ಮಡಿಕೇರಿ, ಜೂ. ೩೦: ಇನ್ನರ್‌ವೀಲ್ ಕ್ಲಬ್ ವತಿಯಿಂದ ವೀರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ಅಗತ್ಯವಾದ ಔಷಧಿಗಳನ್ನು ನೀಡಲಾಯಿತು.

ವಾರಿಜ ಜಗದೀಶ್ ನಾಯಕತ್ವದ ಇನ್ನರ್‌ವೀಲ್ ೩೧೮ ವತಿಯಿಂದ ಮಡಿಕೇರಿಯ ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ದಿವ್ಯ ಮುತ್ತಣ್ಣ, ಕಾರ್ಯದರ್ಶಿ ಶ್ವೇತಾ ಪೂಣಚ್ಚ ೩೯ ಸಾವಿರ ಮೌಲ್ಯದ ಡಯಾಲಿಸೀಸ್ ಸಂಬAಧಿತ ಔಷಧಿಗಳನ್ನು ವೀರಾಜಪೇಟೆ ಸರ್ಕಾರಿ ಆಸ್ಪತ್ರೆಯ ಮುಖ್ಯಾಧಿಕಾರಿ ಡಾ. ಸಿಂಪಿ ಅವರಿಗೆ ಹಸ್ತಾಂತರಿಸಿದರು.