ಮಡಿಕೇರಿ, ಜೂ. ೨೮: ಕಳೆದ ೧೦ ದಿನಗಳ ಹಿಂದೆ ಸುರಿದ ಭಾರೀ ಮಳೆಯ ಕಾರಣದಿಂದ ಬಲಮುರಿಯಲ್ಲಿ ಕಾವೇರಿ ನದಿ ತುಂಬಿ ಹರಿದು ಸ್ಥಳೀಯರು ಆತಂಕಕ್ಕೀಡಾಗಿದ್ದರು. ಆದರೆ ಇದೀಗ ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ನದಿ ನೀರಿನ ಮಟ್ಟದಲ್ಲಿ ಇಳಿಕೆಯಾಗಿದ್ದು, ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಈ ಹಿಂದೆ ಕಾವೇರಿ ನದಿ ಪ್ರವಾಹದ ಅರಿವಿಲ್ಲದೆ ಸ್ನಾನ ಘಟ್ಟದಲ್ಲಿ ಇಳಿದರೆ ಅನಾಹುತ ಉಂಟಾಗುವ ಭೀತಿ ಮೂಡಿತ್ತು. ಆದರೆ, ಈಗ ನೀರಿನ ಮಟ್ಟ ಕಡಿಮೆಯಾಗಿರುವದರಿಂದ ನೆಮ್ಮದಿ ತರಿಸಿದೆ. ಮತ್ತೆ ಮಳೆ ಆರಂಭಗೊAಡರೆ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ಸ್ಥಳೀಯರು ಅಭಿಪ್ರಾಯಿಸಿದ್ದಾರೆ.