ವೀರಾಜಪೇಟೆ, ಜೂ. ೩೦: ಮಕ್ಕಳೊಂದಿಗೆ ಪತ್ನಿ ಮನೆಯಿಂದ ಕಾಣೆ ಯಾಗಿರುವ ಕುರಿತು ಪತಿ ಪೊಲೀಸರಿಗೆ ದೂರು ಸಲ್ಲಿಸಿರುವ ಪ್ರಕರಣ ನಡೆದಿದೆ. ವೀರಾಜಪೇಟೆ ತಾಲೂಕಿನ ಕೆ. ಬೋಯಿಕೇರಿ ಕೊಟ್ಟೋಳಿ ಗ್ರಾಮದ ನಿವಾಸಿ ಎಂ.ಎA. ಅಜೀಜ್ ಎಂಬುವವರ ಪತ್ನಿ ಸುಮಯ್ಯ ಎಂ.ಎ. (೩೨) ತನ್ನ ಅಪ್ರಾಪ್ತ ಪುತ್ರ ಹಾಗೂ ಪುತ್ರಿಯೊಂದಿಗೆ ನಾಪತ್ತೆಯಾಗಿರುವದಾಗಿ ಅಜೀಜ್ ದೂರು ನೀಡಿದ್ದಾರೆ.

ಕೆ. ಬೋಯಿಕೇರಿ ಕೊಟ್ಟೋಳಿಯ ನಿವಾಸಿ ಎಂ.ಎA. ಮೊಯ್ದು ಎಂಬವರ ಪುತ್ರ ಎಂ.ಎA. ಅಜೀಜ್ ಕೂಲಿ ಕಾರ್ಮಿಕರಾಗಿದ್ದು, ೧೦ ವರ್ಷಗಳ ಹಿಂದೆ ಸುಮಯ್ಯ ಎಂಬವರನ್ನು ವಿವಾಹವಾಗಿ ಇಬ್ಬರು ಮಕ್ಕಳಿದ್ದಾರೆ. ಎಂದಿನAತೆ ತಾ. ೨೮ರಂದು ಅಜೀಜ್ ಸನಿಹದ ತೋಟದಲ್ಲಿ ಕೂಲಿ ಕೆಲಸಕ್ಕೆಂದು ತೆರಳಿದ್ದಾರೆ. ಪತ್ನಿ ಸುಮಯ್ಯ ಸಂಜೆ ೪-೧೫ ರ ವೇಳೆಗೆ ದೂರವಾಣಿ ಕರೆ ಮಾಡಿ ಮನೆ ಬಿಟ್ಟು ಮಕ್ಕಳೊಂದಿಗೆ ತೆರಳುತ್ತಿದ್ದೇವೆ ಹುಡುಕಾಟ ನಡೆಸದಿರು ಎಂದು ಹೇಳಿದ್ದಾರೆ. ಕೆಲಸ ಮಾಡುವ ಸ್ಥಳದಿಂದ ಸಂಜೆ ಅಜೀಜ್ ಮನೆಗೆ ಆಗಮಿಸಿದ ಸಂದರ್ಭ ಮನೆಯ ಬಾಗಿಲಿಗೆ ಬೀಗ ಹಾಕಲಾಗಿತ್ತು. ಬೀಗ ಒಡೆದು ಮನೆ ಒಳ ಪ್ರವೇಶ ಮಾಡಿದ ನೋಡಿದಾಗ ಪತ್ನಿಯೊಂದಿಗೆ ಮನೆಯಲ್ಲಿದ್ದ ದಾಖಲೆ ಪತ್ರಗಳು ಕಾಣೆಯಾಗಿದ್ದು, ಪತ್ನಿ ಮತ್ತು ಮಕ್ಕಳಿಗಾಗಿ ಸಂಬAಧಿಕರ ಮನೆ, ಸ್ನೇಹಿತರ ಮನೆ ಎಲ್ಲಾ ಭಾಗದಲ್ಲಿ ಹುಡುಕಾಟ ನಡೆಸಿದರೂ ಎಲ್ಲಿಯೂ ಪತ್ತೆಯಾಗಿರುವದಿಲ್ಲ ಎಂದು ಅಜೀಜ್ ದೂರು ದಾಖಲಿಸಿದ್ದಾರೆ.

ಕಾಣೆಯಾದವರ ಬಗ್ಗೆ ಸುಳಿವು ಕಂಡುಬAದಲ್ಲಿ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ ೦೮೨೭೪-೨೫೭೪೬೨, ೯೪೮೦೮೦೪೯೫೬ ಗಳಿಗೆ ಮಾಹಿತಿ ನೀಡುವಂತೆ ಪೊಲೀಸ್ ಇಲಾಖೆ ಕೋರಿದೆ.

-ಕೆ.ಕೆ.ಎಸ್ ವೀರಾಜಪೇಟೆ