ಗೋಣಿಕೊಪ್ಪ ವರದಿ, ಜೂ. ೨೯: ಜಗಜೀವನ್‌ರಾಂ ಕೃಷಿ ಸಮ್ಮಾನ್ ಪುರಸ್ಕೃತ ಸೋಮೇಂಗಡ ಗಣೇಶ್ ತಿಮ್ಮಯ್ಯ ಮತ್ತು ಅವರ ಪತ್ನಿ ಸ್ವಾತಿ ಅವರನ್ನು ಗೋಣಿಕೊಪ್ಪ ರೋಟರಿ ಕ್ಲಬ್ ಮತ್ತು ರೋಟರಿ ಜಿಲ್ಲೆ ವತಿಯಿಂದ ವರ್ಚುವಲ್ ಕಾರ್ಯಕ್ರಮದ ಮೂಲಕ ಸನ್ಮಾನಿಸಲಾಯಿತು.

ಶನಿವಾರ ಅಭಯ ವರ್ಚುವಲ್ ಕಾರ್ಯಕ್ರಮದಡಿ ಮಂಗಳೂರು ಮತ್ತು ಗೋಣಿಕೊಪ್ಪ ಕ್ಲಬ್ ವತಿಯಿಂದ ವಿಶೇಷ ರೀತಿಯಲ್ಲಿ ಗೌರವಿಸಿದರು. ಗಣೇಶ್ ತಿಮ್ಮಯ್ಯ ಅವರ ನಿವಾಸದಲ್ಲಿ ಸಹಾಯಕ ಗರ‍್ನರ್ ಬಿ.ಬಿ. ಮಾದಪ್ಪ, ಗೋಣಿಕೊಪ್ಪ ರೋಟರಿ ಕ್ಲಬ್ ಅಧ್ಯಕ್ಷೆ ಮೂಕಳೇರ ಬೀಟಾ ಲಕ್ಷö್ಮಣ್, ಕಾರ್ಯದರ್ಶಿ ಕಳ್ಳಿಚಂಡ ಮುತ್ತಪ್ಪ ಗೌರವಿಸಿದರು. ನಂತರ ಮಂಗಳೂರು ರೋಟರಿ ಜಿಲ್ಲೆ ವತಿಯಿಂದ ಅಭಯ ವರ್ಚುವಲ್ ಕಾರ್ಯಕ್ರಮದಲ್ಲಿ ಪದಾಧಿಕಾರಿಗಳು ವೀಕ್ಷಿಸಿದರು. ರೋಟರಿ ಜಿಲ್ಲಾ ಗವರ್ನರ್ ಎಂ. ರಂಗನಾಥ್ ಭಟ್ ಸೇರಿದಂತೆ ಇತರರು ಇದ್ದರು.