ಕೂಡಿಗೆ, ಜೂ. ೨೮: ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದ ಪ್ರಥಮ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಶಕ್ತಿ ಕೇಂದ್ರದ ವೃದ್ಧಾಶ್ರಮದಲ್ಲಿ ಅನ್ನದಾನ ಕಾರ್ಯಕ್ರಮ ಹಾಗೂ ಗಿಡ ನೆಡುವ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ಧರ್ಮಸ್ಥಳ ಸಂಘದ ವತಿಯಿಂದ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕರಿಗೆ ಆರೋಗ್ಯ ರಕ್ಷಾ ಕಾರ್ಡ್ ಹಾಗೂ ಮಾಸ್ಕನ್ನು ಕೂಡುಮಂಗಳೂರು ಗ್ರಾ.ಪಂ. ಸದಸ್ಯ ಎಲ್. ಗಿರೀಶ್ ಅವರು ವಿತರಿಸಿದರು.
ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕ ಚಿನ್ನಪ್ಪ ಹಾಜರಿದ್ದರು. ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡವರನ್ನು ಸಂಘದ ಸಂಯೋಜಕರಾದ ಸಂಗೀತಾ ದಿನೇಶ್ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಯೋಜಕರಾದ ಸುಧಾ ನೀತಿಕುಮಾರ್, ಅನಿತಾ ಚಂದ್ರಶೇಖರ್, ಸೇವಾ ಪ್ರತಿನಿಧಿಗಳಾದ ಸುಮತಿ, ಅಕ್ಷತಾ, ವಿಪತ್ತು ನಿರ್ವಹಣಾ ದಳದ ಸ್ವಯಂ ಸೇವಕರಾದ ರಕ್ಷಿತ್, ರಾಜೇಶ್, ಶ್ರೀಧರ್ ಹಾಗೂ ಇತರರು ಹಾಜರಿದ್ದರು.