ಮಡಿಕೇರಿ, ಜೂ. ೩೦: ಪೋಷಕರು ತಮಗೆ ಬೇಡವಾದ ನವಜಾತ ಶಿಶುವನ್ನು ಕಸದ ತೊಟ್ಟಿಗೆ ಎಸೆದು, ಎಳೆಯ ಜೀವಗಳನ್ನು ಬೀದಿ ನಾಯಿ, ವಿಷ ಜಂತುಗಳಿಗೆ ಬಲಿಯಾಗುವುದನ್ನು ತಪ್ಪಿಸುವ ಸಲುವಾಗಿ ಕೊಡಗು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವತಿಯಿಂದ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ “ಮಮತೆಯ ತೊಟ್ಟಿಲು” ಕಟ್ಟಡವನ್ನು ನಿರ್ಮಿಸಲಾಗಿರುತ್ತದೆ.
ಜಿಲ್ಲಾ ಆಸ್ಪತ್ರೆಯ ಹೊಸ ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ಹಾನಿಗೀಡಾಗಿರುವ ಮಮತೆಯ ತೊಟ್ಟಿಲು ಕೇಂದ್ರವನ್ನು ಜುಲೈ-೨೦೨೧ ರ ಮಾಹೆಯಲ್ಲಿ ತಾಯಿ ಮತ್ತು ಮಗುವಿನ ಆಸ್ಪತ್ರೆಯ ಆವರಣದಲ್ಲಿ ಸಖಿ ಒನ್ ಸ್ಟಾಪ್ ಸೆಂಟರ್ ಕೆಳಭಾಗದ ನೂತನ ಕಟ್ಟಡದಲ್ಲಿ ಕಾರ್ಯಾರಂಭ ಮಾಡಲಾಗುತ್ತಿದ್ದು, ಪೋಷಕರು ತಮಗೆ ಬೇಡವಾದ ಮಗುವನ್ನು ತೊಟ್ಟಿಲಿನಲ್ಲಿ ಹಾಕಲು ಕೋರಲಾಗಿದೆ. ಅಥವಾ ಜಿಲ್ಲಾ ಮP್ಕÀಳ ರಕ್ಷಣಾ ಘಟಕ, ಓಂಕಾರೇಶ್ವರ ದೇವಸ್ಥಾನ ರಸ್ತೆ ಮಡಿಕೇರಿ ಈ ಕಚೇರಿಗೆ ಒಪ್ಪಿಸುವುದು. ಹೀಗೆ ತಮಗೆ ಒಪ್ಪಿಸಿದ ಮಕ್ಕಳನ್ನು ಸರ್ಕಾರದ ವಿಶೇಷ ದತ್ತು ಕೇಂದ್ರದಲ್ಲಿ ಸಲಹಲಾಗುತ್ತದೆ. ತಾಯಂದಿರು/ಪೋಷಕರು ಮನಸ್ಸು ಬದಲಾಯಿಸಿ ಮಗು ತಮಗೆ ಬೇಕೆನಿಸಿದ್ದಲ್ಲಿ ೬೦ ದಿನದೊಳಗೆ ಕೋರಿಕೆಯನ್ನು ಸಲ್ಲಿಸಿ ಪಡೆಯಬಹುದಾಗಿದೆ. ೬೦ ದಿನ ಕಳೆದ ನಂತರ ಮಗು ದತ್ತು ಪ್ರಕ್ರಿಯೆಗೆ ಅರ್ಹವಾಗುತ್ತದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ತಿಳಿಸಿದ್ದಾರೆ.