ಮಡಿಕೇರಿ, ಜು. ೧: ಕೊಡಗು ಯುವಸೇನೆಯ ಅಮ್ಮತ್ತಿ ಹೋಬಳಿ ಅಧ್ಯಕ್ಷರಾಗಿ ರತನ್ ಕುಯ್ಯಮುಡಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಪ್ರಮುಖರಾದ ಕುಲದೀಪ್ ಪೂಣಚ್ಚ ಹಾಗೂ ಜಿಲ್ಲಾ ಸಂಚಾಲಕ ಮಾಚೆಟ್ಟಿರ ಸಚಿನ್ ಮಂದಣ್ಣ ಅವರು ತಿಳಿಸಿದ್ದಾರೆ. ಅಮ್ಮತ್ತಿ ವಿಭಾಗದಲ್ಲಿ ಸೇನೆಯನ್ನು ಬಲಪಡಿಸುವಲ್ಲಿ ನಿಟ್ಟಿನಲ್ಲಿ ಸಂಪೂರ್ಣ ಅಧಿಕಾರ ಅವರಿಗೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.