ಕೂಡಿಗೆ, ಜೂ. ೨೮: ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ಕುಡಿಯುವ ನೀರಿನ ಯೋಜನೆಯಾದ ಜಲ ಜೀವನ್ ಯೋಜನೆಯ ಪ್ರಗತಿಗೆ ಸೋಮವಾರಪೇಟೆ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ಸಹಕಾರ ಮುಖ್ಯವಾಗಿರುತ್ತದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಜಯಣ್ಣ ಮನವಿ ಮಾಡಿದ್ದಾರೆ.

ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಯೋಜನೆಯ ಕಾಮಗಾರಿಯು ಆರಂಭವಾಗಿದೆ. ಕಾಮಗಾರಿಯಲ್ಲಿ ಪ್ರತಿ ಗ್ರಾಮದ ನಿವಾಸಿಯ ಮನೆ ಮನೆಗೆ ಪೈಪ್‌ಲೈನ್ ಅಳವಡಿಕೆ ಮತ್ತು ಅದಕ್ಕೆ ಮೀಟರ್ ಜೋಡಣೆ, ಆಯಾ ಗ್ರಾಮದಲ್ಲಿ ಬೃಹತ್ ನೀರಿನ ಸಂಗ್ರಹದ ಟ್ಯಾಂಕ್ ಸೇರಿದಂತೆ ವಿವಿಧ ಕಾಮಗಾರಿಗಳು ನಡೆಯುತ್ತಿವೆ. ಇವುಗಳ ನಿರ್ವಹಣಾ ವೆಚ್ಚಗಳನ್ನು ಗ್ರಾಮ ಪಂಚಾಯಿತಿ ಸ್ವಲ್ಪ ಪ್ರಮಾಣದಲ್ಲಿ ಬರಿಸಲು ಸಹಕಾರ ನೀಡಬೇಕೆಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ. ಇದಕ್ಕೆ ಗ್ರಾಮಸ್ಥರ ಮತ್ತು ಆಡಳಿತ ಮಂಡಳಿಯ ಸಹಕಾರ ಮುಖ್ಯ ಎನ್ನುತ್ತಾರೆ.

ಜಲಜೀವನ್ ಯೋಜನೆ ಕಾಮಗಾರಿಯನ್ನು ಹೆಬ್ಬಾಲೆ ಗ್ರಾಮದಲ್ಲಿ ವೀಕ್ಷಣೆ ಮಾಡಿ ಮಾತನಾಡಿದರು. ಈ ಸಂದರ್ಭ ಅಭಿವೃದ್ಧಿ ಅಧಿಕಾರಿ ರಾಕೇಶ್ ಮತ್ತು ಸಿಬ್ಬಂದಿ ಇದ್ದರು.