ಮಡಿಕೇರಿ, ಜೂ. ೨೮: ಕೋವಿಡ್ ಬಿಗಿನಿಯಮ ಉಲ್ಲಂಘಿಸಿ ಪ್ರವಾಸಿಗರಿಗೆ ಆಶ್ರಯ ಕಲ್ಪಿಸಿದ್ದ ಹೋಂಸ್ಟೇ ವಿರುದ್ಧ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರದ ಮುತ್ತಪ್ಪ ದೇವಾಲಯ ಸಮೀಪದ ಕೂರ್ಗ್ ಕ್ಯಾಬಿನ್ ಹಾಲಿಡೇ ಹೋಂಸ್ಟೆಯಲ್ಲಿ ಪ್ರವಾಸಿಗರು ತಂಗಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕೊಡಗು ರಕ್ಷಣಾ ವೇದಿಕೆ ಅಧ್ಯಕ್ಷ ಪವನ್ ಪೆಮ್ಮಯ್ಯ ಹಾಗೂ ಸಂಗಡಿಗರು
(ಮೊದಲ ಪುಟದಿಂದ) ಪ್ರವಾಸಿಗರ ಸೋಗಿನಲ್ಲಿ ಹೋಗಿದ್ದಾರೆ. ವಿಚಾರಿಸುವಾಗ ಹೋಂಸ್ಟೇ ಪ್ರವಾಸಿಗರಿಗೆ ಹೋಂಸ್ಟೇನಲ್ಲಿ ಅವಕಾಶ ಕಲ್ಪಿಸುತ್ತಿರುವುದು ತಿಳಿದು ಬಂದಿದೆ.
ಕೂಡಲೇ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಮಡಿಕೇರಿ ನಗರ ಠಾಣಾ ಪೊಲೀಸರು ಹೋಂಸ್ಟೇಗೆ ದಾಳಿ ಮಾಡಿದ್ದಾರೆ. ಈ ಸಂದರ್ಭ ಮೂಲತಃ ಪಂಜಾಬ್‌ನ, ಮೈಸೂರಿನಲ್ಲಿ ನೆಲೆಸಿದ್ದ ನಾಲ್ವರು ಪ್ರವಾಸಿಗರು ಹೋಂಸ್ಟೆಯಲ್ಲಿ ತಂಗಿದ್ದುದು ಪತ್ತೆಯಾಗಿದೆ. ಈ ಹಿನ್ನೆಲೆ ಹೋಂಸ್ಟೆಗೆ ಸೀಲ್ ಹಾಕುವುದರೊಂದಿಗೆ ಮಾಲೀಕ ಪೊನ್ನಪ್ಪ ಅವರ ಮೇಲೆ ಪ್ರಕರಣ ದಾಖಲಿಸಿರುವ ಪೊಲೀಸರು, ಮುಂದಿನ ಕ್ರಮ ಕೈಗೊಂಡಿದ್ದಾರೆ.