ಸೋಮವಾರಪೇಟೆ, ಜೂ. ೨೮: ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ೧೧ನೇ ವಾರ್ಡ್ಗೆ ಒಳಪಟ್ಟ ಲೋರ‍್ಸ್ ಕಾಲೋನಿ ಇದೀಗ ಹೆಚ್ಚಿನ ಮೂಲಭೂತ ಸೌಕರ್ಯಗಳನ್ನು ಕಾಣುತ್ತಿದೆ.

ಹಲವು ದಶಕಗಳ ನಂತರ ಭರಪೂರ ಸೌಕರ್ಯ ಈ ಕಾಲೋನಿಗೆ ಹರಿದುಬರುತ್ತಿದ್ದು, ಪಟ್ಟಣ ಪಂಚಾಯಿತಿ ವತಿಯಿಂದ ಅನೇಕ ಕಾಮಗಾರಿಗಳನ್ನು ನಿರ್ವಹಿಸಲಾಗಿದೆ.

ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಮೊದಲೆಲ್ಲಾ ಲೋರ‍್ಸ್ ಕಾಲೋನಿ ಎಂದರೆ ಮೂಗು ಮುರಿಯುತ್ತಿದ್ದವರು ಇದೀಗ ಮೂಗಿನ ಮೇಲೆ ಬೆರಳಿಟ್ಟು ನೋಡು ವಂತೆ ಕಾಲೋನಿ ಬದಲಾಗುತ್ತಿದೆ. ಬಹುತೇಕ ಕೂಲಿ ಕಾರ್ಮಿಕ ಕುಟುಂಬಗಳೇ ನೆಲೆಸಿರುವ ಇಲ್ಲಿ ಪಟ್ಟಣ ಪಂಚಾಯಿತಿಯಿAದ ಲಕ್ಷಾಂತರ ವೆಚ್ಚದ ಕಾಮಗಾರಿ ನಡೆಯುತ್ತಿದ್ದು, ಬಹುತೇಕ ಕಾಮಗಾರಿ ಮುಕ್ತಾಯಗೊಂಡಿದೆ.

೩೦ಕ್ಕೂ ಅಧಿಕ ಕುಟುಂಬಗಳು ನೆಲೆಸಿರುವ ಲೋರ‍್ಸ್ ಕಾಲೋನಿ ಯಲ್ಲಿ ಸಣ್ಣಪುಟ್ಟ ಮನೆಗಳಿದ್ದು, ಎಲ್ಲವೂ ಕಿಷ್ಕಿಂಧೆಯAತಹ ಸ್ಥಳದಲ್ಲಿವೆ. ಇದರಿಂದಾಗಿ ಸಮರ್ಪಕ ರಸ್ತೆಯೂ ಇಲ್ಲ.

ಇದ್ದ ಸಣ್ಣ ರಸ್ತೆಯಲ್ಲಿ ಆಟೋ ಬಿಟ್ಟರೆ ನಾಲ್ಕುಚಕ್ರದ ವಾಹನಗಳು ತೆರಳಲು ಸಾಧ್ಯವಿಲ್ಲ. ರಸ್ತೆ ಅಗಲೀಕರಣ ಮಾಡಿದರೆ ಲೋರ‍್ಸ್ ಕಾಲೋನಿಯೂ ಇರುವುದಿಲ್ಲ.

ಇಂಟರ್‌ಲಾಕ್: ಇಂತಹ ಪರಿಸ್ಥಿತಿಯಲ್ಲಿ ಕೆಲ ದಶಕಗಳ ಹಿಂದೆ ನಡೆದಾಡುವ ಮಾರ್ಗಕ್ಕೆ ಚಪ್ಪಡಿ ಕಲ್ಲುಗಳನ್ನು ಅಳವಡಿಸಲಾಗಿತ್ತು. ಇದೇ ರಸ್ತೆಯಾಗಿ ಬಳಕೆಯಾಗುತ್ತಿತ್ತು. ಕಲ್ಲುಗಳು ಸಮವಾಗಿ ಜೋಡಿಸದ ಹಿನ್ನೆಲೆ ಮಕ್ಕಳು, ವೃದ್ಧರು ಬಿದ್ದು ಗಾಯಮಾಡಿಕೊಳ್ಳುತ್ತಿದ್ದರು. ಇದೀಗ ಚಪ್ಪಡಿ ಕಲ್ಲುಗಳನ್ನು ತೆರವುಗೊಳಿಸಿ ೨ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಇಂಟರ್‌ಲಾಕ್ ಹಾಕಲಾಗಿದ್ದು, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

ರಸ್ತೆ - ಚರಂಡಿ: ಕಾಲೋನಿಯೊಳಗೆ ಸ್ಥಳಾವಕಾಶ ಇರುವ ಕಡೆಗಳಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ರೂ. ೩ ಲಕ್ಷ ವೆಚ್ಚದಲ್ಲಿ ಬಾಬು ಅವರ ಮನೆಯಿಂದ ಬೆನ್ನಿ ಅವರ ಮನೆವರೆಗೆ ಸಿಮೆಂಟ್ ರಸ್ತೆ ನಿರ್ಮಾಣಗೊಂಡಿದೆ. ಇದರೊಂದಿಗೆ ಕೆಂಚಾAಬ ಹರೀಶ್ ಅವರ ಮನೆವರೆಗೆ ಚರಂಡಿ ನಿರ್ಮಿಸಿ, ಅದರ ಮೇಲೆ ಸ್ಲಾö್ಯಬ್ ಹಾಕಲಾಗಿದ್ದು, ನಡೆದಾಡಲು ಅನುಕೂಲ ಕಲ್ಪಿಸಲಾಗಿದೆ.

ರಾಜಕಾಲುವೆ: ಕಾಲೋನಿಯ ಹಿಂಭಾಗದಲ್ಲಿರುವ ರಾಜಕಾಲುವೆಯ ಹೂಳೆತ್ತುವ ಮೂಲಕ ಕೊಳಚೆ ನೀರಿನ ಸುಗಮ ಹರಿಯುವಿಕೆಗೆ ಅವಕಾಶ ಕಲ್ಪಿಸಲಾಗಿದೆ. ರಾಜಕಾಲುವೆ ಬಹುತೇಕ ಒತ್ತುವರಿಯಾಗಿದ್ದು, ಈ ಪ್ರದೇಶದಲ್ಲೂ ಮನೆಗಳು ನಿರ್ಮಾಣವಾಗಿ ದಶಕಗಳೇ ಕಳೆದಿವೆ. ರಾಜಕಾಲುವೆಯಲ್ಲಿ ತ್ಯಾಜ್ಯ ಸಂಗ್ರಹವಾಗಿ ಇಡೀ ಪ್ರದೇಶ ದುರ್ನಾತ ಬೀರುತ್ತಿತ್ತು.

ಇದರೊಂದಿಗೆ ಕ್ರಿಮಿಕೀಟಗಳ ಆವಾಸ ಸ್ಥಾನವಾಗಿ ಸಾಂಕ್ರಾಮಿಕ ರೋಗರುಜಿನಗಳಿಗೆ ಕಾರಣವಾಗುತ್ತಿತ್ತು. ಇದೀಗ ರಾಜಕಾಲುವೆಯ ದುರಸ್ತಿ ಕಾರ್ಯ ನಡೆದಿದೆ.

ಕಾಲೋನಿಗೆ ಒತ್ತಿಕೊಂಡAತೆ ಇರುವ ಸುಮಾರು ೮೦೦ ಮೀಟರ್ ದೂರದವರೆಗೆ ರಾಜಕಾಲುವೆಯನ್ನು ಜೆಸಿಬಿ, ಹಿಟಾಚಿ ಯಂತ್ರದ ಮೂಲಕ ದುರಸ್ತಿಗೊಳಿಸಲಾಗಿದೆ.

ರಾಜ ಕಾಲುವೆಯಲ್ಲಿ ಸಂಗ್ರಹವಾಗಿದ್ದ ತ್ಯಾಜ್ಯವನ್ನು ತೆಗೆದು ನೀರಿನ ಸರಾಗ ಹರಿಯುವಿಕೆಗೆ ಅನುವು ಮಾಡಿಕೊಡಲಾಗಿದೆ.

ನೀರಿನ ಸೌಕರ್ಯ: ಲೋರ‍್ಸ್ ಕಾಲೋನಿಯ ಪ್ರತಿ ಮನೆಗಳಿಗೂ ಇದೀಗ ಪಂಚಾಯಿತಿಯಿAದ ಕುಡಿಯುವ ನೀರಿನ ಸಂಪರ್ಕ ಒದಗಿಸಲಾಗಿದೆ. ಬಹುತೇಕ ಮಂದಿ ಮನೆಗೆ ನೀರಿನ ಸೌಕರ್ಯ ಪಡೆದಿದ್ದಾರೆ.

ನೀರಿನ ತೆರಿಗೆ ಬಾಕಿ ಉಳಿಸಿಕೊಂಡಿರುವ ಮನೆಗಳ ಬಳಿಯೂ ಪೈಪ್‌ಲೈನ್ ಹಾಕ ಲಾಗಿದ್ದು, ಬಾಕಿ ಉಳಿಸಿಕೊಂಡಿರುವ ತೆರಿಗೆ ಕಟ್ಟಿದ ನಂತರ ಮನೆಗೆ ಸಂಪರ್ಕ ನೀಡಲು ಸಿದ್ಧತೆ ನಡೆದಿದೆ. ಸದ್ಯಕ್ಕೆ ಕಾಲೋನಿಯ ೫ ಕಡೆಗಳಲ್ಲಿ ಸಾರ್ವಜನಿಕ ನೀರಿನ ಟ್ಯಾಪ್ ಅಳವಡಿಸಲಾಗಿದೆ.

ಕಾಲೋನಿಯಲ್ಲಿ ೨ ವಿದ್ಯುತ್ ಕಂಬಗಳನ್ನು ಬದಲಾಯಿಸಿದ್ದು, ಬೀದಿ ದೀಪದ ವ್ಯವಸ್ಥೆ ಕಲ್ಪಿಸಲಾಗಿದೆ. ಮೂಲಭೂತ ಸೌಕರ್ಯಗಳನ್ನು ಇನ್ನಷ್ಟು ಸುಧಾರಿ ಸುವ ನಿಟ್ಟಿನಲ್ಲಿ ಪಟ್ಟಣ ಪಂಚಾ ಯಿತಿ ಕ್ರಮ ವಹಿಸುತ್ತಿದೆ.

- ವಿಜಯ್ ಹಾನಗಲ್