ಸೋಮವಾರಪೇಟೆ, ಜು. ೧: ಕೊರೊನಾ ಸೋಂಕು ತಗುಲಿದವರು ಯಾವುದೇ ಕಾರಣಕ್ಕೂ ಹೆದರದೇ ಆತ್ಮಸ್ಥೆöÊರ್ಯದಿಂದ ವೈದ್ಯರ ಆರೈಕೆ, ಸಲಹೆ, ಸೂಚನೆಗಳನ್ನು ಪಾಲಿಸುವು ದರಿಂದ ಶೀಘ್ರ ಗುಣಮುಖ ರಾಗಬಹುದು ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.

ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾ ಸಂಬAಧಿತ ಸೇವಾಕಾರ್ಯದಲ್ಲಿರುವ ವೈದ್ಯರು ಮತ್ತು ಸಿಬ್ಬಂದಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.

ಕೊರೊನಾ ಕಾಯಿಲೆಗೆ ಹೆದರದೆ ಧೈರ್ಯದಿಂದ ಎದುರಿಸಿದರೆ ಮಾತ್ರ ಸಂಪೂರ್ಣವಾಗಿ ಜಿಲ್ಲೆಯನ್ನು ಕೊರೊನಾ ಮುಕ್ತವಾಗಿಸಲು ಸಾಧ್ಯ. ವೈದ್ಯರು ಎಷ್ಟೇ ಪ್ರಯತ್ನ ಮಾಡಿದರೂ ಅವರೊಂದಿಗೆ ಕೊರೊನಾ ಸೋಂಕಿತರು ಧೈರ್ಯದಿಂದ ಸಹಕರಿಸದಿದ್ದರೆ ಸಾವಿನ ಪ್ರಮಾಣ ತಗ್ಗಿಸಲು ಅಸಾಧ್ಯ. ಸೋಂಕಿತರಲ್ಲಿ ಮಾನಸಿಕ ಸ್ಥೆöÊರ್ಯ ತುಂಬಲು ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಖುದ್ದಾಗಿ ಭೇಟಿ ನೀಡಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದೇವೆ ಎಂದು ಶಾಸಕರು ಹೇಳಿದರು.

ಕಳೆದ ವರ್ಷ ಕೊರೊನಾ ಮೊದಲನೆ ಅಲೆ ಬಂದಾಗ ಅಷ್ಟೇನೂ ಪರಿಣಾಮ ಬೀರಿರಲಿಲ್ಲ. ಆದರೆ ಎರಡನೇ ಅಲೆಯಲ್ಲಿ ಯುವ ಸಮೂಹವೂ ಸಂಕಷ್ಟ ಎದುರಿಸುವಂತಾಯಿತು. ಹೀಗಾಗಿ ಸಹಕರಿಸದಿದ್ದರೆ ಸಾವಿನ ಪ್ರಮಾಣ ತಗ್ಗಿಸಲು ಅಸಾಧ್ಯ. ಸೋಂಕಿತರಲ್ಲಿ ಮಾನಸಿಕ ಸ್ಥೆöÊರ್ಯ ತುಂಬಲು ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಖುದ್ದಾಗಿ ಭೇಟಿ ನೀಡಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದೇವೆ ಎಂದು ಶಾಸಕರು ಹೇಳಿದರು.

ಕಳೆದ ವರ್ಷ ಕೊರೊನಾ ಮೊದಲನೆ ಅಲೆ ಬಂದಾಗ ಅಷ್ಟೇನೂ ಪರಿಣಾಮ ಬೀರಿರಲಿಲ್ಲ. ಆದರೆ ಎರಡನೇ ಅಲೆಯಲ್ಲಿ ಯುವ ಸಮೂಹವೂ ಸಂಕಷ್ಟ ಎದುರಿಸುವಂತಾಯಿತು. ಹೀಗಾಗಿ ಸಹಕರಿಸದಿದ್ದರೆ ಸಾವಿನ ಪ್ರಮಾಣ ತಗ್ಗಿಸಲು ಅಸಾಧ್ಯ. ಸೋಂಕಿತರಲ್ಲಿ ಮಾನಸಿಕ ಸ್ಥೆöÊರ್ಯ ತುಂಬಲು ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಖುದ್ದಾಗಿ ಭೇಟಿ ನೀಡಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದೇವೆ ಎಂದು ಶಾಸಕರು ಹೇಳಿದರು.

ಕಳೆದ ವರ್ಷ ಕೊರೊನಾ ಮೊದಲನೆ ಅಲೆ ಬಂದಾಗ ಅಷ್ಟೇನೂ ಪರಿಣಾಮ ಬೀರಿರಲಿಲ್ಲ. ಆದರೆ ಎರಡನೇ ಅಲೆಯಲ್ಲಿ ಯುವ ಸಮೂಹವೂ ಸಂಕಷ್ಟ ಎದುರಿಸುವಂತಾಯಿತು. ಹೀಗಾಗಿ ಮೂರನೆ ಅಲೆಯನ್ನು ಸಮರ್ಥವಾಗಿ ಎದುರಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.

ವಿಧಾನಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಮಾತನಾಡಿ, ತಮ್ಮ ಪ್ರಾಣವನ್ನೂ ಲೆಕ್ಕಿಸದೆ ವೈದ್ಯರು ಮತ್ತು ಆರೋಗ್ಯ ಇಲಾಖಾ ಸಿಬ್ಬಂದಿಗಳು ಹಗಲಿರುಳು ದುಡಿಯುತಿದ್ದಾರೆ. ಅವರ ಸೇವೆ ಎಂದೆAದಿಗೂ ಸ್ಮರಣೀಯವಾದುದು ಎಂದು ಶ್ಲಾಘಿಸಿದರು.

ಕೊಡ್ಲಿಪೇಟೆಯ ಕಿರಿಕೊಡ್ಲಿ ಮಠದ ಪೀಠಾಧಿಪತಿಗಳಾದ ಶ್ರೀ ಸದಾಶಿವ ಸ್ವಾಮೀಜಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಡಿ ಗ್ರೂಪ್ ನೌಕರರಿಗೆ ಶಾಸಕರು ಆಹಾರ ಸಾಮಗ್ರಿಗಳ ಕಿಟ್‌ಗಳನ್ನು ವಿತರಿಸಿದರು.

ಈ ಸಂದರ್ಭ ಮಾಜಿ ಎಂ.ಎಲ್.ಸಿ. ಎಸ್.ಜಿ.ಮೇದಪ್ಪ, ತಹಶೀಲ್ದಾರ್ ಗೋವಿಂದರಾಜು, ಸೋಮವಾರಪೇಟೆ ಪೊಲೀಸ್ ನಿರೀಕ್ಷಕರಾದ ಮಹೇಶ್, ಶನಿವಾರಸಂತೆ ಪೊಲೀಸ್ ನಿರೀಕ್ಷಕರಾದ ಪರಶಿವಮೂರ್ತಿ, ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ರವೀಂದ್ರ ಉಪಸ್ಥಿತರಿದ್ದರು. ಪತ್ರಕರ್ತ ಮುರಳೀಧರ್, ಪ್ರಮುಖರಾದ ಶರತ್, ಜೀವನ್, ಎಸ್.ಆರ್. ಸೋಮೇಶ್ ಕಾರ್ಯಕ್ರಮ ನಿರ್ವಹಿಸಿದರು.