ಮಡಿಕೇರಿ: ನಗರದ ಡೈರಿ ಫಾರಂನಲ್ಲಿರುವ ಶಕ್ತಿಧಾಮ ಮಾದಕ ವಸ್ತು ವ್ಯಸನಿಗಳ ಸಮಗ್ರ ಪುನರ್ವಸತಿ ಕೇಂದ್ರದಲ್ಲಿ ಅಂರ‍್ರಾಷ್ಟಿçÃಯ ಮಾದಕ ವಸ್ತು ದಿನಾಚರಣೆಯನ್ನು ಕೋವಿಡ್ ಮಾರ್ಗಸೂಚಿಯಂತೆ ಆಚರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕೊಡಗು ಜಿಲ್ಲಾ ವೈದ್ಯಕೀಯ ಕಾಲೇಜಿನ ಶಸ್ತç ಚಿಕಿತ್ಸಾ ವಿಭಾಗದ ಪ್ರಾಧ್ಯಾಪಕ ಡಾ. ಸತೀಶ್ ವಿ. ಶಿವಮಲ್ಲಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾದಕ ವ್ಯಸನ ಸಮಾಜಕ್ಕೆ ಮಾರಕ ಹಾಗೂ ಹಾನಿಕರ ಎಂದರಲ್ಲದೆ ಈ ವ್ಯಸನದಿಂದ ಹೇಗೆ ಹೊರಬರಬೇಕು ಎನ್ನುವುದರ ಕುರಿತು ಮಾಹಿತಿ ನೀಡಿದರು.

ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ್ದ ಮಡಿಕೇರಿ ಮದೆ ಮಹೇಶ್ವರ ಪಿ.ಯು. ಕಾಲೇಜಿನ ಪ್ರಾಧ್ಯಾಪಕ ಶ್ರೀನಿವಾಸ್ ಮಾದಕ ವ್ಯಸನದ ದುಷ್ಪರಿಣಾಮಗಳ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಪತ್ರಕರ್ತ ರಂಜಿತ್ ಕವಲಪಾರ ಮಾತನಾಡಿ, ಮಕ್ಕಳನ್ನು ಸುಸಂಸ್ಕೃತರಾಗಿ ಬೆಳೆಸುವಲ್ಲಿ ಪೋಷಕರ ಹಾಗೂ ಶಿಕ್ಷಕರ ಪಾತ್ರ ಮಹತ್ವದ್ದು ಎಂದರು.

ಶಕ್ತಿಧಾಮದ ಯೋಜನಾ ಸಹಾಯಕ ಪ್ರಭು, ಮಾಜಿ ನಗರಸಭಾ ಸದಸ್ಯ ಪೀಟರ್, ಶಕ್ತಿ ವೃದ್ಧಾಶ್ರಮದ ಮೇಲ್ವಿಚಾರಕ ಸತೀಶ್, ಸಮಾಜ ಸೇವಕ ವಿನು ಹೆಚ್.ಆರ್. ಹಾಗೂ ಸಮೀರ್ ಹಾಜರಿದ್ದರು.ಶನಿವಾರಸಂತೆ: ಪಟ್ಟಣದ ಪೊಲೀಸ್ ಠಾಣೆ ವತಿಯಿಂದ ಬೈಪಾಸ್ ರಸ್ತೆ ಜಂಕ್ಷನ್, ಗುಡುಗಳಲೆ ಹಾಗೂ ಆರ್.ವಿ. ಕಲ್ಯಾಣ ಮಂಟಪದ ಮುಂಭಾಗದಲ್ಲಿ ಅಂರ‍್ರಾಷ್ಟಿçÃಯ ಮಾದಕ ದ್ರವ್ಯ ವಿರೋಧಿ ದಿನವನ್ನು ಕೋವಿಡ್ ಲಾಕ್‌ಡೌನ್ ಹಿನ್ನೆಲೆ ಸರಳವಾಗಿ ಆಚರಿಸಲಾಯಿತು. ಸರ್ಕಲ್ ಇನ್ಸ್ಪೆಕ್ಟರ್ ಎಸ್. ಪರಶಿವಮೂರ್ತಿ ಮಾತನಾಡಿ, ಮಾದಕ ದ್ರವ್ಯ ಸೇವನೆಯ ಜಾಲ, ಪೂರೈಕೆ ಹಾಗೂ ಸಾಗಾಟದ ಬಗ್ಗೆ ತಿಳಿದು ಬಂದರೆ ಸಾರ್ವಜನಿಕರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಕೋರಿದರು.

ಪಿಎಸ್‌ಐ ಹೆಚ್.ಈ. ದೇವರಾಜ್, ಎಎಸ್‌ಐ ಜಯಕುಮಾರ್, ಸಿಬ್ಬಂದಿ ಹರೀಶ್, ಕುಮಾರ್ ಇತರರು ಹಾಗೂ ನಾಗರಿಕರು ಹಾಜರಿದ್ದರು.