಮದ್ ಹಾಜರಿದ್ದರು.
ಸುನ್ನಿ ಯುವಜನ ಸಂಘ
ಗೋಣಿಕೊಪ್ಪಲು: ರಾಷ್ಟಿçÃಯ ವೈದ್ಯರ ದಿನಾಚರಣೆ ಅಂಗವಾಗಿ ವೀರಾಜಪೇಟೆ ತಾಲೂಕು ವೈದ್ಯಾಧಿಕಾರಿಗಳಾದ ಡಾ.ಯತಿರಾಜ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘದ ವತಿಯಿಂದ ಜಿಲ್ಲಾದ್ಯಕ್ಷ ಅಜೀಜ್ ಮುಸ್ಲಿಯಾರ್ ಅಧ್ಯಕ್ಷತೆಯಲ್ಲಿ ಗೋಣಿಕೊಪ್ಪಲು ವಿನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಘಟಕದ ಅಧ್ಯಕ್ಷರಾದ ಅಜೀಜ್ ಮುಸ್ಲಿಯಾರ್ ರವರು, ವೈದ್ಯರು ತಮ್ಮ ಜೀವದ ಹಂಗನ್ನು ತೊರೆದು ಕೋವಿಡ್ ಸಂದರ್ಭದಲ್ಲಿ ಹಗಲು ರಾತ್ರಿ ಎನ್ನದೆ ಶ್ರಮಿಸುತ್ತಿದ್ದಾರೆ. ಇದರಿಂದಾಗಿ ನಾಗರಿಕ ಸಮಾಜ ನೆಮ್ಮದಿಯಾಗಿದೆ,
ಈ ಕಾರಣದಿಂದ ವೈದ್ಯರ ದಿನದಂದು ವೈದ್ಯರನ್ನು ಗುರುತಿಸಿ ಗೌರವಿಸಲಾಗಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಯತಿರಾಜ್ ನನಗೆ ನೀಡಿರುವ ಗೌರವ ನಮ್ಮ ವೈದ್ಯಕೀಯ ತಂಡಕ್ಕೆ ಸಲ್ಲುತ್ತದೆ. ಆಶಾ ಕಾರ್ಯಕರ್ತೆಯಾದಿ ಯಾಗಿ ಹಲವು ಮಂದಿ ಕೋವಿಡ್ ಸಂದರ್ಭದಲ್ಲಿ ತಮ್ಮ ಸೇವೆ ಸಲ್ಲಿಸಿದ್ದಾರೆ. ಇದರಿಂದಾಗಿ ವೀರಾಜಪೇಟೆ ತಾಲೂಕಿನಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಇಳಿಮುಖ ಗೊಂಡಿದೆ. ಮರಣ ಪ್ರಮಾಣವು ಕಡಿಮೆಯಾಗಿದೆ ಎಂದರು.
ಎಸ್. ವೈ.ಎಸ್.ನ ಪದಾಧಿಕಾರಿ ಗಳಾದ ಅಬ್ದುಲ್ ಉಸ್ತಾದ್, ಕೆ.ಪಿ.ಎ.ಎಚ್. ಹಮೀದ್, ಹನೀಪ್, ಕೆ.ಪಿ.ಸಲಾಂ, ನಾಝೀರ ನಹೀಮ್, ಉಮರ್, ಫಾರೂಕ್, ಎ.ಸಿ.ಹಾರೀಶ್ ಮುಂತಾದವರು ಹಾಜರಿದ್ದರು.
ಎಸ್‌ವೈಎಸ್‌ನಿಂದ
ವೀರಾಜಪೇಟೆ ಸೆಂಟರ್ ಎಸ್‌ವೈಎಸ್ ಹಿಸಾಬ ತಂಡದವರು ಕೊರೊನಾ ಮುನ್ನೆಚ್ಚರಿಕೆಯೊಂದಿಗೆ ಡಾ. ದುರ್ಗಾ ಪ್ರಸಾದ್ ಅವರÀನ್ನು ವೈದ್ಯರ ದಿನಾಚರಣೆ ಪ್ರಯುಕ್ತ ಆಸ್ಪತ್ರೆಗೆ ಭೇಟಿ ನೀಡಿ ಶಾಲು ಹೊದಿಸಿ ಸನ್ಮಾನಿಸಿದರು. ಎಸ್‌ವೈಎಸ್ ಕಾರ್ಯದರ್ಶಿ ಅಹಮದ್ ಮದನಿ ಉಸ್ತಾದ್ ಸ್ವಾಗತಿಸಿದರು. ಎಸ್‌ಎಸ್‌ಎಫ್ ಕೊಡಗು ಜಿಲ್ಲಾ ಮಾಜಿ ಕಾರ್ಯದರ್ಶಿ ಉಬೈದ್ ಪ್ರಾಸ್ತಾವಿಕ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಎಸ್‌ವೈಎಸ್ ಕೊಡಗು ಜಿಲ್ಲಾ ಕೋಶಾಧಿಕಾರಿ ಇಬ್ರಾಹಿಂ ಹಾಜಿ ಕಲ್ಲುಬಾಣೆ, ಇಸ್ಮಾಯಿಲ್ ಹಾಜಿ ಗುಂಡಿಕೆರೆ, ಸೂಫಿ ಕಲ್ಲುಬಾಣೆ, ಕೆ.ಸಿ.ಎಫ್ ಕಾರ್ಯಕರ್ತ ನಝೀರ್ ಹಾಜಿ ಗುಂಡಿಕೆರೆ, ಉಮ್ಮರ್ ಕಲ್ಲು ಬಾಣೆ, ಹಿಸಾಬ ಅಮೀರ್ ಶರೀಫ್ ಝೈನಿ ಎಡಪಾಲ, ಸಾಮಾಜಿಕ ಕಾರ್ಯಕರ್ತ ಹಮೀದ್ ಗುಂಡಿಕೆರೆ ಮುಂತಾದವರು ಭಾಗವಹಿಸಿದ್ದರು. ಶಫೀಕ್ ಗುಂಡಿಕೆರೆ ವಂದಿಸಿದರು.