ಗುಡ್ಡೆಹೊಸೂರು, ಜೂ. ೩೦: ಇಲ್ಲಿನ ಸಿದ್ದಾಪುರ ರಸ್ತೆಯಲ್ಲಿ ಸುಮಾರು ೫ ಕಿ.ಮೀ.ನ ರಸ್ತೆ ಕಾಮಗಾರಿ ನಡೆಯುತ್ತಿದ್ದು. ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಸುಮಾರು ೫೦ ಮೀ. ನಷ್ಟು ರಸ್ತೆಗೆ ಡಾಂಬರು ಹಾಕಲು ಬಾಕಿ ಇದೆ. ಈ ಸ್ಥಳದಲ್ಲಿ ವಾಹನಗಳು ಅತಿವೇಗದಲ್ಲಿ ಬಂದು ರಸ್ತೆಯಲ್ಲಿ ಅವಘಡ ಸಂಭವಿಸುತ್ತಿದೆ. ರಸ್ತೆಗೆ ಚರಂಡಿ ನಿರ್ಮಿಸಲು ಅಲ್ಲಿರುವ ತಡೆಗೋಡೆಯ ಅಡಚಣೆಯಿಂದ ರಸ್ತೆ ಕಾಮಗಾರಿಗೆ ತೊಂದರೆಯಾಗಿದ್ದು. ಮುಂದಿನ ದಿನಗಳಲ್ಲಿ ಕಾಮಗಾರಿ ಮುಗಿಸದಿದ್ದಲ್ಲಿ. ಈ ಸ್ಥಳದಲ್ಲಿ ಸಾರ್ವಜನಿಕರು ಸೇರಿ ಪ್ರತಿಭಟಿಸುವುದಾಗಿ ಇಲ್ಲಿನ ನಿವಾಸಿಗಳಾದ ಅಭಿ, ಕುಮಾರ, ಸುಬ್ರಮಣಿ, ರಮೇಶ್ ಮುಂತಾದವರು ಪತ್ರಿಕಾ ಹೇಳಿಕೆ ನೀಡಿದ್ದಾರೆ. ಅಲ್ಲದೆ ಈ ಬಗ್ಗೆ ಇಲ್ಲಿನ ಗ್ರಾಮ ಪಂಚಾಯಿತಿ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.